RCB Vs Dc Toss: ಬೆಂಗಳೂರಿನಲ್ಲಿ ಆರ್‌ಸಿಬಿ ವಿರುದ್ಧ ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌: ಬೌಲಿಂಗ್‌ ಆಯ್ಕೆ

RCB Vs Dc Toss: ಐಪಿಎಲ್ 2025ರ ಆವೃತ್ತಿಯ 24 ಪಂದ್ಯದಲ್ಲಿ ಆರ್‌ಸಿಬಿಯು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿದೆ. ಟಾಸ್‌ ಗೆದ್ದ ಡಿಸಿ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಮತ್ತೊಂದಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲು ಬ್ಯಾಟ್‌ ಬೀಸಲಿದೆ.

ರಾಯಲ್ಸ್‌ ಚಾಲೆಂಜರ್ಸ್ ತಂಡ ಎಂದರೆ ಅದೊಂದು ಬ್ರಾಂಡ್‌ ಆಗಿಬಿಟ್ಟಿದೆ. ಕಪ್‌ ಗೆಲ್ಲದಿದ್ದರೂ ಈ ಬ್ರಾಂಡ್‌ ಸೃಷ್ಟಿಗೆ ಕಾರಣ ಅಪ್ಪಟ ಅಭಿಮಾನಿಗಳೇ ಕಾರಣ ಅಂದ್ರೆ ತಪ್ಪಾಗಲಾರದು. ಬೇರೆ ಕಡೆ ಅಂದರೆ ಹೊರ ರಾಜ್ಯಗಳ ಕ್ರೀಡಾಂಗಣದಲ್ಲಿ ಪಂದ್ಯ ನಡೆದರೂ ಸಹ ಅಲ್ಲಿಗೆ ಹೋಗಿ ಮ್ಯಾಚ್‌ ನೋಡಿ ಆರ್‌ಸಿಬಿಗೆ ಸಪೋರ್ಟ್‌ ಮಾಡುವ ಮೂಲಕ ಐಪಿಎಲ್‌ಗೆ ಕಳೆ ಬರುವಂತೆ ಮಾಡಿದ್ದಾರೆ.

IPL 2025 Delhi Capitals Choose to Bowl After Winning Toss Against RCB

ಅದರಲ್ಲೂ ಬೆಂಗಳೂರಿನಲ್ಲಿ ಇದ್ದರಂತೂ ನಿಂತುಕೊಳ್ಳಲು ಜಾಗ ಇರುವುದಿಲ್ಲ. ಅಷ್ಟರ ಮಟ್ಟಿಗೆ ಅಭಿಮಾನಿಗಳ ದಂಡು ನೆರೆದಿರುತ್ತದೆ, ಬರೀ ಬೆಂಗಳೂರು ಅಷ್ಟೇ ಅಲ್ಲದೆ, ಬೇರೆ ಬೇರೆ ಜಿಲ್ಲೆಗಳಿಂದಲೂ ಸಹ ಬೆಂಗಳೂರಿನಲ್ಲಿ ಮ್ಯಾಚ್‌ ಇದ್ರೆ ನೋಡಲು ಬರುತ್ತಾರೆ. ಹಾಗೆಯೇ ಇಂದು ಬೆಂಗಳೂರಿನಲ್ಲಿ ಪಂದ್ಯ ಇದ್ದು, ಅಭಿಮಾನಿಗಳ ದಂಡೇ ನೆರೆದಿದೆ.

ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಮತ್ತು ಡೆಲ್ಲಿ ನಡುವೆ ಕಾಳಗ ನಡೆಯಲಿದೆ. ಆರ್‌ಸಿಬಿ ಮತ್ತು ಡೆಲ್ಲಿ ಇದುವರೆಗೆ 31 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, ಈ ಪೈಕಿ ಆರ್‌ಸಿಬಿ 19 ಬಾರಿ, ಡೆಲ್ಲಿ 11 ಬಾರಿ ಗೆಲುವು ಸಾಧಿಸಿದೆ. ಒಂದು ಪಂದ್ಯ ಫಲಿತಾಂಶವಿಲ್ಲದೆ ಮುಗಿದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 12 ಪಂದ್ಯಗಳಲ್ಲಿ ಆರ್‌ಸಿಬಿ 8 ಬಾರಿ ಗೆದ್ದಿದ್ದು, ಡೆಲ್ಲಿ 4 ಗೆಲುವು ಸಾಧಿಸಿದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ 23 ರನ್‌ಗಳಿಂದ ಡೆಲ್ಲಿ ವಿರುದ್ಧ ಜಯ ಗಳಿಸಿತ್ತು. ಇನ್ನು ಆರ್​ಸಿಬಿ ಡೆಲ್ಲಿ ವಿರುದ್ಧ 215 ರನ್​ಗಳಿಸಿರುವುದು ಅತಿದೊಡ್ಡ ಮೊತ್ತವಾಗಿದೆ. 95ಕ್ಕೆ ಆಲೌಟ್ ಆಗಿರುವುದು 2 ತಂಡಗಳ ಮುಖಾಮುಖಿಯಲ್ಲಿ ಅತ್ಯಂತ ಕಡಿಮೆ ರನ್‌ಗಳಾಗಿದೆ.

ಇನ್ನು 1,081 ರನ್​ ಕಲೆ ಹಾಕಿರುವ ವಿರಾಟ್ ಕೊಹ್ಲಿ 2 ತಂಡಗಳ ಮುಖಾಮುಖಿಯಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟರ್ ಆಗಿದ್ದಾರೆ. 128 ರನ್​ಗಳಿಸಿರುವ ಕ್ರೀಸ್​ ಗೇಲ್ ಗರಿಷ್ಠ ವೈಯಕ್ತಿಕ ರನ್​ ಸಿಡಿಸಿದ ಬ್ಯಾಟರ್ ಆಗಿದ್ದಾರೆ. 15 ವಿಕೆಟ್ ಪಡೆದಿರುವ ಚಹಲ್ ಗರಿಷ್ಠ ವಿಕೆಟ್ ಪಡೆದವರಾಗಿದ್ದಾರೆ.

ಇನ್ನು ಚಿನ್ನಸ್ವಾಮಿ ಕ್ರೀಡಾಂಗಣ ಕ್ರೀಡಾಂಗಣ ಬ್ಯಾಟ್ಸ್‌ಮನ್‌ಗಳಿಗೆ ಸ್ವರ್ಗವೆಂದೇ ಪರಿಗಣಿಸಲಾಗುತ್ತದೆ. ಯಾಕಂದ್ರೆ ಬೌಂಡರಿಲೈನ್‌ ಎಲ್ಲಾ ಕ್ರೀಡಾಂಗಳಿಗೆ ಹೋಲಿಕೆ ಮಾಡಿದ್ರೆ ಹತ್ತಿರವಿದೆ. ಚೇಸಿಂಗ್ ತಂಡಗಳು ಇಲ್ಲಿ ಹೆಚ್ಚಾಗಿ ಗೆದ್ದಿರುವ ಉದಾಹರಣೆಗಳಿವೆ. ಇದೇ ಅಂದಾಜಿನಲ್ಲಿ ಇಂದು ಡೆಲ್ಲಿ ಕ್ಯಾಪಿಟಲ್ಸ್‌ ಟಾಸ್‌ ಗೆದ್ದರೂ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ. ಆದರೆ ಆರ್‌ಸಿಬಿಯಲ್ಲೂ ಕೂಡ ಈ ಬಾರಿ ಬ್ಯಾಟಿಂಗ್‌, ಬೌಲಿಂಗ್‌ ಉತ್ತಮವಾಗಿದೆ.

ಆರ್‌ಸಿಬಿ: ಫಿಲಿಪ್‌ ಸಾಲ್ಟ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್ಸ್ಟೋನ್, ಜಿತೇಶ್ ಶರ್ಮಾ (ವಿ.ಕೀ), ಟಿಮ್ ಡೆವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್ವುಡ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸುಯೇಶ್ ಶರ್ಮಾ ಕಣಕ್ಕಿಳಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+