Commonwealth: ಬಾಕ್ಸಿಂಗ್‌ನಲ್ಲಿ ಭಾರತದ ಪ್ರೀತಿ ಪವಾರ್‌ಗೆ ಚಿನ್ನ, ಭಾರತದ ಪಾಲಿನ ಸ್ವರ್ಣ ಪದಕಗಳ ಸಂಖ್ಯೆ

Commonwealth Games 2026: ಸ್ಕಾಟ್‌ಲೆಂಟ್‌ನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್ 2026ರ ಕ್ರೀಡಾಕೂಟದಲ್ಲಿ ಬಾಕ್ಸಿಂಗ್‌ನಲ್ಲಿ ಭಾರತದ 'ರಿಂಗ್ ರಾಣಿ' ಎಂದೇ ಪ್ರಸಿದ್ಧಿಯಾಗಿರುವ ಪ್ರೀತಿ ಪವಾರ್‌ ಐತಿಹಾಸಿಕ ಹಾಖಲೆ ನಿರ್ಮಾಣ ಮಾಡಿದ್ದಾರೆ. ತಮ್ಮ ಅಮೋಘ ಪ್ರದರ್ಶನದ ಮೂಲಕ ದೇಶಕ್ಕೆ 6ನೇ ಸ್ವರ್ಣ (ಚಿನ್ನ) ಪದಕವನ್ನು ತಂದುಕೊಡುವಲ್ಲಿ ಯಶಸ್ವಿ ಆಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಮಹಿಳೆಯರ 54 ಕೆ.ಜಿ. ವಿಭಾಗದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪ್ರೀತಿ ಅವರು ಕೆನಡಾದ ಬಲಿಷ್ಠ ಪ್ರತಿಸ್ಪರ್ಧಿ ಸ್ಕಾರ್ಲೆಟ್ ಸವನ್ನಾ ವಿರುದ್ಧ ಪೂರ್ಣ ಪ್ರಾಬಲ್ಯ ಸಾಧಿಸಿ ಜಯ ದಾಖಲಿಸುವ ಮೂಲಕ ಸ್ವರ್ಣ ಪದಕಕ್ಕೆ ಕೊರಳೊಡ್ಡಿದರು. ಈ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ.

Commonwealth Games 2026 Preeti Pawar Wins Gold medal in Boxing India Clinches 6th Gold Medal

ಪಂದ್ಯದ ಪ್ರತಿ ಸುತ್ತಿನಲ್ಲೂ ಪ್ರೀತಿ ಪವಾರ್ ಅದ್ಭುತ ಪ್ರದರ್ಶನ

ಫೈನಲ್ ಪಂದ್ಯದ ಆರಂಭದ ಕ್ಷಣದಿಂದಲೇ ಅತ್ಯಂತ ಆಕ್ರಮಣಕಾರಿ ಶೈಲಿಯನ್ನು ಅಳವಡಿಸಿಕೊಂಡ ಪ್ರೀತಿ ಎದುರಾಳಿ ಕೆನಡಿಯನ್ ಬಾಕ್ಸರ್‌ಗೆ ಚೇತರಿಸಿಕೊಳ್ಳಲು ಯಾವುದೇ ಅವಕಾಶವನ್ನು ನೀಡಲಿಲ್ಲ. ಪಂದ್ಯದ ಎಲ್ಲಾ ರೌಂಡ್‌ಗಳಲ್ಲಿಯೂ ಅವರ ಅದ್ಭುತ ಆಟದ ವೈಖರಿ ಪ್ರೇಕ್ಷಕರ ಗಮನ ಸಳೆಯಿತು.

ಮೊದಲ ಸುತ್ತಿನಿಂದಲೂ ಮುಂದುರಿದ ಗೆಲುವು

ಪಂದ್ಯದ ಆರಂಭಿಕ ಸುತ್ತಿನಲ್ಲೇ ಪ್ರೀತಿ ನಿಖರವಾದ ಪಂಚ್‌ಗಳ ಮೂಲಕ ಎದುರಾಳಿಯ ಮೇಲೆ ಒತ್ತಡ ಹೇರಿದರು. ಪ್ರೀತಿಯ ದಾಳಿಗೆ ಉತ್ತರ ಕಂಡುಕೊಳ್ಳಲು ಸ್ಕಾರ್ಲೆಟ್ ವಿಫಲರಾದರು. ಇದರ ಪರಿಣಾಮವಾಗಿ ಮೊದಲ ಸುತ್ತನ್ನು ಪ್ರೀತಿ 5-0 ಅಂತರದಿಂದ ತಮ್ಮದಾಗಿಸಿಕೊಂಡರು.

ಎರಡನೇ ಸುತ್ತಿನಲ್ಲೂ ಸುತ್ತಿನಲ್ಲೂ ಉತ್ತಮ ಪಟ್ಟುಗಳನ್ನು ಮುಂದುವರಿಸಿದರು. ಎದುರಾಳಿಯ ಪ್ರತಿಯೊಂದು ದಾಳಿಯನ್ನೂ ವಿಫಲಗೊಳಿಸಿ ಕೌಂಟರ್ ಅಟ್ಯಾಕ್ ಮಾಡುವ ಮೂಲಕ ಅಂಕಗಳನ್ನು ಕಲೆಹಾಕಿದರು. ಈ ಸುತ್ತನ್ನೂ 5-0 ಅಂತರದಿಂದ ಗೆಲ್ಲುವ ಮೂಲಕ ಚಿನ್ನದ ಪದಕದ ಸಮೀಪದತ್ತ ಬಂದರು.

ಕೊನೆಯ ಸುತ್ತಿನಲ್ಲಿ ಕೆನಡಾದ ಸ್ಕಾರ್ಲೆಟ್ ಪಂದ್ಯಕ್ಕೆ ಮರಳಲು ಭಾರಿ ಪ್ರಯತ್ನ ನಡೆಸಿದರು. ಆದರೆ ಪ್ರೀತಿ ಅವರ ಅದ್ಭುತ ಹಾಗೂ ತಾಂತ್ರಿಕ ಆಟದ ಮುಂದೆ ಅವರ ಯಾವುದೇ ತಂತ್ರಗಳು ಕೆಲಸ ಮಾಡಲಿಲ್ಲ. ಈ ಮೂಲಕ ಪ್ರೀತಿ ಅಂತಿಮ ಸುತ್ತನ್ನೂ 5-0 ಅಂತರದಿಂದ ಜಯಿಸಿ ಚಿನ್ನದ ಪದಕ ಗೆದ್ದುಕೊಂಡರು.

ಭಾರತಕ್ಕೆ ಮತ್ತೊಂದು ಚಿನ್ನದ ಗರಿ

ಪ್ರೀತಿ ಪವಾರ್ ಗಳಿಸಿದ ಈ ಐತಿಹಾಸಿಕ ಚಿನ್ನದ ಪದಕದೊಂದಿಗೆ ಕಾಮನ್‌ವೆಲ್ತ್ ಗೇಮ್ಸ್ 2026ರಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 24ಕ್ಕೆ ಏರಿಕೆಯಾಗಿದೆ. ಇದರಲ್ಲಿ 6 ಚಿನ್ನದ ಪದಕಗಳು ಸೇರಿರುವುದು ದೇಶದ ಕ್ರೀಡಾ ಪ್ರೇಮಿಗಳಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ರಿಂಗ್‌ನಲ್ಲಿ ಭಾರತೀಯ ಬಾಕ್ಸರ್‌ಗಳ ಭರ್ಜರಿ ಪ್ರದರ್ಶನ ಮುಂದುವರಿದಿದ್ದು, ಈ ಯಶಸ್ಸು ದೇಶಾದ್ಯಂತ ಕ್ರೀಡಾಭಿಮಾನಿಗಳಲ್ಲಿ ಹೊಸ ಉತ್ಸಾಹ ಹಾಗೂ ಸಂಭ್ರಮವನ್ನು ತರಿಸಿದೆ. ಪ್ರೀತಿ ಅವರ ಈ ಸಾಧನೆಯು ದೇಶದ ಮುಂಬರುವ ಯುವ ಅಥ್ಲೀಟ್‌ಗಳು ಮತ್ತು ಮಹಿಳಾ ಬಾಕ್ಸರ್‌ಗಳಿಗೆ ದೊಡ್ಡ ಪ್ರೇರಣೆಯಾಗಿದೆ ಎಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+