ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

#FIFAWorldCup: 25 ವರ್ಷಗಳಲ್ಲೇ ಗೂಗಲ್‌ ಸರ್ಚ್‌ನಲ್ಲಿ ಅತ್ಯಧಿಕ ಟ್ರಾಫಿಕ್‌- ಸುಂದರ್ ಪಿಚೈ

|
Google Oneindia Kannada News

ವಾಷಿಂಗ್ಟನ್‌, ಡಿಸೆಂಬರ್‌ 19: ಭಾನುವಾರ ರಾತ್ರಿ ನಡೆದ ಫೀಫಾ ವಿಶ್ವಕಪ್ ಫೈನಲ್‌ ಪಂದ್ಯವು ಜಗತ್ತಿನಾದ್ಯಂತ ಪುಟ್‌ಬಾಲ್‌ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಫುಟ್‌ಬಾಲ್‌ನ ಇತಿಹಾಸದಲ್ಲೇ ಅತ್ಯಂತ ರೋಚಕ ಘಟ್ಟ ತಲುಪಿದ ಕೆಲವೇ ಕೆಲ ಪಂದ್ಯಗಳಲ್ಲಿ ನಿನ್ನೆ ನಡೆದ ಪಂದ್ಯವೂ ಒಂದು. ಬಲಿಷ್ಠ ಫ್ರಾನ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಮಣಿಸಿದ ಅರ್ಜೆಂಟೀನಾ ವಿಶ್ವಕಪ್ ತನ್ನದಾಗಿಸಿಕೊಂಡಿತು. ಅರ್ಜೆಂಟೇನಾ ತಂಡದ ಲಯೊನೆಲ್ ಮೆಸ್ಸಿ ಆಟಕ್ಕೆ ಈಡೀ ಜಗತ್ತು ಮನಸೋತಿತು. ಮೆಸ್ಸಿ ಹಾಗೂ ಅರ್ಜೆಂಟೇನಾ ತಂಡಕ್ಕೆ ಜಗತ್ತಿನ ಪ್ರಮುಖರು ಸೇರಿದಂತೆ ಕ್ರೀಡಾಭಿಮಾನಿಗಳು ಅಭಿನಂದನೆಯ ಮಹಾಪೂರವೇ ಹರಿಬಂದಿದೆ.

ಈ ಪಂದ್ಯವು ಇಂಟರ್‌ನೆಟ್‌ನಲ್ಲೂ ಹಲವು ದಾಖಲೆಗಳಿಗೆ ಕಾರಣವಾಗಿದೆ. ಗೂಗಲ್‌ ಸರ್ಚ್‌ನಲ್ಲಿ ಅತ್ಯಂತ ಹೆಚ್ಚು ಟ್ರಾಫಿಕ್‌ ದಾಖಲಿಸಿದ್ದು #FIFAWorldCup.

FIFA World Cup Google Search hits highest-ever traffic in 25 yrs as Messi dazzled

ಗೂಗಲ್‌ ಕಂಪನಿಯ 25 ವರ್ಷಗಳ ಇತಿಹಾಸದಲ್ಲಿ ಅತ್ಯಧಿಕ ಟ್ರಾಫಿಕ್‌ ದಾಖಲಿಸಿದ್ದು ಫಿಪಾ ವಿಶ್ವಕಪ್‌ಗೆ ಸಂಬಂಧಿಸಿದ ಸರ್ಚ್‌ಗಳು.

ಗೂಗಲ್‌ ಕಂಪನಿ ಸಿಇಒ ಸುಂದರ್ ಪಿಚೈ ಅವರೇ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, '#FIFAWorldCup ಫೈನಲ್‌ ಪಂದ್ಯದ ಸಂದರ್ಭದಲ್ಲಿ ಗೂಗಲ್‌ ಸರ್ಚ್‌ನಲ್ಲಿ ಅತ್ಯಂತ ಹೆಚ್ಚು ಟ್ರಾಫಿಕ್‌ ದಾಖಲಾಗಿದೆ. ಇದು ಇಡೀ ಜಗತ್ತು ಒಂದೇ ವಿಚಾರದ ಕುರಿತು ಸರ್ಚ್‌ನಲ್ಲಿ ತೊಡಗಿಕೊಂಡಿತ್ತು' ಎಂದು ತಿಳಿಸಿದ್ದಾರೆ.

FIFA World Cup Google Search hits highest-ever traffic in 25 yrs as Messi dazzled

ಇದುವರೆಗಿನ ಶ್ರೇಷ್ಠ ಪಂದ್ಯಗಳಲ್ಲಿ ಇದು ಒಂದಾಗಿದೆ ಎಂದು ಅವರು ಮೊದಲು ಹೇಳಿದ್ದರು.

1998 ರಲ್ಲಿ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು ಗೂಗಲ್ ಸರ್ಚ್ ಅನ್ನು ಸ್ಥಾಪಿಸಿದರು.

2022 ರಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿರುವ Google search ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ.

ಪ್ರಧಾನಿ ಮೋದಿ ಅಭಿನಂದನೆ

ಫಿಫಾ ವಿಶ್ವಕಪ್‌ ಗೆದ್ದ ಅರ್ಜೆಂಟೀನಾ ದೇಶಕ್ಕೆ ಭಾರತ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಇದೊಂದು ಅತ್ಯದ್ಬುತ ಸಾಧನೆ ಎಂದು ಹಾಡಿ ಹೊಗಳಿದ್ದಾರೆ.

English summary
#FIFAWorldCup recorded the highest traffic on Google search. Google recorded the highest traffic in the company's 25-year history for searches related to the FIFA World Cup. Google CEO Sundar Pichai himself shared this information,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X