Rohit Sharma: ಹಿಟ್‌ ಮ್ಯಾನ್‌ ರೋಹಿತ್‌ ಶರ್ಮಾ ಮುಡಿಗೆ ವಿಶ್ವ ದಾಖಲೆ ಸರದಾರನ ಪಟ್ಟ

Rohit Sharma : ಕಟಕ್‌ನಲ್ಲಿ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ಫೆಬ್ರವರಿ 09ರಂದು ಭಾರತ ಹಾಗೂ ಇಂಗ್ಲೆಂಡ್ ಏಕದಿನ ಸರಣಿಯ ಎರಡನೇ ಪಂದ್ಯ ನಡೆದಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್‌ ತಂಡ ಭಾರತಕ್ಕೆ 305 ರನ್‌ಗಳ ಗುರಿ ನೀಡಿತ್ತು. ಟೀಂ ಇಂಡಿಯಾ ಬ್ಯಾಟರ್‌ಗಳು ಕೇವಲ 44.3 ಓವರ್‌ಗಳಲ್ಲಿ ಎಲ್ಲಾ ರನ್‌ಗಳನ್ನು ಚಚ್ಚಿದರು. ಈ ವೇಳೆ ಆಂಗ್ಲ ಬೌಲರ್‌ಗಳನ್ನು ಬೆಂಡೆತ್ತುವ ಮೂಲಕ ಹೆಚ್ಚು ರನ್‌ ಗಳಿಸಿ ರೋಹಿತ್‌ ಶರ್ಮಾ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.

ಮೊದಲಿಗೆ ಕ್ರೀಸ್‌ಗಳಿದ ಶುಭ್‌ಮನ್‌ ಗಿಲ್‌ ಹಾಗೂ ರೋಹಿತ್‌ ಶರ್ಮಾ ಬೌಂಡರಿ, ಸಿಕ್ಸರ್‌ಗಳನ್ನು ಚಚ್ಚುವ ಮೂಲಕ ಆಗ್ಲ ಬೌಲರ್‌ಗಳ ಬೆವರಿಳಿಸಿದರು. ಗಿಲ್‌ 52 ಬಾಲ್‌ಗಳಿಗೆ 60 ರನ್‌ಗಳನ್ನು ಬಾರಿಸಿ ವಿಕೆಟ್‌ ಒಪ್ಪಿಸಿದರು. ಬಳಿ ಇನ್ನೂ ಕ್ಷೀಸ್‌ನಲ್ಲಿದ್ದ ಹಿಟ್‌ ಮ್ಯಾನ್‌ ಕೇವಲ 90 ಎಸೆತಗಳಲ್ಲಿ 119 ರನ್‌ಗಳನ್ನು ಗಳಿಸಿ ಇಂಗ್ಲೆಂಟ್‌ ನೀಡಿದ್ದ ಬೃಹತ್‌ ಗುರಿಯನ್ನು ಮುಟ್ಟಲು ಪ್ರಮುಖ ಪಾತ್ರವಹಿಸಿದರು.

Ind vs End 2nd ODI Cricket Rohit Sharma has World Record After 30 Years

ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಕೇವಲ 90 ಎಸೆತಗಳಲ್ಲಿ ರೋಹಿತ್ ಶರ್ಮಾ ಅವರು 7 ಸಿಕ್ಸ್ ಹಾಗೂ 12 ಬೌಂಡರಿಗಳೊಂದಿಗೆ 119 ರನ್‌ಗಳನ್ನು ಚಚ್ಚಿದರು. ಈ ಮೂಲಕ ರೋಹಿತ್‌ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ನೂತನ ವಿಶ್ವ ದಾಖಲೆಯೊಂದನ್ನು ಬರೆದಿದ್ದಾರೆ. ಸನತ್ ಜಯಸೂರ್ಯ ಹಾಗೂ ತಿಲಕರತ್ನೆ ದಿಲ್ಶಾನ್ ಅವರ ದಾಖಲೆಯನ್ನ ಮುರಿದಿದ್ದಾರೆ.

ಭಾರತ ತಂಡ ನಾಯಕ ರೋಹಿತ್ ಶರ್ಮಾ ಅವರು ಅಬ್ಬರದ ಬ್ಯಾಟಿಂಗ್‌ ಮೂಲಕ ಕಡಿಮೆ ಬಾಲ್‌ಗಳಲ್ಲಿ ಶತಕ ಸಿಡಿಸಿದರು. ಕೇವಲ 76 ಎಸೆತಗಳಲ್ಲಿ ಶತಕ ಪೂರೈಸಿದ್ದು, ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕಟಕ್‌ನಲ್ಲಿ ಸಿಡಿಸಿದ ಈ ಶತಕ 32ನೇ ಏಕದಿನ ಪಂದ್ಯವಾಗಿದೆ. ಅದರಲ್ಲೂ ಈ 32 ಸೆಂಚ್ಯೂರಿಗಳಲ್ಲಿ 22 ಸೆಂಚುರಿಗಳು 30 ವರ್ಷಗಳ ನಂತರ ಸಿಡಿಸಿರುವುದು ವಿಶೇಷವಾಗಿದೆ.

30 ವರ್ಷಗಳ ಬಳಿಕ ವಿಶ್ವ ದಾಖಲೆ: ಇದಕ್ಕೂ ಮುನ್ನ ಶ್ರೀಲಂಕಾದ ಇಬ್ಬರು ದಾಂಡಿಗರಾದ ಜಯಸೂರ್ಯ ಹಾಗೂ ತಿಲಕರತ್ನೆ ದಿಲ್ಶಾನ್ ಅವರು ಈ ದಾಖಲೆ ಮಾಡಿದ್ದರು. ಇವರು ಕೂಡ 30 ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ತಲಾ 21 ಶತಕಗಳನ್ನು ಸಿಡಿಸಿ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದರು. ಇದೀಗ ಈ ದಾಖಲೆಯನ್ನು ಟೀಂ ಇಂಡಿಯಾ ತಂಡದ ಹಿಟ್‌ ಮಾನ್‌ ರೋಹಿತ್‌ ಶರ್ಮಾ ಅವರು ಮುರಿದಿದ್ದಾರೆ. ಈ ಮೂಲಕ ಅವರ ಮುಡಿಗೆ ವಿಶ್ವ ದಾಖಲೆ ದಾಖಲೆ ಸರದಾರನ ಪಟ್ಟ ಬಂದಿದೆ. ಈ ದಾಖಲೆ ನಿರ್ಮಿಸಿ ಟೀಕೆಕಾರರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.

ಕ್ರಿಸ್‌ ಗೇಲ್ ದಾಖಲೆ ಉಡೀಸ್: ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್‌ 331 ಸಿಕ್ಸರ್ ಸಿಡಿಸಿದ್ದರೆ, ಟೀಂ ಇಂಡಿಯಾದ ರೋಹಿತ್ ಶರ್ಮಾ ಅವರು ನಿನ್ನೆ ನಡೆದ ಪಂದ್ಯದ ಬಳಿಕ 338 ಸಿಕ್ಸರ್‌ಗಳ ಸಿಡಿಸಿದ್ದಾರೆ. ಈ ಮೂಲಕ ಅನ್ನು ರೋಹಿತ್‌ ಶರ್ಮಾ ಅವರು ಕ್ರಿಸ್‌ ಗೇಲ್ ದಾಖಲೆಯನ್ನು ಹಿಂದಿದ್ದಿದ್ದಾರೆ.

ಶಾಹೀದ್ ಅಫ್ರಿದಿ ಉಡೀಸ್: ಅಲ್ಲದೆ, 14 ಸಿಕ್ಸರ್‌ಗಳನ್ನು ಸಿಡಿಸಿದರೆ, ರೋಹಿತ್ ಏಕದಿನ ಕ್ರಿಕೆಟ್‌ಲ್ಲಿ ಅತಿಹೆಚ್ಚು ಸಿಕ್ಸ್‌ಗಳನ್ನು ಬಾರಿಸಿದ ವಿಶ್ವದಾಖಲೆಯನ್ನು ಕೂಡ ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ. ಇದೀಗ ಈ ದಾಖಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಹೆಸರಿನಲ್ಲಿದ್ದು, ಅವರು 369 ಇನ್ನಿಂಗ್ಸ್‌ಗಳಿಂದ 351 ಸಿಕ್ಸರ್ ಬಾರಿಸಿದ್ದಾರೆ.

ಮತ್ತೊಂದೆಡೆ ಈ ಶತಕದ ಮೂಲಕ ರೋಹಿತ್ ಶರ್ಮಾ ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್‌ಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಏರಿದ್ದಾರೆ. 259 ಇನಿಂಗ್ಸ್ ಆಡಿರುವ ರೋಹಿತ್‌ ಶರ್ಮಾ ಅವರು ಒಟ್ಟು 10,987 ರನ್ ಬಾರಿಸಿ ಈ ದಾಖಲೆ ಬರೆದಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದು, ಅವರು 18,426 ರನ್ ಬಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಾಣ ಮಾಡಿದ್ದಾರೆ.

ಭಾನುವಾರ (ಫೆಬ್ರವರಿ 09) ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 304 ರನ್‌ ಗಳಿಸಿತ್ತು. ಈ ಗುರಿಯನ್ನ ಬೆನ್ನತ್ತಿದ ಟೀಂ ಇಂಡಿಯಾ 44.3 ಓವರ್‌ಗಳಲ್ಲಿ ಪಂದ್ಯ ಮುಗಿಸಿತು. ರೋಹಿತ್ ಶರ್ಮಾ 119 ಸಿಡಿಸಿದ ಶತಕ, ಶುಭ್‌ಮನ್ ಗಿಲ್ 60) ಅರ್ಧಶತಕ ಹಾಗೂ ಶ್ರೇಯಸ್ ಅಯ್ಯರ್ 44, ಅಕ್ಷರ್ ಪಟೇಲ್ 43 ರನ್‌ಗಳ ನೆರವಿನಿಂದ 44.3 ಓವರ್‌ಗಳಲ್ಲೇ ವಿಜಯ ಮಾಲೆ ಹಾಕಿಕೊಂಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+