IPL 2025: ಐಪಿಎಲ್‌ 2025 ಟೂರ್ನಿಯಿಂದ ಹೊರಬಿದ್ದ ತಂಡಗಳು.. ಆರ್‌ಸಿಬಿ ಕಥೆ ಏನು?

IPL 2025 Playoffs: ಅರ್ಧಕ್ಕೆ ರದ್ದಾಗಿಂದ ಐಪಿಎಲ್‌ 2025 ಟೂರ್ನಿ ಇದೀಗ ಮತ್ತೆ ಶನಿವಾರದಿಂದ ಆರಂಭ ಆಗಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದು, ಇನ್ನೂ ಆರು ತಂಡಗಳು ಭಾರೀ ಪೈಪೋಟಿ ನಡೆಸುತ್ತಿವೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕಟ್ಟು ಹಿನ್ನೆಲೆ ಆಟಗಾರರು, ಅಭಿಮಾನಿಗಳ ಹಿತದೃಷ್ಟಿಯಿಂದ ಪ್ರಾಂಚೈಸಿಗಳ ಮನವಿ ಮೇರೆ ಐಪಿಎಲ್‌ 2025 ಟೂರ್ನಿಯನ್ನು ರದ್ದುಪಡಿ ಒಂದು ವಾರಕ್ಕೆ ಮುಂದೂಡಲಾಗಿತ್ತು. ಎರಡು ರಾಷ್ಟ್ರಗಳ ನಡುವೆ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಮತ್ತೆ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಪ್ರಕಾರ ಮೊದಲ ಪಂದ್ಯ ಶನಿವಾರ (ಮೇ 17) ಆರ್‌ಸಿಬಿ-ಕೆಕೆಆರ್‌ ನಡುವೆ ನಡೆಯಬೇಕಿತ್ತು. ಆದರೆ, ಭಾರೀ ಮಳೆ ಕಾರಣ ಪದ್ಯ ರದ್ದಾಗಿದ್ದು, ಎರಡು ತಂಡಗಳಿಗೆ ತಲಾ ಒಂದೊಂದು ಪಾಯಿಂಟ್‌ ನೀಡಲಾಗಿದೆ.

IPL 2025 Four Teams are Eliminated from Tournament

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಪಾಯಿಂಟ್ಸ್‌ ಟೇಬಲ್‌ನಲ್ಲಿ 17 ಅಂಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನಕ್ಕೇರಿದೆ. ಅಲ್ಲದೆ, ಪ್ಲೇ ಆಫ್‌ ಸನಿಹದಲ್ಲಿದೆ. ಆದರೂ ಬಹುತೇಕ ಈ ಗೆರೆ ದಾಟಲು ಉಳಿದ ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನಾದರೂ ಗೆಲ್ಲಲ್ಲೇಬೇಕಿದೆ. ಅದರಲ್ಲೂ ಇದೀಗ ಪ್ಲೇ ಆಫ್‌ ರೇಸ್‌ನಲ್ಲಿ 6 ತಂಡಗಳು ಭಾರೀ ಪೈಪೋಟಿ ನಡೆಸುತ್ತಿದ್ದು, ಉಳದ ನಾಲ್ಕು ತಂಡಗಳು ಬಹುತೇಕ ಹೊರಬಿದ್ದಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಪಂಜಾಬ್ ಕಿಂಗ್ಸ್‌, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್‌ ತಂಡಗಳ ನಡುವೆ ಪ್ಲೇ ಆಫ್ ಪ್ರವೇಶದ ಪೈಪೋಟಿ ಜೋರಾಗಿ ನಡೆಯುತ್ತಿದೆ. ಈ ಪೈಕಿ ಎರಡು ತಂಡ ಹೊರಗಡೆ ಬೀಳಲಿದ್ದು, ಇನ್ನುಳಿದ ನಾಲ್ಕು ಭರ್ಜರಿಯಾಗಿ ಪ್ಲೇ ಆಫ್‌ ಪ್ರವೇಶ ಮಾಡಲಿವೆ. ಅದರಲ್ಲೂ ಎಂಐ, ಎಲ್‌ಎಸ್‌ಜಿ ಒಂದು ಪಂದ್ಯ ಸೋತರೂ ಬಹುತೇಕ ಹೊರಗಡೆ ಬೀಳಲಿವೆ.

ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದ ತಂಡಗಳು: ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಸನ್ ​ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್​ ತಂಡಗಳು ಬಹುತೇಕ ಟೂರ್ನಿಯಿಂದ ಹೊರಬಿದ್ದಿದ್ದು, ಪ್ಲೇ ಆಫ್‌ ಪ್ರವೇಶ ಸಾಧ್ಯವಿಲ್ಲದಾಂತಾಗಿದೆ. ಇನ್ನೂ ಕೆಲವೇ ದಿನಗಳಲ್ಲಿ ಈ ಸಾಲಿಗೆ ಇನ್ನೂ ಎರಡು ತಂಡಗಳು ಸೇರಲಿವೆ. ಬಳಿಕ ಮತ್ತೆರಡು ಸೇರ್ಪಡೆಯಾಗಲಿವೆ. ಕೊನೆಗೆ ಎರಡು ತಂಡಗಳು ಫೈನಲ್‌ ಪ್ರವೇಶಿಸಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+