IPL 2023: ಆರ್‌ಸಿಬಿ ಐಕಾನ್ ವಿರಾಟ್ ಕೊಹ್ಲಿಗೆ 2023ರ ಐಪಿಎಲ್ ಏಕೆ ವಿಶೇಷವಾಗಿದೆ?

2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಸೀಸನ್‌ಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲಾ ಹತ್ತು ತಂಡಗಳು ಶಿಬಿರ ಸೇರಿಕೊಂಡು ಸಿದ್ಧತೆ ಆರಂಭಿಸಿವೆ. ಮಾರ್ಚ್ 31ರಂದು ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.

ಅದೇ ರೀತಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಎಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡುವ ಮೂಲಕ ತಮ್ಮ ಐಪಿಎಲ್ ಅಭಿಯಾನ ಆರಂಭಿಸಲಿವೆ.

Indian Premier League 2023: Why IPL 2023 Is Special For RCB Star Batsman Virat Kohli?

ಐಪಿಎಲ್‌ನ ಎಲ್ಲಾ 15 ಋತುಗಳಲ್ಲಿ ಆಡಿದ ಕೆಲವೇ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಐಪಿಎಲ್‌ನ ಉದ್ಘಾಟನಾ ಆವೃತ್ತಿಯಿಂದಲೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಭಾಗವಾಗಿದ್ದು, ಪಂದ್ಯಾವಳಿಯ ಅತಿದೊಡ್ಡ ಐಕಾನ್‌ಗಳಲ್ಲಿ ಒಬ್ಬರಾಗಿದ್ದಾರೆ.

ವಿರಾಟ್ ಕೊಹ್ಲಿ ಅವರ ಅತ್ಯುತ್ತಮ ಐಪಿಎಲ್ ಪ್ರದರ್ಶನ 2016ರಲ್ಲಿ ಬಂದಿತ್ತು. ಆ ಪಂದ್ಯಾವಳಿಯಲ್ಲಿ ವಿರಾಟ್ ಕೊಹ್ಲಿ 4 ಶತಕಗಳು ಸೇರಿದಂತೆ 973 ರನ್ ಗಳಿಸಿದ್ದರು. ಅದು ಇಂದಿಗೂ ದಾಖಲೆಯಾಗಿದೆ.

Indian Premier League 2023: Why IPL 2023 Is Special For RCB Star Batsman Virat Kohli?

ಆದರೆ, ಅಂದಿನಿಂದ ವಿರಾಟ್ ಕೊಹ್ಲಿ ಅಂತಹ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. 2016ರ ನಂತರ ಎರಡು ಬಾರಿ 400+ ರನ್ ಮತ್ತು ಒಂದು ಬಾರಿ 300+ ರನ್‌ಗಳನ್ನು ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್ ವಿರಾಟ್ ಕೊಹ್ಲಿಗೆ ಅತ್ಯುತ್ತಮ ಋತುವಾಗಬಹುದು ಎಂದು ಅಂದಾಜಿಸಲಾಗಿದೆ.

ಐಪಿಎಲ್ 2023 ವಿರಾಟ್ ಕೊಹ್ಲಿಯ ಅತ್ಯುತ್ತಮ ಸೀಸನ್ ಆಗಲು ಕಾರಣ
ಕಳೆದ ವರ್ಷದ ಐಪಿಎಲ್‌ನಲ್ಲಿ 22.73ರ ಸರಾಸರಿ ಮತ್ತು 116ರ ಸ್ಟ್ರೈಕ್‌ರೇಟ್‌ನಲ್ಲಿ 341 ರನ್ ಬಾರಿಸಿದ್ದರು. ಆದರೆ ಈ ವರ್ಷ ವಿಭಿನ್ನವಾಗಿದೆ. ಐಪಿಎಲ್ 2022ರ ನಂತರ ವಿರಾಟ್ ಕೊಹ್ಲಿ ತಮ್ಮ 71ನೇ ಶತಕದ ಬರವನ್ನು ಕೊನೆಗೊಳಿಸಿದ್ದಾರೆ. ಐಪಿಎಲ್ ನಂತರ ಈವರೆಗೆ ಒಟ್ಟು 5 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ.

Indian Premier League 2023: Why IPL 2023 Is Special For RCB Star Batsman Virat Kohli?

ಇದೀಗ ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನಿರ್ವಹಿಸಿ, ಯಾವುದೇ ಒತ್ತಡವಿಲ್ಲದೇ ಹಾಗೂ ಭಾರವಿಲ್ಲದ ಮನಸ್ಸಿನೊಂದಿಗೆ ಐಪಿಎಲ್ 2023ರಲ್ಲಿ ಆಡುತ್ತಿದ್ದಾರೆ.

ಇನ್ನು 2023ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿಯ ತವರು ಮೈದಾನ ಹಾಗೂ ತಮ್ಮ ನೆಚ್ಚಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲು ಹಿಂತಿರುಗುತ್ತಿದ್ದಾರೆ.

RCB Unbox Event 2023: ಎಂ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪೂರ್ಣ ತಂಡದ ಅಭ್ಯಾಸ ಪಂದ್ಯದ ದಿನಾಂಕ, ಸಮಯ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದರಿಂದ, ಬ್ಯಾಟ್ಸ್‌ಮನ್‌ಗಳ ಸ್ವರ್ಗವನ್ನಾಗಿ ಮಾಡುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ ಐಪಿಎಲ್ 2023ರಲ್ಲಿ ಆರ್‌ಸಿಬಿ ಪರ ಆಡಲು ತುದಿಗಾಲಲ್ಲಿ ನಿಂತಿದ್ದಾರೆ.

2010ರಿಂದ ವಿರಾಟ್ ಕೊಹ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಾಸರಿ 38ರ ಸರಾಸರಿ ಮತ್ತು 140ರ ಸ್ಟ್ರೈಕ್‌ರೇಟ್‌ನೊಂದಿಗೆ 1500ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಆರ್‌ಸಿಬಿ ತವರು ಮೈದಾನ ಎಂ ಚಿನ್ನಸ್ವಾಮಿಯಲ್ಲಿ 3 ಶತಕಗಳು ಮತ್ತು 16 ಅರ್ಧ ಶತಕಗಳನ್ನು ವಿರಾಟ್ ಕೊಹ್ಲಿ ಗಳಿಸಿದ್ದಾರೆ.

Virat Kohli: ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಫಾರ್ಮ್ ಎದುರಾಳಿಗಳ ನಿದ್ದೆಗೇಡಿಸಿದೆ; ಆಂಗ್ಲ ಮಾಜಿ ಕ್ರಿಕೆಟಿಗ

IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೂರ್ಣ ತಂಡ:

ಫಾಫ್ ಡು ಪ್ಲೆಸಿಸ್ (ನಾಯಕ), ಫಿನ್ ಅಲೆನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಸುಯಶ್ ಪ್ರಭುದೇಸಾಯಿ, ಮೈಕಲ್ ಬ್ರೇಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಸೋನು ಯಾದವ್, ಮನೋಜ್ ಭಾಂಡಗೆ, ಆಕಾಶ್ ದೀಪ್, ಜೋಶ್ ಹ್ಯಾಝಲ್‌ವುಡ್, ಸಿದ್ದಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಅವಿನಾಶ್ ಸಿಂಗ್, ರಾಜನ್ ಕುಮಾರ್, ರೀಸ್ ಟೋಪ್ಲೆ, ಹಿಮಾಂಶು ಶರ್ಮಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+