IPL 2023: ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ, ಅನುಮಾನವಿರುವ ವಿವಿಧ ತಂಡಗಳ ಆಟಗಾರರ ಪಟ್ಟಿ
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಗೆ ಇದೇ ಮಾರ್ಚ್ 31ರಂದು ಅದ್ಧೂರಿ ಚಾಲನೆ ಸಿಗಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಆರಂಭದ ದಿನಾಂಕ ಹತ್ತಿರವಾಗುತ್ತಿದ್ದಂತೆ, ಫ್ರಾಂಚೈಸಿ ತಂಡಗಳಲ್ಲಿ ಗಾಯಗೊಂಡ ಆಟಗಾರರ ಪಟ್ಟಿಯೂ ಉದ್ದವಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಐಪಿಎಲ್ ತಂಡಗಳು ಗಾಯಾಳುಗಳಿಂದ ಕೂಡಿವೆ.

ಗಾಯಾಳುಗಳ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಆಟಗಾರರು ಹೆಚ್ಚಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಇಬ್ಬರು ಪ್ರಮುಖ ಆಟಗಾರರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೂವರು ಆಟಗಾರರು ಗಾಯಗೊಂಡಿದ್ದಾರೆ.
ಪ್ರೀತಿ ಜಿಂಟಾ ಸಹ-ಮಾಲೀಕತ್ವದ ಪಂಜಾಬ್ ಕಿಂಗ್ಸ್ ತಂಡದಲ್ಲಿ ಜಾನಿ ಬೈರ್‌ಸ್ಟೋವ್ ಚೇತರಿಕೆ ಕಂಡಿಲ್ಲವಾದ್ದರಿಂದ, ಬದಲಿ ಆಟಗಾರನಾಗಿ ನ್ಯೂಜಿಲೆಂಡ್‌ನ ಆರಂಭಿಕ ಮಾರ್ಟಿನ್ ಗುಪ್ಟಿಲ್ ಅವರನ್ನು ಆಯ್ಕೆ ಮಾಡಿದೆ. ಇನ್ನು ಪಂದ್ಯಾವಳಿ ಆರಂಭಕ್ಕೂ ಮುನ್ನವೇ ಕೆಲವು ಆಟಗಾರರು ಟೂರ್ನಿಯಿಂದ ಹೊರಬಿದ್ದಿದ್ದಾರೆ.

IPL 2023: ಗಾಯಗೊಂಡು ಹೊರಬಿದ್ದ ಆಟಗಾರರ ಪಟ್ಟಿ
ಜಸ್ಪ್ರೀತ್ ಬುಮ್ರಾ (ಮುಂಬೈ ಇಂಡಿಯನ್ಸ್): 2023ರ ಐಪಿಎಲ್‌ನಿಂದ ಹೊರಗೆ
ಝೈ ರಿಚರ್ಡ್ಸನ್ (ಮುಂಬೈ ಇಂಡಿಯನ್ಸ್): 2023ರ ಐಪಿಎಲ್‌ನಿಂದ ಹೊರಗೆ
ರಿಷಭ್ ಪಂತ್ (ಡೆಲ್ಲಿ ಕ್ಯಾಪಿಟಲ್ಸ್): 2023ರ ಐಪಿಎಲ್‌ನಿಂದ ಹೊರಗೆ
ಸರ್ಫರಾಜ್ ಖಾನ್ (ದೆಹಲಿ ಕ್ಯಾಪಿಟಲ್ಸ್): 2023ರ ಐಪಿಎಲ್ ಆಡುವುದು ಅನುಮಾನ
ಅನ್ರಿಚ್ ನಾರ್ಟ್ಜೆ (ಡೆಲ್ಲಿ ಕ್ಯಾಪಿಟಲ್ಸ್): 2023ರ ಐಪಿಎಲ್ ಆಡುವುದು ಅನುಮಾನ
ಬೆನ್ ಸ್ಟೋಕ್ಸ್ (ಚೆನ್ನೈ ಸೂಪರ್ ಕಿಂಗ್ಸ್): 2023ರ ಐಪಿಎಲ್ ಆಡುವುದು ಅನುಮಾನ
ಕೈಲ್ ಜೇಮಿಸನ್ (ಚೆನ್ನೈ ಸೂಪರ್ ಕಿಂಗ್ಸ್): 2023ರ ಐಪಿಎಲ್‌ನಿಂದ ಹೊರಗೆ
ಜಾನಿ ಬೈರ್‌ಸ್ಟೋವ್ (ಪಂಜಾಬ್ ಕಿಂಗ್ಸ್): 2023ರ ಐಪಿಎಲ್‌ನಿಂದ ಹೊರಗೆ

ಪ್ರಸಿದ್ಧ್ ಕೃಷ್ಣ (ರಾಜಸ್ಥಾನ್ ರಾಯಲ್ಸ್): 2023ರ ಐಪಿಎಲ್‌ನಿಂದ ಹೊರಗೆ
ಶ್ರೇಯಸ್ ಅಯ್ಯರ್ (ದೆಹಲಿ ಕ್ಯಾಪಿಟಲ್ಸ್): 2023ರ ಐಪಿಎಲ್‌ನಿಂದ ಹೊರಗೆ
ವಿಲ್ ಜಾಕ್ಸ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು): 2023ರ ಐಪಿಎಲ್‌ನಿಂದ ಹೊರಗೆ
ಡೇವಿಡ್ ವಾರ್ನರ್ (ದೆಹಲಿ ಕ್ಯಾಪಿಟಲ್ಸ್): 2023ರ ಐಪಿಎಲ್‌ನ ಮೊದಲ ಕೆಲವು ಪಂದ್ಯಗಳಿಗೆ ಅನುಮಾನ
2023ರ ಐಪಿಎಲ್‌ನಲ್ಲಿ ಗಾಯಗೊಂಡು ಹೊರಬಿದ್ದಿರುವ ಮತ್ತು ಆಡುವುದು ಅನುಮಾನದಲ್ಲಿರುವ ಆಟಗಾರರ ಬದಲಿಗೆ ಬೇರೆ ಆಟಗಾರರನ್ನು ಫ್ರಾಂಚೈಸಿ ತಂಡಗಳು ಹುಡುಕುತ್ತಿವೆ.
ಈವರೆಗೆ ಸಿಎಸ್‌ಕೆನಲ್ಲಿ ಕೈಲ್ ಜೇಮಿಸನ್ ಬದಲಿಗೆ ದಕ್ಷಿಣ ಆಫ್ರಿಕಾದ ಸಿಸಂಡಾ ಮಗಲಾ ಅವರನ್ನು ಹೆಸರಿಸಲಾಗಿದ್ದರೆ, ಆರ್‌ಸಿಬಿಯ ವಿಲ್ ಜಾಕ್ಸ್ ಬದಲಿಗೆ ನ್ಯೂಜಿಲೆಂಡ್‌ನ ಮೈಕೆಲ್ ಬ್ರೇಸ್‌ವೆಲ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಪಂಜಾಬ್ ಕಿಂಗ್ಸ್‌ನ ಜಾನಿ ಬೈರ್‌ಸ್ಟೋವ್ ಬದಲಿಗೆ ಮಾರ್ಟಿನ್ ಗುಪ್ಟಿಲ್ ಅವರನ್ನು ಸೇರಿಸಿಕೊಳ್ಳಲಾಗಿದೆ.
ಆರ್‌ಸಿಬಿಗೆ ಮುಂಬೈ ಇಂಡಿಯನ್ಸ್ ಮೊದಲ ಎದುರಾಳಿ
ಫಾಫ್ ಡು ಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಮೊದಲ ಎದುರಾಳಿಯಾಗಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಆಡಲಿದೆ. ಉಭಯ ತಂಡಗಳು ತಮ್ಮ ಮೊದಲ ಪಂದ್ಯವನ್ನು ಎಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.












Click it and Unblock the Notifications