Get Updates
Get notified of breaking news, exclusive insights, and must-see stories!

ಭಾರತದ ವಿರುದ್ಧ ಗೆದ್ದ ಬಳಿಕ ಡೆವಿಡ್‌ ಮಿಲ್ಲರ್ ಜೊತೆ ಯುವತಿ ರೀಲ್ಸ್: ಅತ್ಯಾಚಾರದ ಬೆದರಿಕೆ, ಇಲ್ಲಿದೆ ವಿಡಿಯೋ

T20 World Cup 2026: ಇನ್ಫ್ಲುಯೆನ್ಸರ್ ಪ್ರಿನ್ಸಿ ಪಾರಿಖ್ ಅವರು ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಡೇವಿಡ್ ಮಿಲ್ಲರ್ ಅವರೊಂದಿಗೆ ಮಾಡಿದ್ದ ಇನ್‌ಸ್ಟಾಗ್ರಾಂ ರೀಲ್ ಅನ್ನು ಡಿಲೀಟ್ ಮಾಡಿದ್ದಾರೆ. ಸಾಮಾಜಿಕ ತಾಲತಾಣದಲ್ಲಿ ತಮಗೆ ಅತ್ಯಾಚಾರದ ಬೆದರಿಕೆಗಳು ಬಂದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಟಿ20 ವಿಶ್ವಕಪ್ ಸೂಪರ್ 8 ಪಂದ್ಯದ ಬಳಿಕ ಈ ವಿಡಿಯೋ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಫೆಬ್ರವರಿ 24ರ ಮಂಗಳವಾರ, ಪ್ರಿನ್ಸಿ ಪಾರಿಖ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಈ ನಿರ್ಧಾರದ ಹಿಂದಿನ ನೋವನ್ನು ಹಂಚಿಕೊಂಡಿದ್ದಾರೆ. ಕಿರುಕುಳವು ಕೇವಲ ಟೀಕೆಗಳಿಗೆ ಸೀಮಿತವಾಗಿರಲಿಲ್ಲ ಎಂದು ತಿಳಿಸಿದ್ದಾರೆ. "ಫೇಸ್‌ಬುಕ್‌ನಲ್ಲಿ ಡೇವಿಡ್ ಮಿಲ್ಲರ್ ಅವರೊಂದಿಗೆ ಮಾಡಿದ ರೀಲ್ಸ್‌ ಅನ್ನು ಡಿಲೀಟ್ ಮಾಡಿದ್ದೇನೆ. ಏಕೆಂದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುತ್ತಿದ್ದಂತೆ ಅಶ್ಲೀಲ ಸಂದೇಶಗಳು, ಅತ್ಯಾಚಾರದ ಬೆದರಿಕೆಗಳು ಮತ್ತು ನನ್ನ ಬಾಡಿ ಶೇಮಿಂಗ್‌ ಬಗ್ಗೆ ನೂರಾರು ಕಮೆಂಟ್‌ಗಳು ಬಂದವು. ಇದನ್ನು ಸಹಿಸಿಕೊಳ್ಳಲು ಆಗಲಿಲ್ಲ. ಈಗ ಎಲ್ಲದರಿಂದಲೂ ದೂರವಾಗಿ ಮಾಯವಾಗಿಬಿಡೋಣ ಅನ್ನಿಸುತ್ತಿದೆ," ಎಂದು ಹೇಳಿದ್ದಾರೆ.

Influencer Princy Parikh Deleted Reel With SA Team David Miller After Receiving Rape Threats Online

ಟೀಂ ಇಂಡಿಯಾ ವಿರುದ್ಧ ಮಿಲ್ಲರ್ ಅದ್ಭುತ ಪ್ರದರ್ಶನ

ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಿನ ಪಂದ್ಯದ ನಂತರ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿತ್ತು. ಆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದರು. ಅವರು 35 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ಸಹಿತ ಬರೋಬ್ಬರಿ 63 ರನ್‌ಗಳನ್ನು ಅರ್ಧಶತಕ ಬಾರಿಸಿ ತಂಡ ಬೃಹತ್ ರನ್‌ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ಪ್ಲೇಯರ್ ಆಫ್ ದಿ ಮ್ಯಾಚ್ ಆಟಗಾರ ಕೂಡ ಎನಿಸಿಕೊಂಡರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ನೀಡಿದ 188ರನ್‌ಗಳ ಗುರಿ ಮುಟ್ಟಲಾಗದೇ ಹೀನಾಯ ಸೋಲು ಕಂಡಿತು.

ಬಳಿಕ ಪಾರಿಖ್ ಅವರು ಡೆವಿಡ್‌ ಮಿಲ್ಲರ್ ಜೊತೆ ರೀಲ್ಸ್‌ ಮಾಡಿದ್ದು, ಭಾರತ ಸೋತಿದ್ದಕ್ಕೆ ಡೇವಿಡ್ ಮಿಲ್ಲರ್ ಕಾರಣರಾದ ಹಿನ್ನೆಲೆ ಪಾರಿಖ್ ಅವರು ತಮಾಷೆಗಾಗಿ ಈ ವಿಡಿಯೋ ಮಾಡಿದ್ದರು. ಆದರೆ, ಇದನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸದ ಕಿಡಿಗೇಡಿಗಳು ಅವರ ಮೇಲೆ ವೈಯಕ್ತಿಕ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ಅತ್ಯಾಚಾರದ ಬೆದರಿಕೆ

ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಗಳು ಬಂದವು ಎಂದು ಆರೋಪ ಮಾಡಿದ ಅವರು, ಅನೇಕ ಬಳಕೆದಾರರು ಈ ವಿಡಿಯೋವನ್ನು ಕೇವಲ ಒಂದು ತಮಾಷೆಯಾಗಿ ಮತ್ತು ಕ್ರಿಕೆಟ್ ಪೈಪೋಟಿಯಲ್ಲಿ ಸಹಜವಾಗಿ ಕಂಡುಬರುವ ಹಾಸ್ಯವಾಗಿದೆ ಎಂದು ಪರಿಗಣಿಸಿದ್ದಾರೆ. ಇನ್ನೂ ಕೆಲವರು ಕೆಟ್ಟದಾಗಿ ಟೀಕಿಸಿದರು. ಅದು ಯಾವ ಮಟ್ಟಿಗೆ ಅಂದ್ರೆ ಅತ್ಯಾಚಾರ ಮಾಡುತ್ತೇವೆ ಎನ್ನುವ ಮಟ್ಟಿಗೆ ಎಂದು ವರದಿಯಾಗಿದೆ.

ಪಾರಿಖ್ ಅವರ ಪ್ರಕಾರ, ಈ ಪ್ರತಿಕ್ರಿಯೆಗಳು ಕೇವಲ ನಕಾರಾತ್ಮಕ ಕಮೆಂಟ್‌ಗಳಿಗೆ ಸೀಮಿತವಾಗದೆ, ನೇರ ಬೆದರಿಕೆಗಳು ಹಾಗೂ ಅವಾಚ್ಯ ನಿಂದನೆಗಳವರೆಗೂ ಇವೆ ಎಂದು ಆರೋಪ ಮಾಡಿದ್ದಾರೆ. ತಮ್ಮ ವಿರುದ್ಧ ಬೆದರಿಕೆ ಹಾಕಿದವರ ವಿರುದ್ಧ ಕಾನೂನಿನ ಮೊರೆ ಹೋಗುತ್ತೇನೆ ಎಂದು ಹೇಳಿದ್ದಾರೆ.

ಕಿಡಿಗೇಡಿಗಳ ವಿರುದ್ಧ ಕಾನೂನು ಸಮಯ

"ಟೀಕೆ ಮಾಡಿರುವವರ ವಿರುದ್ಧ ಪೊಲೀಸ್ ದೂರು ದಾಖಲಿಸಲಿದ್ದೇನೆ. ಟೀಕೆಕಾರರ ಯೂಸರ್ ನೇಮ್‌ಗಳು ಮತ್ತು ಅವರು ಕಳುಹಿಸಿರುವ ಸಂದೇಶಗಳನ್ನು ನನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿದ್ದೇನೆ. ಇದರಿಂದ ಅವರ ಸುತ್ತಮುತ್ತಲಿರುವ ಜನರಿಗೆ ಮತ್ತು ಅವರ ಉದ್ಯೋಗದಾತರಿಗೆ, ಅವರು ಎಂತಹವರ ಎಂಬುದು ತಿಳಿಯಲಿ. ಯಾರೂ ಕೂಡ ಇಂತಹ ಕಿರುಕುಳವನ್ನು ಅನುಭವಿಸಲು ಅರ್ಹರಲ್ಲ," ಎಂದು ಹೇಳಿದರು.

ಈ ಘಟನೆಯು ಕೆಲ ಸಾಮಾಜಿಕ ಜಾಲತಾಣ ಬಳಕೆದಾರರ ವಿಷಕಾರಿ ಮುಖವನ್ನು ಮತ್ತೊಮ್ಮೆ ಜಗತ್ತಿನ ಮುಂದೆ ತೆರೆದಿಟ್ಟಿದೆ. ವಿಶೇಷವಾಗಿ ದೊಟ್ಟ ಮಟ್ಟದ ಕ್ರೀಡಾಕೂಟಗಳ ಸಮಯದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಿವೆ. ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳು ಸಾಮಾನ್ಯವಾಗಿ ಅಭಿಮಾನಿಗಳ ಒಡನಾಟಕ್ಕೆ ಮತ್ತು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತವೆ. ಆದರೆ, ಇದೀಗ ಕಿರುಕುಳ ಮತ್ತು ಬೆದರಿಕೆ ಹಾಕುವ ವೇದಿಕೆಯಾಗಿ ಬಳಕೆ ಮಾಡಿಕೊಳ್ಳುತ್ತಿದ್ಧಾರೆ ಎನ್ನುವ ಆರೋಪಗಳಿವೆ. ಇದೀಗ ಪಾರಿಖ್ ತೆಗೆದುಕೊಂಡಿರುವ ನಿರ್ಧಾರದ ಪ್ರಕಾರ, ಕಿಡಿಗೇಡಿಗಳಿಗೆ ತಕ್ಕ ಶಿಕ್ಷಯಾದ್ರೆ, ಇನ್ಮುಂದೆ ಇಂತಹ ಕಟ್ಟ ದಾರಿ ತುಳಿಯುವವರ ಸಂಖ್ಯೆ ಕಡಿಮೆಯಾದಂತಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+