IPL 2023 Final: CSK vs GT ಫೈನಲ್ ಪಂದ್ಯದಲ್ಲಿ ದಾಖಲಾಗಲಿರುವ ಪ್ರಮುಖ ಮೈಲುಗಲ್ಲುಗಳ ಪಟ್ಟಿ
2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16 ಸೀಸನ್ ಅಂತಿಮ ಘಟಕ್ಕೆ ಬಂದು ತಲುಪಿದ್ದು, ಇಂದು (ಭಾನುವಾರ, ಮೇ 28) ಫೈನಲ್ ಪಂದ್ಯದ ಮೂಲಕ ಎರಡು ತಿಂಗಳ ಪಂದ್ಯಾವಳಿಗೆ ತೆರೆ ಬೀಳಲಿದೆ.
ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ (ಜಿಟಿ) ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

ತನ್ನ ಐದನೇ ಐಪಿಎಲ್ ಪ್ರಶಸ್ತಿ ಮೇಲೆ ಚೆನ್ನೈ ಸೂಪರ್ ಕಿಂಗ್ ಕಣ್ಣಿಟ್ಟಿದ್ದರೆ, ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಲು ಗುಜರಾತ್ ಟೈಟನ್ಸ್ ಉದ್ದೇಶಿಸಿದೆ. ಇದೇ ವೇಳೆ ಕೆಲವು ಆಟಗಾರರು ದಾಖಲೆ ನಿರ್ಮಿಸುವ ಅಂಚಿನಲ್ಲಿದ್ದಾರೆ. ಈ ಪಂದ್ಯದಲ್ಲಿ ದಾಖಲಾಗುವ ಪ್ರಮುಖ ಮೈಲುಗಲ್ಲುಗಳ ಪಟ್ಟಿ ಇಲ್ಲದೆ.
* ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಮೈದಾನಕ್ಕಿಳಿಯುವ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಪ್ರಮುಖ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಇದು ಎಂಎಸ್ ಧೋನಿಯ 250ನೇ ಐಪಿಎಲ್ ಪಂದ್ಯವಾಗಿದ್ದು, ಅತಿ ಹೆಚ್ಚು ಐಪಿಎಲ್ ಪಂದ್ಯವಾಡಿದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ.
* ಇನ್ನು 11 ಐಪಿಎಲ್ ಫೈನಲ್ ಪಂದ್ಯಗಳಲ್ಲಿ ಆಡಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಪಾತ್ರರಾಗಲಿದ್ದಾರೆ.

* ಇಂದಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ಸಿಎಸ್‌ಕೆ ಗೆದ್ದರೆ ಅತಿ ಹೆಚ್ಚು ಐಪಿಎಲ್ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ (5) ತಂಡವನ್ನು ಸರಿಗಟ್ಟಲಿದೆ. ಸಿಎಸ್‌ಕೆ ನಾಲ್ಕು ಬಾರಿ ಗೆದ್ದಿದೆ.
* ಗುಜರಾತ್ ಟೈಟನ್ಸ್ ನಾಯಕ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್ ಪೂರೈಸುವ ಸಮೀಪದಲ್ಲಿದ್ದಾರೆ. 150 ವಿಕೆಟ್‌ಗೆ ಕೇವಲ 2 ವಿಕೆಟ್‌ಗಳ ಅಂತರದಲ್ಲಿದ್ದಾರೆ.
* ಆರಂಭಿಕ ಬ್ಯಾಟ್ಸ್‌ಮನ್ ಶುಭ್ಮನ್ ಗಿಲ್ ಗುಜರಾತ್ ಟೈಟನ್ಸ್ ಪರ 50 ಸಿಕ್ಸರ್‌ಗಳನ್ನು ಬಾರಿಸುವ ಹೊಸ್ತಿಲಲ್ಲಿದ್ದು, ಇದೇ ವೇಳೆ ಋತು ಒಂದರಲ್ಲಿ 900 ರನ್ ಗಳಿಸಿದ ಎರಡನೇ ಆಟಗಾರನೆನಿಸಿಕೊಳ್ಳಲು ಶುಭ್ಮನ್ ಗಿಲ್ಗೆ (851) 49 ರನ್‌ಗಳ ಅವಶ್ಯಕತೆ ಇದೆ.

* ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಗುಜರಾತ್ ಟೈಟನ್ಸ್ ತಂಡದ ಪರ 50 ವಿಕೆಟ್ ಪೂರೈಸುವ ಅಂಚಿನಲ್ಲಿದ್ದಾರೆ. ಫೈನಲ್ ಪಂದ್ಯದಲ್ಲಿ ಎರಡು ವಿಕೆಟ್ ಕಿತ್ತರೆ ಈ ಸಾಧನೆ ಮಾಡಲಿದ್ದಾರೆ.
* ಚೆನ್ನೈ ಸೂಪರ್ ಕಿಂಗ್ಸ್ ಆಲ್‌ರೌಂಡರ್ ರವೀಂದ್ರ ಜಡೇಜಾ ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳ ಗುರಿ ಮುಟ್ಟಲು ಕೇವಲ 2 ಸಿಕ್ಸರ್‌ಗಳ ಅವಶ್ಯಕತೆ ಇದೆ. 225 ಪಂದ್ಯಗಳಲ್ಲಿ ರವೀಂದ್ರ ಜಡೇಜಾ 98 ಐಪಿಎಲ್ ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
* ಐಪಿಎಲ್ 2023ರ ಫೈನಲ್ ಪಂದ್ಯ ಮೋಹಿತ್ ಶರ್ಮಾ ಅವರ 100ನೇ ಐಪಿಎಲ್ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಅವರು ಮೂರು ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾದರೆ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದಂತಾಗುತ್ತದೆ.
* ಚೆನ್ನೈ ಸೂಪರ್ ಕಿಂಗ್ಸ್ ವೇಗಿ ದೀಪಕ್ ಚಹಾರ್ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳ ಸಾಧನೆ ಮಾಡಲು ಕೇವಲ ಒಂದು ವಿಕೆಟ್ ಅಗತ್ಯವಿದೆ.












Click it and Unblock the Notifications