Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ
Suryakumar Yadav: ಟೀಂ ಇಂಡಿಯಾದ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಈ ವರ್ಷದ 2026 ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅಸಾಧಾರಣ ಪ್ರತಿಭೆ ತೋರಿಸಿದರು. ಆದರೆ ಮುಂದಿನ ವರ್ಷದ ಟೂರ್ನಿಯ ನಾಯಕತ್ವವು ಬದಲಾಗುವ ಸಾಧ್ಯತೆ ಇದೆ. ಟ್ರೋಫಿ ಗೆದ್ದರು ಐಸಿಸಿ ಸೂರ್ಯಕುಮಾರ್ ಯಾದವ್ ಅವರನ್ನು ಮುಂದಿನ ಟಿ20 ವಿಶ್ವಕಪ್ ಟೂರ್ನ್ಮೆಂಟ್ನಿಂದ ಹೊರಗಿಟ್ಟಿದೆ. ಹೀಗಾಗಿ ಅವರ ಬಗ್ಗೆ ಇದೀಗ ಹೆಚ್ಚಿನ ಚರ್ಚೆಗಳು ಆಗುತ್ತಿವೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ತವರಿನಲ್ಲಿ ಅಸಾಧಾರಣ ವಿಜಯಗಳೊಂದಿಗೆ ಗೆಲುವು ಕಾಣಲು ನಾಯಕ ಸೂರ್ಯಕುಮಾರ್ ಯಾದವ್ ಕಾರಣವಾಗಿದ್ದರು. ಟೂನಿರ್ಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ ನಾಯಕತ್ವ, ಕೌಶಲ್ಯದಿಂದ ಮೊದಲ ಬಾರಿಗೆ ತವರಿನಲ್ಲಿ ಭಾರತ ಟ್ರೋಫಿ ಮುಡಿಗೇರಿಸಿಕೊಂಡಿತು. ಟ್ರೋಫಿ ಗೆದ್ದರೂ ನಾಯಕ ಸೂರ್ಯಕುಮಾರ್ ಯಾದವ್ಗೆ ಜಯ್ ಶಾ ನೇತೃತ್ವದ ಐಸಿಸಿ 48 ಗಂಟೆಗಳಲ್ಲಿ ಆಘಾತ ನೀಡಿದೆ.

ಐಸಿಸಿ ಇತ್ತೀಚೆಗೆ ಟಿ20 ವಿಶ್ವಕಪ್ 2026 ಟೂರ್ನಮೆಂಟ್ ತಂಡವನ್ನು ಘೋಷಿಸಿದೆ, ಆದರೆ ಇದರಲ್ಲಿ ಪ್ರತಿಭಾನ್ವಿತ ನಾಯಕ ಸೂರ್ಯಕುಮಾರ್ ಯಾದವ್ ಅವರ ಹೆಸರಿಲ್ಲ. ಟೂರ್ನಮೆಂಟ್ ತಂಡ ಫೈನಲ್ ಪಂದ್ಯದ ಒಂದು ದಿನದ ನಂತರ ತಂಡ ರಚನೆ ಬಗ್ಗೆ ಅಧಿಕಾರಿ ಮಾಹಿತಿ ಬಿಡುಗಡೆ ಆಗಿದೆ. ಈ ತಂಡದಲ್ಲಿ ನಾಲ್ವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಆದರೆ ಅದರಲ್ಲಿ ಪ್ರಸ್ತಕ ವರ್ಷದ ಟೂರ್ನಿ ಗೆಲ್ಲಲು ಕಾರಣರಾದ ಸೂರ್ಯಕುಮಾರ್ ಹೆಸರಿಲ್ಲ. ಹೀಗಾಗಿ ಅವರು ಮುಂದಿನ ವರ್ಷ ಟೀಂ ಇಂಡಿಯಾ ನಾಯಕತ್ವ ವಹಿಸುವುದು ಅನುಮಾನ ಎನ್ನಲಾಗಿದೆ.
ಸೂರ್ಯಕುಮಾರ್ ಯಾದವ್ ಬಿಟ್ಟು ನಾಲ್ವರು ಆಯ್ಕೆ
ಐಸಿಸಿ ಘೋಷಿಸಿದ ಈ ವಿಶ್ವಕಪ್ ತಂಡದ ನಾಯಕರಾಗಿ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ ಐಡೆನ್ ಮಾರ್ಕ್ರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಕ್ರಿಕೆಟಿಗರಾದ ಇಯಾನ್ ಬಿಷಪ್, ನಟಾಲಿ ಜರ್ಮನೋಸ್, ಪ್ರಸಾರಕ ಇಯೋನ್ ಮಾರ್ಗನ್, ಐಸಿಸಿ ವಕ್ತಾರ ಗೌರವ್ ಸಕ್ಸೇನಾ ಮತ್ತು ಕ್ರೀಡಾ ಪತ್ರಕರ್ತ ರೆಕ್ಸ್ ಕ್ಲೆಮೆಂಟೈನ್ ಈ ತಂಡವನ್ನು ಆಯ್ಕೆ ಮಾಡಿದ್ದಾರೆ. ಅವರು ಸೂರ್ಯಕುಮಾರ್ ಯಾದವ್ ಅವರಿಗೆ ತಂಡದಲ್ಲಿ ಸ್ಥಾನ ನೀಡದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ತಂಡದಿಂದ ಕೈ ಬಿಡಲು ಕಾರಣವೇನು?
ಸೂರ್ಯಕುಮಾರ್ ಯಾದವ್ ಅವರು ಟೀಂ ಇಂಡಿಯಾ ನಾಯಕತ್ವದಲ್ಲಿ ಉತ್ತಮವಾಗಿದ್ದಾರೆ. ಆದರೆ ತಮ್ಮದೇ ಆದ ವೈಯಕ್ತಿಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗಿದೆ. ಸೂರ್ಯಕುಮಾರ್ ಅಮೆರಿಕ ವಿರುದ್ಧದ ಪಂದ್ಯದಲ್ಲಿ ಅಜೇಯ 84 ರನ್ ಗಳಿಸುವ ಮೂಲಕ ಭಾರತವನ್ನು ಪತನದಿಂದ ರಕ್ಷಿಸಿದರು. ಆದರೆ ನಂತರದ ಪಂದ್ಯಗಳಲ್ಲಿ ಅವರು 12, 32, 34, 18, 33, 18, 11, 0 ರನ್ ಗಳಿಸಿದರು. ಈ ಪ್ರದರ್ಶನ ಅವರಿಗೆ ಹಿನ್ನಡೆ ಉಂಟು ಮಾಡಿದೆ. ಇದನ್ನು ನಿರೀಕ್ಷಿತ ಪ್ರದರ್ಶನವೆಂದು ಪರಿಗಣಿಸಲಾಗಿಲ್ಲ.
ಹೊಸ ತಂಡದಲ್ಲಿ ಯಾರೆಲ್ಲ ಇದ್ದಾರೆ? ಸದಸ್ಯರ ಹೆಸರು
ಪಾಕಿಸ್ತಾನದ ಆರಂಭಿಕ ಆಟಗಾರ ಸಾಹಿಬ್ಜಾದಾ ಫರ್ಹಾನ್, ಭಾರತದ ವಿಕೆಟ್ ಕೀಪರ್-ಕಮ್-ಓಪನರ್ ಸಂಜು ಸ್ಯಾಮ್ಸನ್, ಮತ್ತೊಬ್ಬ ಸ್ಟಾರ್ ಆಟಗಾರ ಇಶಾನ್ ಕಿಶನ್, ದಕ್ಷಿಣ ಆಫ್ರಿಕಾ ನಾಯಕ ಮಾರ್ಕ್ ಕ್ರಮ್, ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್ ಆಲ್ ರೌಂಡರ್ ವಿಲ್ ಜೇಕ್ಸ್, ವೆಸ್ಟ್ ಇಂಡೀಸ್ ಆಲ್ ರೌಂಡರ್ ಜೇಸನ್ ಹೋಲ್ಡರ್, ಭಾರತದ ವೇಗಿ ಜಸ್ಪ್ರಿತ್ ಬುಮ್ರಾ, ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್ಗಿಡಿ, ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್, ಜಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಜರಬಾನಿ ಮತ್ತು 12 ನೇ ಆಟಗಾರನಾಗಿ ಆಯ್ಕೆಯಾದ ಶಾಡ್ಲಿ ವ್ಯಾನ್ ಶಾಲ್ವಿಜ್ಕ್ ಇದ್ದಾರೆ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications