ಫ್ಲೈಟ್ ಮಿಸ್; ಟಿ20 ವಿಶ್ವಕಪ್ ಟೀಮ್‌ನಿಂದ ಈ ಆಟಗಾರ ಔಟ್

ನವದೆಹಲಿ, ಅ. 4: ಆಸ್ಟ್ರೇಲಿಯಾಗೆ ತೆರಳಲು ಫ್ಲೈಟ್ ಮಿಸ್ ಮಾಡಿಕೊಂಡಿದ್ದು ವೆಸ್ಟ್ ಇಂಡೀಸ್ ಆಟಗಾರ ಶಿಮ್ರಾನ್ ಹೆಟ್ಮಯರ್ ದುಬಾರಿಯಾಗಿ ಪರಿಣಮಿಸಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನ ವೆಸ್ಟ್ ಇಂಡೀಸ್ ತಂಡದಿಂದ ಹೆಟ್ಮಯರ್ ಡ್ರಾಪ್ ಅಗಿದ್ದಾರೆ.

ಶಿಮ್ರಾನ್ ಹೆಟ್ಮರ್ ಬದಲು ಶಮರಾ ಬ್ರೂಕ್ಸ್ ಅವರಿಗೆ ತಂಡದಲ್ಲಿ ಅವಕಾಶ ಕೊಡಲಾಗಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್ (ಸಿಡಬ್ಲ್ಯುಐ) ಈ ವಿಚಾರವನ್ನು ಖಚಿತಪಡಿಸಿದೆ.

ಅಕ್ಟೋಬರ್ 1ರಂದು ಆಸ್ಟ್ರೇಲಿಯಾಗೆ ತೆರಳಲು ಹೆಟ್ಮಯರ್‌ಗೆ ಫ್ಲೈಟ್ ಬುಕ್ ಮಾಡಲಾಗಿತ್ತು. ಅವರು ಸೋಮವಾರಕ್ಕೆ ಫ್ಲೈಟ್ ಬುಕ್ ಮಾಡಲು ಕೇಳಿಕೊಂಡರು. ಅದರಂತೆ ಅಕ್ಟೋಬರ್ 3ಕ್ಕೆ ಫ್ಲೈಟ್ ನಿಗದಿ ಮಾಡಲಾಯಿತು. ಆದರೆ, ಸೋಮವಾರವೂ ಹೆಟ್ಮಯರ್ ಫ್ಲೈಟ್ ಹತ್ತಲು ವಿಫಲರಾಗಿದರು.

ಈ ಹಿನ್ನೆಲೆಯಲ್ಲಿ ಹೆಟ್ಮಯರ್ ಅವರನ್ನು ತಂಡದಿಂದಲೇ ಕೈಬಿಟ್ಟು ಬ್ರೂಕ್ಸ್‌ರನ್ನು ಆಯ್ಕೆ ಮಾಡಲಾಗಿದೆ.

ಕೌಟುಂಬಿಕ ಕಾರಣ

ಕೌಟುಂಬಿಕ ಕಾರಣ

ಅಕ್ಟೋಬರ್ 1ರಂದು ನಿಗದಿಯಾಗಿದ್ದ ಫ್ಲೈಟ್ ಅನ್ನು ಸೋಮವಾರಕ್ಕೆ ಮುಂದೂಡುವಂತೆ ಹೆಟ್ಮಯರ್ ಕೇಳಿಕೊಂಡಾಗಲೇ ಕ್ರಿಕೆಟ್ ವೆಸ್ಟ್ ಇಂಡೀಸ್ ಮುನ್ನೆಚ್ಚರಿಕೆ ನೀಡಿತ್ತು. ಟಿ20 ವಿಶ್ವಕಪ್ ಮಹತ್ವವಾಗಿದ್ದು, ಮತ್ತೊಮ್ಮೆ ಫ್ಲೈಟ್ ಮಿಸ್ ಮಾಡಿದರೆ ತಂಡದಿಂದ ಕೈಬಿಡಲಾಗುವುದು ಎಂದೇ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ ಹೇಳಿತ್ತು.

25 ವರ್ಷದ ಶಿಮ್ರಾನ್ ಹೆಟ್ಮಯರ್ ಕೌಟುಂಬಿಕ ಸಮಸ್ಯೆ ಕಾರಣದಿಂದ ಶನಿವಾರ ಫ್ಲೈಟ್ ಹತ್ತಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಬಹುತೇಕ ವಿಮಾನಗಳು ಬುಕ್ ಆಗಿ ಹೋಗಿರುವುದರಿಂದ ಒಂದು ಸೀಟಿಗಾಗಿಯೂ ಬಹಳ ಶ್ರಮ ಪಡಬೇಕಾಯಿತು. ಸೋಮವಾರಕ್ಕೆ ಹಾಗೂಹೀಗೂ ಒಂದು ಸೀಟು ಹೊಂದಿಸಲಾಯಿತು. ಆದರೆ, ಕೌಟುಂಬಿಕ ಕಾರಣದಿಂದ ಶಿಮ್ರಾನ್ ಹೆಟ್ಮಯರ್ ತಾನು ಮತ್ತೆ ಸೋಮವಾರದ ಸಮಯಕ್ಕೆ ಫ್ಲೈಟ್ ಹತ್ತಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಮೊದಲೇ ಮುನ್ನೆಚ್ಚರಿಕೆ ಕೊಟ್ಟ ಪ್ರಕಾರ ವೆಸ್ಟ್ ಇಂಡೀಸ್ ಕ್ರಿಕೆಟ್ ಸಂಸ್ಥೆ ಶಿಮ್ರಾನ್ ಹೆಟ್ಮಯರ್ ಅವರನ್ನು ತಂಡದಿಂದ ಕೈಬಿಟ್ಟು ಶಮಾರ್ ಬ್ರೂಕ್ಸ್‌ಗೆ ಮಣೆಹಾಕಿದೆ.

ಬ್ರೂಕ್ಸ್ ಅನುಭವಿ ಆಟಗಾರ

ಬ್ರೂಕ್ಸ್ ಅನುಭವಿ ಆಟಗಾರ

34 ವರ್ಷದ ಶಮಾರ್ ಬ್ರೂಕ್ಸ್ ದೇಶೀಯ ಕ್ರಿಕೆಟ್‌ನಲ್ಲಿ ಅನುಭವಿ ಬ್ಯಾಟರ್. ಇತ್ತೀಚೆಗೆ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಜಮೈಕಾ ತಲಾವಾಸ್ ಪರವಾಗಿ ಅವರು ಒಂದು ಶತಕ ಸೇರಿದಂತೆ ಹಲವು ಮಹತ್ವದ ಇನಿಂಗ್ಸ್ ಆಡಿ ತಂಡ ಚಾಂಪಿಯನ್ ಆಗಲು ಪ್ರಧಾನ ಕೊಡುಗೆ ನೀಡಿದ್ದರು.

ಅಷ್ಟೇ ಅಲ್ಲ, ಶಮಾರ್ ಅವರು ಇತ್ತೀಚಿನ ಕೆಲ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಹೀಗಾಗಿ ಅವರನ್ನು ಹೆಟ್ಮಯರ್ ಬದಲು ತಂಡಕ್ಕೆ ಆಯ್ಕೆ ಮಾಡಿ ಟಿ20 ವಿಶ್ವಕಪ್‌ನಲ್ಲಿ ಆಡಲು ಕಳುಹಿಸಲಾಗುತ್ತಿದೆ.

ವೆಸ್ಟ್ ಇಂಡೀಸ್ ಪಂದ್ಯಗಳು

ವೆಸ್ಟ್ ಇಂಡೀಸ್ ಪಂದ್ಯಗಳು

ಅಕ್ಟೋಬರ್ 16ರಂದು ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕೆ ಮುನ್ನ ಆಸ್ಟ್ರೇಲಿಯಾ ವಿರುದ್ಧ ವೆಸ್ಟ್ ಇಂಡೀಸ್ ಅಕ್ಟೋಬರ್ 5ರಿಂದ ಟಿ20 ಸರಣಿಯನ್ನು ಆಡುತ್ತಿದೆ. ಅಕ್ಟೋಬರ್ 5 ಮತ್ತು 7ರಂದು ಎರಡು ಪಂದ್ಯಗಳನ್ನು ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಆಡಲಿವೆ.

ಇನ್ನು ಟಿ20 ವಿಶ್ವಕಪ್‌ನಲ್ಲಿ ಮೊದಲ ಹಂತದಿಂದಲೇ ವೆಸ್ಟ್ ಇಂಡೀಸ್ ಆಡಬೇಕಾಗಿದೆ. ವೆಸ್ಟ್ ಇಂಡೀಸ್ ಇರುವ ಗುಂಪಿನಲ್ಲಿ ಸ್ಕಾಟ್ಲೆಂಡ್, ಜಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳಿವೆ. ಈ ಗುಂಪಿನಿಂದ ಎರಡು ತಂಡಗಳು ಸೂಪರ್-12 ಹಂತಕ್ಕೆ ಪ್ರವೇಶ ಪಡೆಯುತ್ತವೆ.

ವಿಶ್ವಕಪ್ ಪಂದ್ಯಗಳು

ವಿಶ್ವಕಪ್ ಪಂದ್ಯಗಳು

ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16ರಿಂದ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳುತ್ತಿವೆ. ಎರಡು ಹಂತಗಳಲ್ಲಿ ಪಂದ್ಯಾವಳಿ ನಡೆಯಲಿದ್ದು, ಮೊದಲ ಹಂತದಲ್ಲಿ ಎಂಟು ತಂಡಗಳು ಎರಡು ಗುಂಪುಗಳಾಗಿ ವಿಭಾಗಗೊಂಡು ಸೆಣಸಲಿವೆ. ಪ್ರತೀ ಗುಂಪಿನಿಂದ ಎರಡು ತಂಡಗಳಂತೆ ಮೊದಲ ಹಂತದಿಂದ ನಾಲ್ಕು ತಂಡಗಳು ಸೂಪರ್-12 ಹಂತಕ್ಕೆ ತೇರ್ಗಡೆ ಆಗುತ್ತವೆ.

ಸೂಪರ್-12 ಹಂತದಲ್ಲಿ ನೇರವಾಗಿ ಕ್ವಾಲಿಫೈ ಆಗಿರುವ 8 ತಂಡಗಳ ಜೊತೆ ಮೊದಲ ಹಂತದಿಂದ ಪ್ರವೇಶ ಪಡೆದ 4 ತಂಡಗಳು ಸೇರುತ್ತವೆ. ಈ ಹಂತದಲ್ಲೂ ತಲಾ 6 ತಂಡಗಳಂತೆ ಎರಡು ಗುಂಪುಗಳನ್ನು ಮಾಡಲಾಗಿದೆ. ಭಾರತ, ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿದ್ದು ಮೊದಲ ಪಂದ್ಯದಲ್ಲೇ ಮುಖಾಮುಖಿಯಾಗುತ್ತಿವೆ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+