IPL 2025: ಐಪಿಎಲ್ 2025 ಟೂರ್ನಿಯಿಂದ ಬಿಸಿಸಿಐಗೆ ಹರಿದುಬಂದಿದ್ದು ಒಂದಲ್ಲ.. ಎರಡಲ್ಲ ಇಷ್ಟು 1,000 ಕೋಟಿ ರೂ.
IPL 2025: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ಗೆ ಸೋಲುಣಿಸಿ ಗೆದ್ದ ಆರ್‌ಸಿಬಿಯು ಮೊಟ್ಟ ಮೊದಲ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಈ ಮೂಲಕ 17 ವರ್ಷಗಳಿಂದ ಈಡೇರದ ಕನಸನ್ನು 18ನೇ ಸೀಸನ್‌ನಲ್ಲಿ ನನಸು ಮಾಡಿಕೊಂಡಿದೆ. ಹಾಗಾದ್ರೆ ಈ ಬಾರಿಯ ಇಂಡಿಯನ್ಸ್ ಪ್ರೀಮಿಯರ್ ಲಿಂಗ್‌ನಿಂದ ಬಿಸಿಸಿಐ ಗಳಿಸಿದ್ದೆಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ 2025 ಫೈನಲ್ ಪಂದ್ಯ ಅಹಮದಬಾದ್‌ನ ನರೇಂದ್ರ ಮೋದಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದು, ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿಯಾಗಿ ಗೆದ್ದು ಮೊದಲ ಬಾರಿ ಟ್ರೋಫಿ ತನ್ನದಾಗಿಸಿಕೊಂಡಿದೆ. ಇನ್ನೂ ಈ ಬಾರಿಯ ಐಪಿಎಲ್‌ನಿಂದ ಬಿಸಿಸಿಐಗೆ ಭರ್ಜರಿ ಆದಾಯ ಹರಿದುಬಂದಿದೆ ಎಂದು ತಿಳಿದುಬಂದಿದೆ.

ಭಾರತ-ಪಾಕಿಸ್ತಾನ ನಡುವೆ ಯುದ್ಧ ಬಿಕ್ಕಟ್ಟು ಹಿನ್ನೆಲೆ ಐಪಿಎಲ್ 2025 ಟೂರ್ನಿಯನ್ನು ಅರ್ಧಕ್ಕೆ ರದ್ದುಪಡಿಸಿ ಒಂದು ವಾರಕ್ಕೆ ಮುಂದೂಡಿಕೆ ಮಾಡಲಾಯಿತು. ಉಳಿದ ಪಂದ್ಯಗಳಿಗೆ ಮತ್ತೆ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಅದರಂತೆಯೇ ಟೂರ್ನಿ ಮೇ 17ರಿಂದ ಆರಂಭವಾಗಿ ಜೂನ್ 3ಕ್ಕೆ ಮುಕ್ತಾಯವಾಯಿತು. ಈ ಬಾರಿಯಂತೂ ಬಿಸಿಸಿಐಗೆ ದೊಡ್ಡ ಮಟ್ಟದಲ್ಲಿ ಆದಾಯ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎರಡು ತಿಂಗಳುಗಳ ಕಾಲ ನಡೆದ ಐಪಿಎಲ್ ಹಬ್ಬಕ್ಕೆ ತೆರೆಬಿದ್ದಿದ್ದು, ವಿಜೇತ ತಂಡಗಳು ಬಿಸಿಸಿಐನಿಂದ ದೊಡ್ಡ ಮಟ್ಟದಲ್ಲಿ ಬಹುಮಾನ ಪಡೆದುಕೊಂಡಿದ್ದು, ಈ ಟೂರ್ನಿಯಲ್ಲಿ ಬಿಸಿಸಿಐ ಒಂದಲ್ಲ ಎರಡಲ್ಲ, ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ಬುಟ್ಟಿಗೆ ಹಾಕಿಕೊಂಡಿದೆ ಎಂದು ತಿಳಿದುಬಂದಿದೆ.
ಐಪಿಎಲ್ ಮೂಲಕ ಬಿಸಿಸಿಐಗೆ ಬರುವ ಅತೀ ದೊಡ್ಡ ಆದಾಯದ ಮೂಲ ಎಂದು ಅದು ಪ್ರಸಾರ ಶುಲ್ಕ. 2025ರ ಐಪಿಎಲ್ ಪ್ರಸಾರ ಹಕ್ಕುಗಳನ್ನು 9,678 ಕೋಟಿ ರೂಪಾಯಿಗೆ ಬಿಸಿಸಿಐ ಮಾರಾಟ ಮಾಡಿದೆ. ಅಂದರೆ ಒಂದು ಪಂದ್ಯದಿಂದ ಬಿಸಿಸಿಐಗೆ ಬರುವ ಆದಾಯ 130.7 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಪ್ರಸಾರದ ಹಕ್ಕುಗಳು ಸ್ಟಾರ್ ಸ್ಪೋರ್ಟ್ಸ್ ಒಡೆತನದಲ್ಲಿದ್ದು, ಡಿಜಿಟಲ್ ಹಕ್ಕುಗಳು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ವಯಾಕಾಮ್ ಒಡೆತನದಲ್ಲಿ ಇದೆ.
ಎಕನಾಮಿಕ್ ಟೈಮ್ಸ್ ಪ್ರಕಾರ, ಐಪಿಎಲ್ 2025ರಲ್ಲಿ ಜಾಹೀರಾತುದಾರರ ಸಂಖ್ಯೆ ಶೇಕಡ 27ರಷ್ಟು ಹೆಚ್ಚಳ ಆಗಿದೆ. ಕಳೆದ ವರ್ಷ ಟಾಟಾ ಗ್ರೂಪ್ ಮುಂದಿನ 5 ವರ್ಷಗಳ ಕಾಲ ಐಪಿಎಲ್ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿದೆ. ಇದಕ್ಕಾಗಿ ಬರೋಬ್ಬರಿ 2,500 ಕೋಟಿ ರೂಪಾಯಿಗೆ ಒಪ್ಪಂದವಾಗಿದೆ. ಈ ಪ್ರಕಾರ, ಟಾಟಾ ಗ್ರೂಪ್ ಪ್ರತಿ ಆವೃತ್ತಿಯ ಟೈಟಲ್ ಪ್ರಾಯೋಜಕತ್ವಕ್ಕಾಗಿ 500 ಕೋಟಿ ರೂಪಾಯಿ ಹಣ ನೀಡುತ್ತದೆ. ಅಲ್ಲದೆ, ಬಿಸಿಸಿಐ ಶೇರಿಂಗ್ ಆಧಾರದ ಮೇಲೆ ಹಲವಾರು ಕಂಪನಿಗಳಿಂದ ಹಣ ಗಿಟ್ಟಿಸಿಕೊಳ್ಳುತ್ತದೆ.
ಬಿಸಿಸಿಐ ಪ್ರತಿ ತಂಡದಿಂದ ಕೇಂದ್ರ, ಪ್ರಾಯೋಜಕತ್ವ ಮತ್ತು ಟಿಕೆಟ್ ಆದಾಯದ ಶೇಕಡ 20ರಷ್ಟು ಪಡೆಯುತ್ತದೆ. ಪರವಾನಗಿ ಆದಾಯದಲ್ಲಿ ಶೇಕಡ 12.5ರಷ್ಟು ಪಾಲು ಪಡೆಯುತ್ತದೆ. 2024ರ ಆರ್ಥಿಕ ವರ್ಷದಲ್ಲಿ ಬಿಸಿಸಿಐ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿತು. 20,686 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ಗಳಿಸಿತು. 2023ರ ಆರ್ಥಿಕ ವರ್ಷದಲ್ಲಿ 16,493 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಇದೀಗ 2024ರ ಅಂಕಿಅಂಶಕ್ಕೆ ಹತ್ತಿರದ ಆದಾಯವನ್ನು ಬುಟ್ಟಿಗಾಕಿಕೊಂಡಿದೆ ಎಂದು ತಿಳಿದುಬಂದಿದೆ.












Click it and Unblock the Notifications