Champions Trophy 2025: ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾ-ಪಾಕ್‌ ನಡುವೆ ಜರ್ಸಿ ಕಿಚ್ಚು

Champions Trophy 2025: ಇಂದಿನಿಂದ ಅಂದರೆ ಫೆಬ್ರವರಿ 19ರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆರಂಭ ಆಗಲಿದೆ. ಮೊದಲ ಪಂದ್ಯ ಆತಿಥೇಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಫೆಬ್ರವರಿ 23ಕ್ಕೆ ಇಂಡಿಯಾ-ಪಾಕ್‌ ನಡುವೆ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನ ಜರ್ಸಿ ವಿವಾದದ ಕಿಚ್ಚೊಂದು ಭುಗಿಲೆದ್ದಿದೆ. ಹಾಗಾದರೆ ಅದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಇಂದು (ಫೆಬ್ರವರಿ 19) ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಫೆಬ್ರವರಿ 20ರಂದು ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯವನ್ನು ಬಾಂಗ್ಲಾ ದೇಶದ ವಿರುದ್ಧ ಆಡಲಿದೆ.

Champions Trophy 2025 Pakistan s Name on Team India Cricket Jersey

ಇನ್ನು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ಭಾರತವನ್ನು ಮಣಿಸಿದ್ದ ಪಾಕಿಸ್ತಾನ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತ್ತು. ನಂತರ 8 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಆಯೋಜನೆ ಮಾಡಲಾಗಿದೆ. ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಫೆಬ್ರವರಿ 23ರಂದು ಮುಖಾಮುಮಖಿಯಾಗಲಿದೆ. ಇದಕ್ಕೂ ಮುನ್ನ ಜರ್ಸಿ ವಿವಾದವೊಂದು ಭಾರೀ ಚರ್ಚೆ ಹುಟ್ಟುಹಾಕಿದೆ.

ಪಾಕಿಸ್ತಾನ-ಟೀಂ ಇಂಡಿಯಾ ಮ್ಯಾಚ್‌ ಇತ್ತೆಂದರೆ ಸಾಕು ಇಡೀ ದೇಶವೇ ಈ ಪಂದ್ಯವನ್ನು ವೀಕ್ಷಣೆ ಮಾಡುತ್ತದೆ. ಇದೀಗ ಫೆಬ್ರವರಿ 23ರಂದು ಈ ಎರಡು ದೇಶಗಳ ನಡುವೆ ಪಂದ್ಯ ನಡೆಯಲಿದ್ದು, ಇದಕ್ಕೂ ಮುನ್ನವೇ ಟೀಂ ಇಂಡಿಯಾ ಜರ್ಸಿ ಮೇಲೆ ಪಾಕಿಸ್ತಾನದ ಹೆಸರು ಕಂಡುಬಂದಿದೆ. ಇದೀಗ ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಸೋಮವಾರ ಅಂದರೆ ಫೆಬ್ರವರು 17ರಂದು ಭಾರತೀಯ ಕ್ರಿಕೆಟ್ ತಂಡವು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ತಮ್ಮ ಜೆರ್ಸಿಯನ್ನು ಅನಾವರಣಗೊಳಿಸಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಹೊಸ ಜರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ಈ ಜರ್ಸಿಯಲ್ಲಿ ಪಾಕಿಸ್ತಾನದ ಹೆಸರು ಕಂಡು ಬಂದಿದೆ. ಇದನ್ನು ಇಡೀ ದೇಶವೇ ನೋಡಿದ್ದು, ನೆಟ್ಟಿಗರು ಇದರ ವಿರುದ್ಧ ಕೆಂಡಕಾರುತ್ತಿದ್ದಾರೆ.

2025ರ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಐಸಿಸಿ ಪ್ರಶಸ್ತಿಗಳು ಮತ್ತು ವರ್ಷದ ತಂಡದ ಕ್ಯಾಪ್‌ಗಳನ್ನು ಪಡೆದ ಟೀಂ ಇಂಡಿಯಾ ಆಟಗಾರರ ಫೋಟೋಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹಂಚಿಕೊಂಡಿದೆ. ಈ ಫೋಟೋಗಳಲ್ಲಿ ಆಟಗಾರರು ಪಾಕಿಸ್ತಾನದ ಹೆಸರು ಮುದ್ರಿಸಿರುವ ಜರ್ಸಿ ಧರಿಸಿರುವುದು ಕಂಡುಬಂದಿದೆ.

ಪಂದ್ಯಾವಳಿಯ ಅಧಿಕೃತ ಲೋಗೋದ ಭಾಗವಾಗಿ ಪಾಕಿಸ್ತಾನದ ಮುದ್ರೆಯನ್ನು ಹೊಂದಿರುವ ಜರ್ಸಿಗಳನ್ನು ಭಾರತ ಧರಿಸುವುದಿಲ್ಲ ಎಂಬ ಊಹಾಪೋಹಗಳು ಹರಡಿದ್ದವು. ಈ ನಡುವೆಯೇ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಭಾರತ ತಂಡವು ಐಸಿಸಿಯ ಮಾರ್ಗಸೂಚಿಗಳನ್ನು ಪಾಲಿಸುತ್ತದೆ ಎಂದು ದೃಢಪಡಿಸಿದ್ದಾರೆ. ಇತ್ತೀಚೆಗೆ ಟೀ ಇಂಡಿಯಾ ಕ್ರಿಕೆಟ್‌ ಜರ್ಸಿ ಮೇಲೆ ಪಾಕಿಸ್ತಾನದ ಹೆಸರು ಮುದ್ರಿಸಿರುವುದು ಇದೇ ಮೊದಲು.

ಇನ್ನು 2023ರ ಏಷ್ಯಾಕಪ್ ಟೂರ್ನಿಯೂ ಪಾಕಿಸ್ತಾನದಲ್ಲಿ ನಡೆದಿದ್ದು, ಆಗ ಯಾವುದೇ ತಂಡಗಳು ತಮ್ಮ ಜರ್ಸಿಯ ಮೇಲೆ ಆತಿಥೇಯರ ಹೆಸರನ್ನು ಹೊಂದಿರಲಿಲ್ಲ. ಇದೀಗ ಟೀಂ ಇಂಡಿಯಾ ಜರ್ಸಿ ಮೇಲೆ ಮುದ್ರಿಸಿರುವ ಪಾಕಿಸ್ತಾನದ ಹೆಸರು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+