Harbhajan Singh: ಜೋಫ್ರಾ ಆರ್ಚರ್ ಕೆಣಕಿ ಹೊಸ ವಿವಾದಕ್ಕೆ ಸಿಲುಕಿದ ಹರ್ಭಜನ್ ಸಿಂಗ್
ಐಪಿಎಲ್ 2025ರ ಆವೃತ್ತಿಯ ಹಬ್ಬ ಆರಂಭವಾಗಿ ಅದ್ಧೂರಿಯಾಗಿ ನಡೆಯುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಭರ್ಜರಿಯಾಗಿ ಗೆದ್ದು ಬೀಗಿದೆ. ಇದೇ ವೇಳೆ ಕಾಮೆಂಟರಿ ಮಾಡುವಾಗ ಭಾರತದ ಮಾಜಿ ಕ್ರಿಕೆಟ್ ಆಟಗಾರ ಆರ್‌ಆರ್ ತಂಡದ ವೇಗಿ ಜೋಫ್ರಾ ಆರ್ಚರ್ ಅವರ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ್ದಾರೆ.
ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯದ ವೇಳೆ ಆಟಗಾರರು ಒಬ್ಬರನ್ನೊಬ್ಬರು ಕೆಣಕಿ ಮತ್ತೆ ಒಂದಾಗಿರುವ ಉದಾಹರಣೆಗಳಿವೆ. ಅಲ್ಲದೆ, ಕೆಟ್ಟ ಸಹ ಆಟಗಾರರ ವಿರುದ್ಧ ಕೆಟ್ಟ ಪದಗಳಿಂದ ನಿಂದಿಸಿ ವಿವಾದಕ್ಕೆ ಸಿಲುಕಿರುವ ಘಟನೆಗಳು ನಡೆದಿವೆ. ಇದೀಗ ಹರ್ಭಜನ್ ಸಿಂಗ್ ಅವರು ಕಾಮೆಂಟರಿ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಜೋಫ್ರಾ ಆರ್ಚರ್ ಬಗ್ಗೆ ಮಾತನಾಡಿ ವಿವಾದಕ್ಕೆ ಒಳಗಾಗಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಕಾಮೆಂಟರಿ ಮಾಡುವಾಗ ಭಾರತದ ಮಾಜಿ ಸ್ಪಿನ್ನರ್ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಅವರನ್ನು ಗುರಿಯಾಗಿಸಿಕೊಂಡು 'ಬ್ಲ್ಯಾಕ್ ಟ್ಯಾಕ್ಸಿ' ಎಂದು ಕರೆದಿದ್ದು, ಇದರಿಂದ ನೆಟ್ಟಿಗರು ಹರ್ಭಜನ್ ಸಿಂಗ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಹರ್ಭಜನ್ ಸಿಂಗ್ ಕೊಟ್ಟ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಕಾಮೆಂಟರಿ ಸಮಯದಲ್ಲಿ ಹರ್ಭಜನ್ ಸಿಂಗ್ ಅವರು, ಲಂಡನ್‌ನಲ್ಲಿ ಕಪ್ಪು ಟ್ಯಾಕ್ಸಿಯ ಮೀಟರ್ ವೇಗವಾಗಿ ಓಡುತ್ತದೆ, ಇಲ್ಲಿ ಆರ್ಚರ್ ಸಾಹಬ್‌ನ ಮೀಟರ್ ಸಹ ಜೋರಾಗಿ ಓಡಿತು ಎಂದು ಹೇಳಿದ್ದರು. ಇದೇ ವಿಚಾರವಾಗಿ ಇದೀಗ ಹರ್ಭಜನ್ ಅವರನ್ನು ಕ್ಷಮೆ ಕೇಳುವಂತೆ ಮನವಿ ಮಾಡುತ್ತಿದ್ದಾರೆ.
ಎಸ್‌ಆರ್‌ಎಚ್ ಪರ ಬ್ಯಾಟ್ ಬೀಸಿದ ಇಶಾನ್ ಕಿಶನ್ ಅವರು 47 ಎಸೆತಗಳಲ್ಲಿ 106 ರನ್‌ಗಳನ್ನು ಕಲೆಹಾಕಿದ್ದರು. ಐಪಿಎಲ್ 2025ರ ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರು. ಅವರು 11 ಬೌಂಡರಿ ಮತ್ತು ಆರು ಸಿಕ್ಸರ್‌ಗಳನ್ನು ಚಚ್ಚಿದರು.
ಇಶಾನ್ ಕಿಶನ್ ಅವರು ಸಂದೀಪ್ ಶರ್ಮಾ ಅವರ ಕೊನೆಯ ಓವರ್‌ನಲ್ಲಿ ಎರಡು ರನ್ ಗಳಿಸುವ ಮೂಲಕ ಶತಕ ಪೂರೈಸಿದರು. ಇಶಾನ್ ಅವರು ಟ್ರಾವಿಸ್ ಹೆಡ್ ಜೊತೆ 85 ರನ್, ನಿತೀಶ್ ಕುಮಾರ್ ರೆಡ್ಡಿ ಜೊತೆ 72 ರನ್ ಮತ್ತು ಹೆನ್ರಿಚ್ ಕ್ಲಾಸೆನ್ ಜೊತೆ 56 ರನ್ ಜೊತೆಯಾಟ ಆಡಿದರು.
ಇನ್ನು ಎಸ್‌ಆರ್‌ಎಚ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 286 ರನ್‌ಗಳಿಸಿ ಸೋಲನುಭವಿಸಿತು. ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ಪರ ತುಷಾರ್ ದೇಶಪಾಂಡೆ 4 ಓವರ್‌ಗಳಲ್ಲಿ 44 ರನ್ ನೀಡಿ 3 ವಿಕೆಟ್ ಪಡೆದರು. ಶ್ರೀಲಂಕಾದ ಸ್ಪಿನ್ನರ್ ಮಹೇಶ್ ತೀಕ್ಷಣ 4 ಓವರ್‌ಗಳಲ್ಲಿ 52 ರನ್ ನೀಡಿ 2 ವಿಕೆಟ್ ಪಡೆದರು. ಸಂದೀಪ್ ಶರ್ಮಾ 4 ಓವರ್‌ಗಳಲ್ಲಿ 51 ರನ್ ನೀಡಿ 1 ವಿಕೆಟ್ ಪಡೆದರು. ಜೋಫ್ರಾ ಆರ್ಚರ್ ಈ ಪಂದ್ಯದಲ್ಲಿ ನಾಲ್ಕು ಓವರ್ ಬೌಲಿಂಗ್ ಮಾಡಿ ಒಂದೂ ವಿಕೆಟ್ ಪಡೆಯದೇ ಬರೋಬ್ಬರಿ 76 ರನ್‌ಗಳನ್ನು ಎಸ್‌ಆರ್‌ಎಚ್‌ಗೆ ಕೊಡುಗೆಯಾಗಿ ನೀಡಿದ್ದಾರೆ. ಈ ಮೂಲಕ ವಿಕೆಟ್ ಇಲ್ಲದೆ ಅತೀ ಹೆಚ್ಚು ರನ್ ಕೊಡುವ ಮೂಲಕ ಬೇಡದ ದಾಖಲೆ ಮಾಡಿದ್ದಾರೆ.












Click it and Unblock the Notifications