4,4,4,4,4,4,4,4.. 6,6,6,6.. 81, 165.. ಏನು ಗುರು ನೀನ್ ಮನುಷ್ಯನಾ? ವೈಭವ್ ಸೂರ್ಯವಂಶಿ ಆಟಕ್ಕೆ ಮೆಚ್ಚುಗೆಗಳ ಸುರಿಮಳೆ
India vs Zimbabwe T20I: ಹರಾರೆಯಲ್ಲಿ ಭಾನುವಾರ (ಜುಲೈ 26) ನಡೆದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆ ವಿರುದ್ಧ 35 ರನ್‌ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. 15 ವರ್ಷದ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಈ ಗೆಲುವಿಗೆ ಪ್ರಮುಖ ಪಾತ್ರವಹಿಸಿತು. ಹಾಗಾದ್ರೆ ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಅದರಂತೆಯೇ ಮೊದಲು ಬ್ಯಾಟ್ ಬೀಸಿದ ಭಾರತ ತಂಡವು 'ವಂಡರ್ ಕಿಡ್' ವೈಭವ್ ಸೂರ್ಯವಂಶಿ ಅವರು ಸಿಡಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಬಳಿಕ ಬ್ಯಾಟಿಂಗ್‌ಗಿಳಿದ ಜಿಂಬಾಬ್ವೆ 7 ವಿಕೆಟ್ ಕಳೆದುಕೊಂಡು 157 ರನ್‌ಗಳನ್ನ ಮಾತ್ರ ಕಲೆಹಾಕಿ ಹೀನಾಯ ಸೋಲು ಕಂಡಿತು.

ವೈಭವ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾಗೆ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಆಟ ಆಡಿ ಉತ್ತಮ ಆರಂಭ ನೀಡಿದರು. 15 ವರ್ಷದ ಈ ಉದಯೋನ್ಮುಖ ಪ್ರತಿಭೆ ಕೇವಲ 49 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 81 ರನ್ ಬಾರಿಸಿದರು. ಈ ಮೂಲಕ ಭಾರತ ತಂಡ 20 ಓವರ್‌ಗಳಲ್ಲಿ 192 ರನ್‌ಗಳ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಇಶಾನ್ ಕಿಶನ್ 29(26), ನಾಯಕ ಶ್ರೇಯಸ್ ಅಯ್ಯರ್ 27(18), ರಿಂಕು ಸಿಂಗ್ 25(14), ತಿಲಕ್ ವರ್ಮಾ ಅಜೇಯ 11(9) ರನ್‌ಗಳ ಕೊಡುಗೆ ನೀಡಿದರು.
ಜಿಂಬಾಬ್ವೆ ಕ್ಲೀನ್ ಸ್ವೀಪ್ ಮಾಡಿದ ಭಾರತ
ಬಳಿಕ ಟೀಮ್ ಇಂಡಿಯಾ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ಪರ ರಯಾನ್ ಬರ್ಲ್ ಅಜೇಯ 54(43) ರನ್ ಬಾರಿಸಿ ಉತ್ತರ ಹೋರಾಟ ನಡೆಸಿದರು. ಆದರೂ ಅವರಿಗೆ ಸರಿಯಾಗಿ ಸಾಥ್ ಸಿಗಲಿಲ್ಲ. ಅಂತಿಮವಾಗಿ ಆತಿಥೇಯ ಜಿಂಬಾಬ್ವೆ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 157 ರನ್‌ಗಳಷ್ಟೇ ಕಲೆಹಾಕಲು ಸಾಧ್ಯವಾಯಿತು.
ಜಿಂಬಾಬ್ವೆ ತಂಡ ಪರ ಬ್ಯಾಟ್ ಬೀಸಿದ ರಯಾನ್ ಬರ್ಲ್ 43 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ 54(43) ರನ್ ಸಿಡಿಸಿದರು. ಉಳಿದಂತೆ ವೆಸ್ಲಿ ಮಾಧೆವೆರೆ 28(25), ಬೆನ್ ಕರನ್ 20(19), ಡಿಯಾನ್ ಮೈಯರ್ಸ್ 19(15), ಬ್ರಾಡ್ ಇವಾನ್ಸ್ 14(13) ರನ್ ಗಳಿಸಿದರೆ, ಉಳಿದವರು ಒಂದಕ್ಕಿ ದಾಟಲು ಆಗಲಿಲ್ಲ. ಈ ಮೂಲಕ ಟೀಮ್ ಇಂಡಿಯಾ ಬೌಲರ್‌ಗಳ ವಿರುದ್ಧ ಜಿಂಬಾಬ್ವೆ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದಂತೂ ನಿಜ.
ಮಯಾಂಕ್ ಯಾದವ್ ಮಾರಕ ಬೌಲಿಂಗ್ ದಾಳಿ
ಭಾರತದ ಪರ ಮಯಾಂಕ್ ಯಾದವ್ ನಾಲ್ಕು ಓವರ್ ಬೌಲಿಂಗ್ ಎಸೆದು ಕೇವಲ 29 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು. ಯಶ್ ಠಾಕೂರ್ 2 ವಿಕೆಟ್ ಪಡೆದರೆ, ಅಶೋಕ್ ಶರ್ಮಾ ಹಾಗೂ ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಕಿತ್ತು ಜಿಂಬಾಬ್ವೆಗೆ ಸೋಲಿಣಿಸುವಲ್ಲಿ ಯಶಸ್ವಿಯಾದರು. ಒಟ್ಟಿನಲ್ಲಿ ಹೇಳುವುದಾದರೆ ಬ್ಯಾಟಿಂಗ್‌ನಲ್ಲಿ ವೈಭವ್ ಸೂರ್ಯವಂಶಿ ಮಿಂಚಿದರೆ, ಬೌಲಿಂಗ್‌ನಲ್ಲಿ ಮಯಾಂಕ್ ಆಕ್ರಮಣಕಾರಿ ಬೌಲಿಂಗ್ ದಾಳಿ ನಡೆಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.
ಭಾರತ, ಜಿಂಬಾಬ್ವೆ ಪ್ಲೇಯಿಂಗ್ 11
ಭಾರತ ಪ್ಲೇಯಿಂಗ್ 11: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಸೂರ್ಯಾಂಶ್ ಶೆಡ್ಗೆ, ರಿಂಕು ಸಿಂಗ್, ರವಿ ಬಿಷ್ಣೋಯ್, ಅಶೋಕ್ ಶರ್ಮಾ, ಯಶ್ ಠಾಕೂರ್, ಮಯಾಂಕ್ ಯಾದವ್.
ಜಿಂಬಾಬ್ವೆ ಪ್ಲೇಯಿಂಗ್ 11: ಬ್ರಿಯಾನ್ ಬೆನೆಟ್, ಬೆನ್ ಕರನ್, ಡಿಯಾನ್ ಮೈಯರ್ಸ್, ಸಿಕಂದರ್ ರಜಾ (ನಾಯಕ), ರಯಾನ್ ಬರ್ಲ್, ವೆಸ್ಲಿ ಮಾಧೆವೆರೆ, ತಡಿವಾನಶೆ ಮರುಮನಿ (ವಿಕೆಟ್ ಕೀಪರ್), ಬ್ರಾಡ್ ಇವಾನ್ಸ್, ನ್ಯೂಮನ್ ನ್ಯಾಮ್ಹುರಿ, ವೆಲ್ಲಿಂಗ್ಟನ್ ಮಸಕಡ್ಜ, ಬ್ಲೆಸ್ಸಿಂಗ್ ಮುಜರಾಬಾನಿ.


Click it and Unblock the Notifications
