IPL Playoffs Prediction: ಐಪಿಎಲ್‌ ಪ್ಲೇ ಆಫ್‌ ರೇಸ್‌ನಲ್ಲಿ 7 ತಂಡಗಳು: ಆರ್‌ಸಿಬಿ ಭವಿಷ್ಯ ಹೇಗಿದೆ?

IPL 2025 Playoffs Prediction: ಭಾರತ-ಪಾಕ್‌ ನಡುವೆ ಪರಿಸ್ಥಿತಿ ಉಗ್ವಿಗ್ನಗೊಂಡ ಕಾರಣ ಐಪಿಎಲ್‌ 2025 ಟೂರ್ನಿಯನ್ನು ಅರ್ಧಕ್ಕೆ ರದ್ದಪಡಿಸಿ ಮುಂದೂಡಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಮತ್ತೆ ಮುಂದುವರೆಸಲು ಹೊಸ ವೇಳಪಟ್ಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲೂ, ಪ್ಲೇ ಆಫ್‌ ರೇಸ್‌ನಲ್ಲಿ 7 ತಂಡಗಳು ಇವೆ. ಹಾಗಾದ್ರೆ ಈ ಸ್ಥಾನ ಗಿಟ್ಟಿಸಿಕೊಳ್ಳ ಆರ್‌ಸಿಬಿ ಇನ್ನೆಷ್ಟು ಪಂದ್ಯಗಳನ್ನು ಗೆಲ್ಲಬೇಕು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಇದುವರೆಗೂ ಆರ್‌ಸಿಬಿ ಸೇರಿದಂತೆ ಉಳಿದ ತಂಡಗಳು ಎಷ್ಟು ಪಂದ್ಯಗಳನ್ನು ಆಡಿ ಎಷ್ಟು ಗೆದ್ದಿವೆ? ಪಾಯಿಂಟ್ಸ್‌ ಟೇಬಲ್‌ನಲ್ಲಿ ಸ್ಥಾನ ಏನು ಹಾಗೂ ಆರೆಂಜ್‌, ಪರ್ಪಲ್‌ ಕ್ಯಾಪ್‌ ಯಾರ ಬಳಿಯಿವೆ ಹಾಗೂ ಈ ರೇಸ್‌ನಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

IPL 2025 Playoffs Competition by 7 teams Know RCB s position And Orange Cap Purple Cap Standings

ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್‌ ಅಂದ್ರೆ ಅದು ಇಂಡಿಯನ್‌ ಪ್ರೀಮಿಯರ್ ಲೀಗ್‌ (IPL) ಆದರೆ. ಅದರಲ್ಲೂ ಐಪಿಎಲ್‌ನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ಆರ್‌ಸಿಬಿ ಆಗಿದ್ದು, ಪಾಯಿಂಟ್ಸ್‌ ಟೇಬಲ್‌ನಲ್ಲಿ ಊಹಿಸಲಾರದ ಸ್ಥಾನಕ್ಕೆ ಬಂದು ನಿಂತಿದೆ. ಅಷ್ಟರ ಮಟ್ಟಿಗೆ ಈ ಬಾರಿ ಉತ್ತಮ ಪ್ರದರ್ಶನ ತೋರುತ್ತಾ, ಸ್ಟ್ರಾಂಗ್‌ ಟೀಂಗಳನ್ನು ಬಗ್ಗುಬಡಿದು ಮೇಲೇರಿದೆ. ಇದನ್ನು ಒಳಗೊಂಡಂತೆ ಸದ್ಯ ಇದೀಗ 7 ತಂಡಗಳು ಪ್ಲೇ ಆಫ್‌ ರೇಸ್‌ನಲ್ಲಿವೆ.

ಪ್ಲೇ ಆಫ್‌ ರೇಸ್‌ 7 ತಂಡಗಳು

* ಗುಜರಾತ್ ಟೈಟಾನ್ಸ್‌
* ರಾಯಲ್‌ ಚಾಲೆಂಜರ್ಸ್ ಬೆಂಗಳೂರು
* ಪಂಜಾಬ್ ಕಿಂಗ್ಸ್‌
* ಮುಂಬೈ ಇಂಡಿಯನ್ಸ್
* ಡೆಲ್ಲಿ ಕ್ಯಾಪಿಟಲ್ಸ್‌
* ಕೊಲ್ಕತ್ತಾ ನೈಟ್ ರೈಡರ್ಸ್
* ಲಕ್ನೋ ಸೂಪರ್ ಜೈಂಟ್ಸ್‌

* ಗುಜರಾತ್ ಟೈಟಾನ್ಸ್: ಇದುವರೆದೂ ಆಡಿರುವ 11 ಪಂದ್ಯಗಳಲ್ಲಿ ಗುಜರಾತ್ ಟೈಟಾನ್ಸ್‌ ತಂಡವು 3ರಲ್ಲಿ ಸೋತು ಉಳಿದ 8 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳನ್ನು ಪಡೆಯುವ ಮೂಲಕ ಅಗ್ರ ಸ್ಥಾನದಲ್ಲಿದೆ. ಮುಂದಿನ ಪಂದ್ಯಗಳು ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್‌, ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಸೆಣಸಬೇಕಿದೆ. ಇವುಗಳಲ್ಲಿ ಒಂದು ಪಂದ್ಯ ಗೆದ್ದರೆ ಪ್ಲೇ ಆಫ್‌ ಪ್ರವೇಶ ಮಾಡಲಿದೆ.

* ಆರ್‌ಸಿಬಿ: ಆಡಿರುವ 11 ಪಂದ್ಯಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೂರರಲ್ಲಿ ಸೋತು ಉಳಿದ 8 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳನ್ನು ಪಡೆಯುವ ಮೂಲಕ 2ನೇ ಸ್ಥಾನದಲ್ಲಿದೆ. ಆದರೂ ಪ್ಲೇ ಆಫ್‌ಗೇರಲು ಮೂರರಲ್ಲಿ ಇನ್ನೊಂದು ಪಂದ್ಯವನ್ನು ಗೆಲ್ಲಲ್ಲೇಬೇಕಿದೆ. ಯಾಕಂದ್ರೆ ರನ್‌ ರೇಟ್‌ ಕೆಳಗಿರುವ ತಂಡಕ್ಕಿಂತ ಕಡಿಮೆ ಇದೆ.

ಅಲ್ಲದೆ, ಉಳಿದ ತಂಡಗಳಿಗೂ ಇನ್ನೂ ಎರಡ್ಮೂರು ಪಂದ್ಯಗಳು ಬಾಕಿ ಇವೆ. ಇವುಗಳಲ್ಲಿ ಆರ್‌ಸಿಬಿ ಪ್ಲೇ ಆಫ್‌ ಭವಿಷ್ಯ ನಿರ್ಧಾರವಾಗಲಿದೆ. ಒಂದು ವೇಳೆ ಅವುಗಳಲ್ಲಿ ಎಲ್ಲಾ ಪಂದ್ಯ ಗೆದ್ದರೆ, ಆರ್‌ಸಿಬಿಗೆ ಕಷ್ಟ ಆಗಬಹುದು. ಆದ್ದರಿಂದ ಉತ್ತಮ ರನ್‌ ರೇಟ್‌ನ ಮೂಲಕ ಇನ್ನೊಂದು ಪಂದ್ಯ ಗೆದ್ದು18 ಅಂಕಗಳನ್ನು ಪಡೆದರೆ ಪ್ಲೇ ಆಫ್‌ ಹಾದಿ ಮತ್ತಷ್ಟು ಸುಗಮ ಆಗುವುದರಲ್ಲಿ ಎರಡು ಮಾತಿಲ್ಲ. ಹೊಸ ವೇಳಾಪಟ್ಟಿಯ ಪ್ರಕಾರಮೇ 17ರಂದು ಆರ್‌ಸಿಬಿ ಹಾಗೂ ಕೆಕೆಆರ್‌ ನಡುವೆ ಮೊದಲ ಪಂದ್ಯ ನಡೆಯಲಿದೆ. ಮುಂದಿನ ಪಂದ್ಯಗಳು ಕೆಕೆಆರ್, ಎಸ್‌ಆರ್‌ಎಚ್‌ ಹಾಗೂ ಎಲ್‌ಎಸ್‌ಜಿ ವಿರುದ್ಧ ಇವೆ.

* ಪಂಜಾಬ್ ಕಿಂಗ್ಸ್‌: ಆಡಿರುವ 11 ಪಂದ್ಯಗಳಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವು 3ಲ್ಲಿ ಸೋತು 7 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 15 ಅಂಕಗಳನ್ನು ಪಡೆಯುವ ಮೂಲಕ 3ನೇ ಸ್ಥಾನದಲ್ಲಿದೆ. ಇನ್ನು ಮೂರು ಪಂದ್ಯಗಳು ಉಳಿದಿದ್ದು, ಇದರಲ್ಲಿ ಕನಿಷ್ಠ ಎರಡರಲ್ಲಿ ಗೆದ್ದರೆ, ಪ್ಲೇ ಆಫ್‌ಗೆ ಎಂಟ್ರಿ ಕೊಡಬಹುದು. ಮುಂದಿನ ಪಂದ್ಯಗಳನ್ನು ಆರ್‌ಆರ್, ಡಿಸಿ, ಮುಂಬೈ ವಿರುದ್ಧ ಆಡಬೇಕಿದೆ.

* ಮುಂಬೈ ಇಂಡಿಯನ್ಸ್‌: ಆಡಿರುವ 12 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್‌ ತಂಡವು 5ರಲ್ಲಿ ಸೋತು ಉಳಿದ 7 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 14 ಅಂಕಗಳನ್ನು ಪಡೆಯುವ ಮೂಲಕ 4ನೇ ಸ್ಥಾನದಲ್ಲಿದೆ. ಇನ್ನೂ ಎರಡು ಪಂದ್ಯಗಳು ಉಳಿದಿದ್ದು, ಆ ಎರಡರಲ್ಲೂ ಗೆದ್ದರೆ ಮಾತ್ರ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ. ಮುಂದಿನ ಪಂದ್ಯಗಳನ್ನು ಡೆಲ್ಲಿ ಹಾಗೂ ಪಂಜಾಬ್‌ ವಿರುದ್ಧ ಆಡಬೇಕಿದೆ.

* ಡೆಲ್ಲಿ ಕ್ಯಾಪಿಟಲ್ಸ್‌: ಇದುವರೆದೂ ಆಡಿರುವ 11 ಪಂದ್ಯಗಳಲ್ಲಿ ಡೆಲ್ಲಿ ಕ್ಯಾಪಿಟಲ್ಟ್‌ ತಂಡವು 4ರಲ್ಲಿ ಸೋತು ಉಳಿದ 6ರಲ್ಲಿ ಗೆದ್ದು 13 ಅಂಕಗಳನ್ನು ಪಡೆಯುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 5ನೇ ಸ್ಥಾನದಲ್ಲಿದೆ. ಇನ್ನೂ ಉಳಿದಿರುವ ಮೂರರಲ್ಲೂ ಗೆದ್ದರೆ ಪ್ಲೇ ಆಫ್‌ ಪ್ರವೇಶಕ್ಕೆ ಅವಕಾಶ ಸಿಕ್ಕರೂ ಸಿಗಬಹುದು. ಮುಂದಿನ ಪಂದ್ಯಗಳನ್ನು ಜಿಟಿ, ಮುಂಬೈ, ಪಂಜಾಬ್‌ ಕಿಂಗ್ಸ್‌ ವಿರುದ್ಧ ಆಡಬೇಕಿದೆ.

* ಕೆಕೆಆರ್: ಆಡಿರುವ 12 ಪಂದ್ಯಗಳಲ್ಲಿ ಕೊಲ್ಕಾತ್ತಾ ನೈಟ್‌ ರೈಡರ್ಸ್‌ ತಂಡವು 5ಲ್ಲಿ ಸೋತು ಉಳಿದ 6 ಪಂದ್ಯಗಳಲ್ಲಿ ಗೆದ್ದು ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ 11 ಅಂಕಗಳನ್ನು ಪಡೆಯುವ 6ನೇ ಸ್ಥಾನದಲ್ಲಿದೆ. ಇನ್ನು ಎರಡು ಪಂದ್ಯಗಳಲ್ಲಿ ಎರಡನ್ನು ಗೆದ್ದರೂ ಪ್ಲೇ ಆಫ್‌ ಪ್ರವೇಶ ಕಷ್ಟವಾಗಿದ್ದು, ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. ಮುಂದಿನ ಪಂದ್ಯಗಳನ್ನು ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್‌ ವಿರುದ್ಧ ಆಡಬೇಕಿದೆ. ಈ ಎರಡು ಗೆದ್ದರೂ ಪ್ಲೇ ಆಫ್‌ ಪ್ರವೇಶ ತುಸು ಕಷ್ಟ ಅಂತಲೇ ಹೇಳಬಹುದು.

* ಎಲ್‌ಎಸ್‌ಜಿ: ಆಡಿರುವ 11 ಪಂದ್ಯಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ತಂಡವು 6ರಲ್ಲಿ ಸೋತು ಉಳಿದ 5 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 10 ಅಂಕಗಳನ್ನು ಪಡೆಯುವ ಮೂಲಕ 7ನೇ ಸ್ಥಾನದಲ್ಲಿದೆ. ಇನ್ನೂ ಮೂರು ಪಂದ್ಯಗಳು ಬಾಕಿಯಿದ್ದು, ಇವುಗಳನ್ನಲ್ಲಾ ಗೆದ್ದರೂ ಪ್ಲೇ ಆಫ್‌ ಪ್ರವೇಶ ತುಸು ಕಷ್ಟವಾಗಿದೆ. ಮುಂದಿನ ಪಂದ್ಯಗಳನ್ನು ಎಸ್‌ಆರ್‌ಎಚ್‌, ಗುಜರಾತ್ ಟೈಟಾನ್ಸ್‌ ಹಾಗೂ ಆರ್‌ಸಿಬಿ ವಿರುದ್ಧ ಆಡಬೇಕಿದೆ.

ಇನ್ನುಳಿದಂತೆ ಸರ್ ಸನ್‌ ರೈಸರ್ಸ್‌ ಹೈದರಾಬಾದ್‌, ರಾಜಸ್ಥಾನ್‌ ರಾಯಲ್ಸ್‌, ಚೆನ್ನೈ ಸೂಪರ್ ಕಿಂಗ್ಸ್‌ ತಂಡಗಳು ಬಹುತೇಕ ಟೂರ್ನಿಯಿಂದ ಹೊರಬಿದ್ದಿದ್ದು, ಈ ಮೂಲಕ ಪ್ಲೇ ಆಫ್‌ ಪ್ರವೇಶದಿಂದ ವಂಚಿತ ಆಗಿವೆ ಅಂತಲೇ ಹೇಳಬಹದು. ಒಟ್ಟಿನಲ್ಲಿ ಆರ್‌ಸಿಬಿ, ಗುಜರಾಟ್‌ ಟೈಟಾನ್ಸ್ ಹೊರತುಪಡಿಸಿ ಮತ್ತೆರಡು ಯಾವ ತಂಡಗಳು ಪ್ಲೇ ಆಫ್‌ ಪ್ರವೇಶ ಪಡೆಯಲಿವೆ ಎಂದು ಕಾದುನೋಡಬೇಕಿದೆ.

ಪಾಯಿಂಟ್ಸ್‌ ಟೇಬಲ್‌ನಲ್ಲಿ ಯಾವ ತಂಡ ಎಷ್ಟನೇ ಸ್ಥಾನ?

1. ಗುಜರಾತ್ ಟೈಟಾನ್ಸ್‌
2. ರಾಯಲ್‌ ಚಾಲೆಂಜರ್ಸ್ ಬೆಂಗಳೂರು
3. ಪಂಜಾಬ್‌ ಕಿಂಗ್ಸ್‌
4. ಮುಂಬೈ ಇಂಡಿಯನ್ಸ್‌
5. ಡೆಲ್ಲಿ ಕ್ಯಾಪಿಟಲ್ಸ್‌
6. ಕೊಲ್ಕತ್ತಾ ನೈಟ್ ರೈಡರ್ಸ್‌
7. ಲಕ್ನೋ ಸೂಪರ್ ಜೈಂಟ್ಸ್‌
8. ಸನ್‌ ರೈಸರ್ಸ್‌ ಹೈದರಾಬಾದ್‌
9. ರಾಜಸ್ಥಾನ್‌ ರಾಯಲ್ಸ್‌
10. ಚೆನ್ನೈ ಸೂಪರ್ ಕಿಂಗ್ಸ್‌

ಇನ್ನು ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡವು ಗೆಲುವಿನ ಹಾದಿಯನ್ನು ಹಿಡಿದಿದ್ದು, ಟ್ರೋಫಿ ಗೆಲ್ಲುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಯಾಕಂದ್ರೆ ಇದುವರೆಗೂ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿದೆ. ಕಳೆದ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೇಲೇರುವ ಮೂಲಕ ಮೂಲಕ ಪ್ಲೇ ಆಫ್‌ ಪ್ರವೇಶದ ಹಾದಿಯನ್ನು ತುಸು ಸುಗಮಗೊಳಿಸಿಕೊಂಡಿದೆ.

Take a Poll

ಆರ್‌ಸಿಬಿಯು ತವರಿನಲ್ಲಿ ಮೂರು ಪಂದ್ಯಗಳನ್ನು ಸೋತಿದ್ದು, ಬಿಟ್ಟರೆ ಉಳಿದ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಎರಡು ತವರಿನಲ್ಲಿ ಗೆದ್ದರೆ, ಉಳಿದ ಆರು ಪಂದ್ಯಗಳನ್ನು ತವರಿನಂದಾಚೆ ಗೆದ್ದು ಬೀಗಿದೆ. ಇದೀಗ ಪ್ಲೇ ಆಫ್‌ ರೇಸ್‌ನಲ್ಲಿ ಗುಜರಾತ್ ಟೈಟಾನ್ಸ್‌, ರಾಯಲ್‌ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್‌, ಮುಂಬೈ ಇಂಡಿಯನ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಭಾರೀ ಪೈಪೋಟಿ ನಡೆಸುತ್ತಿವೆ. ಯಾಕಂದ್ರೆ ಈ ತಂಡಗಳಿಗೆ ಇನ್ನೂ ಎರಡ್ಮೂರು ಪಂದ್ಯಗಳು ಬಾಕಿಯಿವೆ.

ಆರೆಂಜ್‌ ಕ್ಯಾಪ್‌ ಯಾರ ಬಳಿ ಇದೆ?: ಈ ಆವೃತ್ತಿಯಲ್ಲಿ ಇಲ್ಲಿಯವರೆಗೂ ಆಡಿದ ಪಂದ್ಯಗಳಲ್ಲಿ ಅತೀ ಹೆಚ್ಚು ರನ್‌ ಗಳಿಸುವ ಮೂಲಕ ಮುಂಬೈ ಇಂಡಿಯನ್ಸ್‌ ತಂಡದ ಸೂರ್ಯಕುಮಾರ್ ಯಾದವ್‌ ಅಗ್ರ ಸ್ಥಾನದಲ್ಲಿದ್ದಾರೆ. ಅವರು 12 ಪಂದ್ಯಗಳಲ್ಲಿ 510 ರನ್ ಕಲೆ ಹಾಕಿದ್ದಾರೆ.

ಆರೆಂಜ್‌ ಕ್ಯಾಪ್‌ ರೇಸ್‌ನಲ್ಲಿ ವಿರಾಟ್‌ ಕೊಹ್ಲಿ

* ಮುಂಬೈ ಇಂಡಿಯನ್ಸ್‌ ತಂಡದ ಸೂರ್ಯಕುಮಾರ್ ಯಾದವ್‌: 510
* ಗುಜರಾಜ್‌ ಟೈಟಾನ್ಸ್ ತಂಡದ ಎಸ್‌.ಸುದರ್ಶನ್: 509
* ಗುಜರಾಜ್‌ ಟೈಟಾನ್ಸ್ ತಂಡದ ಶುಭ್ಮನ್‌ ಗಿಲ್‌: 508
* ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್‌ ಕೊಹ್ಲಿ: 505
* ಗುಜರಾತ್‌ ಟೈಟಾನ್ಸ್ ತಂಡದ ಜೋಶ್‌ ಬಟ್ಲರ್‌: 500

ಪರ್ಪಲ್ ಕ್ಯಾಪ್ ಯಾರ ಬಳಿ ಇದೆ?: ಗುಜರಾತ್‌ ಟೈಟಾನ್ಸ್ ತಂಡದ ಪ್ರಸಿದ್ಧ್‌ ಕೃಷ್ಣ ಅತೀ ಹೆಚ್ಚು ವಿಕೆಟ್‌ ಪಡೆದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದು, ಪರ್ಪಲ್‌ ಕ್ಯಾಪ್‌ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅವರು 20 ವಿಕೆಟ್ ಪಡೆದಿದ್ದಾರೆ.

ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಆರ್‌ಸಿಬಿ ಬೌಲರ್

* ಗುಜರಾತ್‌ ಟೈಟಾನ್ಸ್ ತಂಡದ ಪ್ರಸಿದ್ಧ್‌ ಕೃಷ್ಣ: 20 ವಿಕೆಟ್
* ಚೈನ್ನೈ ಸೂಪರ್ ಕಿಂಗ್ಸ್‌ ತಂಡದ ನೂರ್ ಅಹ್ಮದ್‌: 20 ವಿಕೆಟ್‌
* ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಜೋಶ್‌ ಹ್ಯಾಜಲ್‌ವುಡ್: 18 ವಿಕೆಟ್
* ಮುಂಬೈ ಇಂಡಿಯನ್ಸ್‌ ತಂಡದ ಟ್ರೆಂಟ್‌ ಬೋಲ್ಟ್‌: 18 ವಿಕೆಟ್
* ಕೊಲ್ಕತ್ತಾ ನೈಟ್‌ ರೈಡರ್ಸ್ ತಂಡದ ವರುಣ್‌ ಚಕ್ರವರ್ತಿ: 17 ವಿಕೆಟ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+