RCB Vs PBKS: ಪಂಜಾಬ್ ಕಿಂಗ್ಸ್‌ಗೆ ಆರ್‌ಸಿಬಿಯ ಈ ಬ್ಯಾಟರ್‌ನದ್ದೇ ಭಯವಂತೆ; ಪ್ಲೇಯಿಂಗ್ 11 ಹೀಗಿದೆ
IPL RCB Vs PBKS: ಐಪಿಎಲ್ 2025ರ 34ನೇ ಪಂದ್ಯ ಇಂದು (ಏಪ್ರಿಲ್ 18) ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಆರ್‌ಸಿಬಿಯು ತವರು ನೆಲದಲ್ಲಿ ಗೆದ್ದೇ ಗೆಲ್ಲಬೇಕೆಂಬ ಪಣ ತೊಟ್ಟಿದೆ. ಹಾಗಾದರೆ ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಇಂದಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಜೆ 7.30ಕ್ಕೆ ನಡೆಯಲಿದೆ. ಇದಕ್ಕೂ ಮೊದಲು ಅರ್ಧ ಗಂಟೆ ಮುಂಚುತವಾಗಿ ಅಂದರೆ ಸಂಜೆ 7 ಗಂಟೆಗೆ ಟಾಸ್ ಆಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈವರೆಗೂ ಆಡಿರುವ 6ರಲ್ಲಿ 4 ಪಂದ್ಯಗಳಲ್ಲಿ ಗೆದ್ದಿರುವುದು ಹೊರಗಡೆ ಮೈದಾನದಲ್ಲಿ. ಇನ್ನೆರಡು ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಲು ಕಂಡಿದೆ. ಇಂದು ಇದೇ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲಲ್ಲೇಬೇಕೆನ್ನುವ ಹಠದಲ್ಲಿದೆ.

ಇನ್ನೂ ನಾಲ್ಕು ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ 8 ಅಂಕಗಳೊಂದಿಗೆ ಆರ್‌ಸಿಬಿ ಮೂರನೇ ಸ್ಥಾನದಲ್ಲಿದೆ. ಇಂದು (ಏಪ್ರಿಲ್ 18) ಪಂಜಾಬ್ ವಿರುದ್ಧ ಗೆದ್ದು ಪಾಯಿಂಟ್ಸ್ ಟೇಬಲ್‌ನಲ್ಲಿ ಮೇಲಕ್ಕೇರುವ ತವಕದಲ್ಲಿದೆ. ಮತ್ತೊಂದೆಡೆ ಪಂಜಾಬ್ ಕಿಂಗ್ಸ್ ಕೂಡ ಇದುವರೆಗೂ ಆಡಿರುವ 6ರಲ್ಲಿ 4 ಪಂದ್ಯಗಳಲ್ಲಿ ಗೆಲುವಿನೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಈ ಮೂಲಕ ಈ ಎರಡು ತಂಡಗಳೂ ಕೂಡ ತಲಾ ಪಂದ್ಯಗಳಲ್ಲಿ 4 ಗೆದ್ದಿದ್ದು, 5ನೇ ಗೆಲುವಿದಾಗಿ ತೀವ್ರ ಪೈಪೋಟಿ ನಡೆಸಲಿವೆ. ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಪಿನ್ ಬೌಲರ್‌ಗಳ ದಾಳಿಗೆ ಆರ್‌ಸಿಬಿ ಬ್ಯಾಟರ್ಸ್ ಪರದಾಡಿರುವ ಉದಾಹರಣೆಗಳಿಗೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟರ್‌ಗಳಿಗೆ ಪಂಜಾಬ್ ಸ್ಪಿನ್ನರ್‌ಗಳನ್ನು ಎದುರಿಸುವುದು ದೊಡ್ಡ ಸಲಾಗಿದೆ.
ಪಂಜಾಬ್ ಕಿಂಗ್ಸ್ ತಂಡದಲ್ಲಿ ಯುಜುವೇಂದ್ರ ಚಹಲ್, ಗ್ಲೆನ್ ಮ್ಯಾಕ್ಸ್ ವೆಲ್ ತಮ್ಮ ಹಳೆ ತಂಡದ ವಿರುದ್ಧ ಚಿನ್ನಸ್ವಾಮಿಯಲ್ಲಿ ಸ್ಪಿನ್ ಬೌಲಿಂಗ್ ಮಾಡಲು ಸಿದ್ಧರಾಗಿದ್ದಾರೆ. ಇನ್ನು ಸ್ಪಿನ್ ಬೌಲರ್‌ಗಳ ಹೆಡೆಮುರಿ ಕಟ್ಟಲಯ ಆರ್‌ಸಿಬಿ ಬ್ಯಾಟರ್‌ಗಳು ಕೂಡ ಅಷ್ಟೇ ಸಿದ್ಧತೆ ನಡೆಸಿದ್ದಾರೆ.
ಆರ್‌ಸಿಬಿ ಪರ ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಸೇರಿ ಪ್ರಮುಖ ಸ್ಪಿನ್ನರ್‌ಗಳಿದ್ದಾರೆ. ಹೊರಗಡೆ ಪಿಚ್‌ಗಳಲ್ಲಿ ಹೊರತುಪಡಿಸಿದರೆ ತವರಿನಲ್ಲಿ ಇದುವರೆಗೂ ಆಡಿರುವ ಪಂದಗಳಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಬ್ಬರ ಕಡಿಮೆಯಾಗಿದೆ. ತವರಿನಲ್ಲಿ ಆಡಿರುವ 2 ಪಂದ್ಯಗಳಲ್ಲೂ ಹೆಚ್ಚು ರನ್‌ಗಳನ್ನು ಕಲೆಹಾಕಿಲದಲ. ಗುಜರಾತ್ ಟೈಟಾನ್ ವಿರುದ್ಧ 7, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 22 ರನ್ ಬಾರಿಸಿದ್ದರು ಅಷ್ಟೇ.
ಆದ್ದರಿಂದ ವಿರಾಟ್ ಕೊಹ್ಲಿ ಇಂದಾದ್ರೂ ತವರು ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿಲಿದ್ದಾರೆಯಾ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಮೂಲಕ ಅಭಿಮಾನಿಗಳ ಕಣ್ಣು ತಮ್ಮ ನೆಚ್ಚಿನ ಆಟಗಾರ ವಿರಾಟ್ ಕೊಹ್ಲಿ ಮೇಲಿದೆ.
ಪಂಜಾಬ್‌ಗೆ ಈ ಬ್ಯಾಟರ್‌ನದ್ದೇ ಭಯ: ಮತ್ತೊಂದೆಡೆ ಆಡಿರುವ ಬಹುತೇಕ ಪಂದ್ಯಗಳಲ್ಲಿ ಫಿಲ್ ಸಾಲ್ಟ್ ಮಾತ್ರ ಅಬ್ಬರದ ಬ್ಯಾಟಿಂಗ್ ಮಾಡಿದ್ದು, ಇವರ ಭಯವೇ ಇದೀಗ ಪಂಜಾಬ್ ತಂಡಕ್ಕೂ ಕಾಡುತ್ತಿದೆ. ಇಂದಿನ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಣೆ ಮಾಡಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿ.ಕೀಪರ್), ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್, ಸುಯಾಶ್ ಶರ್ಮಾ.
ಪಂಜಾಬ್ ಕಿಂಗ್ಸ್: ಪ್ರಿಯಾನ್ಶ್ ಆರ್ಯಾ, ಪ್ರಭ್‌ಸಿಮ್ರನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವದೇರಾ, ಜೋಶ್ ಇಂಗ್ಲಿಶ್/ಮಾರ್ಕಸ್ ಸ್ಟೋನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಮಾರ್ಕೊ ಯಾನ್ಸೆನ್, ಕ್ಸೇವಿಯರ್ ಬರ್ಟೆಲ್ಟ್, ಯುಜುವೇಂದ್ರ ಚಹಲ್, ಅರ್ಶದೀಪ್ ಸಿಂಗ್, ವೈಶಾಕ್ ವಿಜಯ್‌ಕುಮಾರ್/ಯಶ್ ಠಾಕೂರ್.












Click it and Unblock the Notifications