Salary Hike: ಭಾರತೀಯ ಮಹಿಳಾ ಕ್ರಿಕೆಟಿಗರ ವೇತನ ಹೆಚ್ಚಳ: ಇಲ್ಲಿದೆ ಮಾಹಿತಿ
Women Cricketers Salary Hike: ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಭಾರತೀಯ ಮಹಿಳಾ ಕ್ರಿಕೆಟಿಗರಿಗೆ ಕೊನೆಗೂ ಬಿಸಿಸಿಐ ಗುಡ್ ನ್ಯೂಸ್ ನೀಡಿದೆ. ದೇಶೀಯ ಪಂದ್ಯಗಳ ಮಹಿಳಾ ಕ್ರಿಕೆಟಿಗರು ಮತ್ತು ಅಧಿಕಾರಿಗಳ ಶುಲ್ಕವನ್ನು ದ್ವಿಗುಣಗೊಳಿಸಲಾಗಿದೆ. ಹಾಗಾದ್ರೆ, ಯಾರಿಗೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು) ಭಾರತೀಯ ಮಹಿಳಾ ಕ್ರಿಕೆಟಿಗರ ವೇತನವನ್ನು ಹೆಚ್ಚಳ ಮಾಡಿದೆ. ಯಾರಿಗೆ ಎಷ್ಟು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಪರಿಷ್ಕೃತ ವೇತನ ರಚನೆ ಪ್ರಕಾರ, ದೇಶೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಹಿರಿಯ ಮಹಿಳಾ ಕ್ರಿಕೆಟಿಗರು ಈಗ ದಿನಕ್ಕೆ 50,000 ರೂಪಾಯಿಗಳನ್ನು ಗಳಿಸುತ್ತಾರೆ. ಇದು ಈಗಿರುವ ಪಂದ್ಯದ ದಿನಕ್ಕೆ 20,000 ರೂಪಾಯಿಗಳಿಂದ ಗಮನಾರ್ಹ ಏರಿಕೆಯಾಗಿದೆ.
ಹಿರಿಯ ಮಹಿಳಾ ದೇಶೀಯ ಏಕದಿನ ಟೂರ್ನಿಗಳು ಮತ್ತು ಬಹು ದಿನಗಳ ಪಂದ್ಯಾವಳಿಗಳಿಗೆ ಮೊದಲ ಪ್ಲೇಯಿಂಗ್ 11 ಆಟಗಾರರಿಗೆ ದಿನಕ್ಕೆ 50,000 ರೂಪಾಯಿ, ಮೀಸಲು ಆಟಗಾರರಿಗೆ ದಿನಕ್ಕೆ 25,000 ರೂಪಾಯಿ, ರಾಷ್ಟ್ರೀಯ ಟಿ-20 ಟೂರ್ನಿಯಲ್ಲಿ ಮೊದಲ 11 ಆಟಗಾರರು ಪ್ರತಿ ಪಂದ್ಯಕ್ಕೆ 25,000 ರೂಪಾಯಿ, ಮೀಸಲು ಆಟಗಾರರು 12,500 ರೂಪಾಯಿ ಪಡೆಯುತ್ತಾರೆ.
ಬಿಸಿಸಿಐ ಅಧಿಕಾರಿಗಳ ಪ್ರಕಾರ, ಅಗ್ರಸ್ಥಾನದಲ್ಲಿರುವ ದೇಶೀಯ ಮಹಿಳಾ ಕ್ರಿಕೆಟಿಗರು ಈಗ ಪೂರ್ಣ ಋತುವಿನಲ್ಲಿ ಎಲ್ಲಾ ಸ್ವರೂಪಗಳಲ್ಲಿ ಆಡಿದರೆ, ಅವರು 12ರಿಂದ 14,00,000 ರೂಪಾಯಿವರೆಗೆ ಗಳಿಸಬಹುದು. ಇನ್ನು ಅಪೆಕ್ಸ್ ಕೌನ್ಸಿಲ್ ಜೂನಿಯರ್ ಮಹಿಳಾ ಕ್ರಿಕೆಟಿಗರ ಸಂಭಾವನೆಯನ್ನು ಹೆಚ್ಚಿಸಿದೆ 23 ವರ್ಷದೊಳಗಿನವರು ಮತ್ತು 19 ವರ್ಷದೊಳಗಿನವರ ವಿಭಾಗಗಳ ಆಟಗಾರರಿಗೆ ದಿನಕ್ಕೆ 25,000 ರೂಪಾಯಿ ಹಾಗೂ ಮೀಸಲು ಆಟಗಾರರಿಗೆ 12,500 ರೂಪಾಯಿ ನೀಡಲಾಗುತ್ತದೆ.
ಅಂಪೈರ್‌ಗಳು ಸೇರಿದಂತೆ ಪಂದ್ಯದ ಅಧಿಕಾರಿಗಳು ಸಹ ಪರಿಷ್ಕೃತ ಶುಲ್ಕ ರಚನೆಯ ಪ್ರಯೋಜನವನ್ನು ಪಡೆಯಲಿದ್ದಾರೆ. ದೇಶೀಯ ಪಂದ್ಯಾವಳಿಗಳಲ್ಲಿ ಲೀಗ್ ಪಂದ್ಯಗಳಿಗೆ, ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳಿಗೆ ಪ್ರಸ್ತಾವಿತ ಗಳಿಕೆಯು ದಿನಕ್ಕೆ 40,000 ರೂಪಾಯಿ ವೇತನ ನೀಡಲಾಗುತ್ತದೆ. ನಾಕೌಟ್ ಪಂದ್ಯಗಳಿಗೆ, ಆಟದ ಪ್ರಾಮುಖ್ಯತೆ ಮತ್ತು ಕಾರ್ಯಾಚರಣೆಯ ಅವಶ್ಯಕತೆಗಳನ್ನು ಅವಲಂಬಿಸಿ, ಒಂದು ದಿನದ ಶುಲ್ಕ 50,000ರಿಂದ 60,000 ರೂಪಾಯಿಗಳವರೆಗೆ ಇರುತ್ತದೆ.
ಇನ್ನೂ ರಣಜಿ ಟ್ರೋಫಿ ಲೀಗ್ ಪಂದ್ಯಗಳಲ್ಲಿ ಕಾರ್ಯನಿರ್ವಹಿಸುವ ಅಂಪೈರ್‌ಗಳು ಈಗ ಪ್ರತಿ ಪಂದ್ಯಕ್ಕೆ ಸುಮಾರು 1.60 ಲಕ್ಷ ರೂಪಾಯಿ ಗಳಿಸುತ್ತಾರೆ. ಆದರೆ, ನಾಕೌಟ್ ಪಂದ್ಯಗಳಿಗೆ ಪ್ರತಿ ಪಂದ್ಯಕ್ಕೆ 2.5 ಲಕ್ಷ ರೂಪಾಗಳಿಂದ 3 ಲಕ್ಷ ರೂಪಾಯಿಗಳವರೆಗೆ ಪಡೆಯುತ್ತಾರೆ. ಈ ನಿರ್ಧಾರವು ಮಹಿಳಾ ಕ್ರಿಕೆಟಿಗರು ಮತ್ತು ದೇಶೀಯ ಪಂದ್ಯ ಅಧಿಕಾರಿಗಳಿಗೆ ಹೆಚ್ಚಿನ ಆರ್ಥಿಕ ಭದ್ರತೆ ಮತ್ತು ಪ್ರೇರಣೆ ನೀಡಿದಂತಾಗಗುತ್ತದೆ ಎಂದು ಬಿಸಿಸಿಐ ನಂಬಿದೆ.
ಪರಿಷ್ಕರಣೆ ವೇತನದ ವಿವರ
* ಹಿರಿಯ ಮಹಿಳಾ ಪಂದ್ಯಾವಳಿಗಳು: ಪ್ಲೇಯಿಂಗ್ ಇಲೆವೆನ್ ಆಟಗಾರ್ತಿಯರಿಗೆ ದಿನಕ್ಕೆ 50,000 ರೂಪಾಯಿ ಮೀಸಲು ಆಟಗಾರರಿಗೆ 25,000 ರೂಪಾಯಿ ನೀಡಲಾಗುತ್ತದೆ.
ಟಿ-20 ಪಂದ್ಯಗಳು
* ಪ್ಲೇಯಿಂಗ್ ಇಲೆವೆನ್ ಆಟಗಾರ್ತಿಯರಿಗರ 25,000 ರೂಪಾಯಿ, ಮೀಸಲು ಆಟಗಾರರಿಗೆ 12,500 ರೂಪಾಯಿ ನೀಡಲಾಗುತ್ತದೆ. ಜೂನಿಯರ್ ಮಹಿಳಾ ಪಂದ್ಯಾವಳಿಯಲ್ಲಿ ಪ್ಲೇಯಿಂಗ್ ಇಲೆವೆನ್ ಆಟಗಾರ್ತಿಯರಿಗೆ ದಿನಕ್ಕೆ 25,000 ರೂಪಾಯಿ, ಮೀಸಲು ಆಟಗಾರರಿಗೆ ದಿನಕ್ಕೆ 12,500 ರೂಪಾಯಿ ಪಡೆಯುತ್ತಾರೆ.
ಪ್ರಸ್ತುತ ಯಾರಿಗೆ ಎಷ್ಟು ವೇತನ?
* ಹಿರಿಯ ಮಹಿಳಾ ಪಂದ್ಯಾವಳಿಗಳು: ಪ್ಲೇಯಿಂಗ್ ಇಲೆವೆನ್ ಆಟಗಾರ್ತಿಯರಿಗೆ ದಿನಕ್ಕೆ 20,000 ರೂಪಾಯಿ ಮತ್ತು ಮೀಸಲು ಆಟಗಾರರಿಗೆ ದಿನಕ್ಕೆ 10,000 ರೂಪಾಯಿ ನೀಡಲಾಗುತ್ತದೆ.
* ಜೂನಿಯರ್ ಮಹಿಳಾ ಪಂದ್ಯಾವಳಿಗಳು: ಪ್ಲೇಯಿಂಗ್ ಇಲೆವೆನ್ ಆಟಗಾರ್ತಿಯರಿಗೆ ದಿನಕ್ಕೆ 10,000 ರೂಪಾಯಿ ಮತ್ತು ಮೀಸಲು ಆಟಗಾರರಿಗೆ ದಿನಕ್ಕೆ 5,000 ರೂಪಾಯಿ ನೀಡಲಾಗುತ್ತದೆ.
* ಎಲ್ಲಾ ಟಿ20 ಪಂದ್ಯಾವಳಿಗಳು: ಅನ್ವಯ ಆಗುವ ಮೊತ್ತಗಳು ಮೇಲೆ ತಿಳಿಸಲಾದ ಆಯಾ ಒಂದು ದಿನದ ದರಗಳ ಅರ್ಧದಷ್ಟು, ಒಬ್ಬ ಹಿರಿಯ ಮಹಿಳಾ ಕ್ರಿಕೆಟಿಗರು ಒಂದು ಋತುವಿಗೆ ಸುಮಾರು 2 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ.












Click it and Unblock the Notifications