Asian Games 2026: ಕಬಡ್ಡಿಯಲ್ಲಿ ಮತ್ತೊಮ್ಮೆ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಚಾಂಪಿಯನ್ ಪಟ್ಟ ಉಳಿಸಿಕೊಂಡ ಭಾರತೀಯ ನಾರಿಯರು

Asian Games 2026: ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕಬಡ್ಡಿಯಲ್ಲಿ ಭಾರತದ ಮಹಿಳಾ ತಂಡ ಚಿನ್ನದ ಪದಕಕ್ಕೆ ಮುತ್ತಿಟ್ಟಿದೆ. ಶನಿವಾರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಪ್ರಬಲ ಎದುರಾಳಿ ಇರಾನ್ ತಂಡವನ್ನು 37-34 ಅಂಕಗಳಿಂದ ಮಣಿಸಿ ಬಂಗಾರದ ಪದಕವನ್ನು ತನ್ನದಾಗಿಸಿಕೊಂಡಿದೆ.

ಆರಂಭದಿಂದಲೇ ಚುರುಕಿನ ರೈಡಿಂಗ್ ಮತ್ತು ಚತುರ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಭಾರತೀಯ ಆಟಗಾರ್ತಿಯರು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಮೊದಲಾರ್ಧದ ಅಂತ್ಯಕ್ಕೆ ಭಾರತ 22-16 ಅಂಕಗಳ ಮುನ್ನಡೆಯಲ್ಲಿತ್ತು. ಆದರೆ ಅಂತಿಮ ಹಂತದಲ್ಲಿ ಇರಾನ್ ತಂಡ ಭರ್ಜರಿ ಕಂಬ್ಯಾಕ್ ಮಾಡುವ ಮೂಲಕ ಭಾರತದ ಮುನ್ನಡೆಯನ್ನು ಕಡಿಮೆ ಮಾಡಿತು.

Asian Games 2026 India Women Win Kabaddi Gold Beat Iran 37-34 in Final Know Complete details

ಧೈರ್ಯ ಕಳೆದುಕೊಳ್ಳ ಭಾರತದ ವನಿತೆಯರು

ಪಂದ್ಯ ಕೊನೆಯ ಕ್ಷಣದತ್ತ ಸಾಗುತ್ತಿದ್ದಂತೆ ಕ್ರೀಡಾಂಗಣದಲ್ಲಿ ಉಸಿರು ಬಿಗಿಹಿಡಿಯುವಂತಹ ವಾತಾವರಣ ನಿರ್ಮಾಣವಾಗಿತ್ತು. ಈ ತೀವ್ರ ಒತ್ತಡದ ನಡುವೆಯೂ ಧೈರ್ಯ ಕಳೆದುಕೊಳ್ಳದ ಭಾರತದ ಆಟಗಾರ್ತಿಯರು ಕೊನೆಯ ಹಂತದಲ್ಲಿ ರಕ್ಷಣೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಖಚಿತಪಡಿಸಿಕೊಂಡರು.

ಮತ್ತೊಮ್ಮೆ ಚಿನ್ನದ ಪದಕಕ್ಕೆ ಮುತ್ತಿಟ್ಟ ಭಾರತ

ಮೊದಲಾರ್ಧ ಮುಕ್ತಾಯದ ವೇಳೆಗೆ ಭಾರತ 22-16 ಅಂಕಗಳಿಂದ ಮುನ್ನಡೆ ಸಾಧಿಸಿತ್ತು. ನಂತರದ ಅವಧಿಯಲ್ಲಿ ಇರಾನ್ ಒತ್ತಡ ಹೆಚ್ಚಿಸಿದರೂ ಭಾರತ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿತು. ಅಂತಿಮವಾಗಿ ಭಾರತ 37-34 ಅಂಕಗಳಿಂದ ಇರಾನ್ ತಂಡವನ್ನು ಮಣಿಸಿ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಕಬಡ್ಡಿ ಚಿನ್ನದ ಪದಕವನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿತು.

ಭಾರತ ಮಹಿಳಾ ತಂಡವು ಏಷ್ಯನ್ ಗೇಮ್ಸ್‌ನ ಕಬಡ್ಡಿಯಲ್ಲಿ ನಾಲ್ಕು ಆವೃತ್ತಿಗಳಲ್ಲಿ ಮೂರು ಬಾರಿ ಚಿನ್ನದ ಪದಕ ಗೆದ್ದಿದೆ. 2018ರಲ್ಲಿ ಮಾತ್ರ ಇರಾನ್ ವಿರುದ್ಧ ಸೋತು ಚಿನ್ನದ ಪದಕ ಕೈತಪ್ಪಿತ್ತು. ಇದೀಗ ಈ ಬಾರಿ ಮತ್ತೆ 'ಚಿನ್ನ' ಗೆದ್ದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ಚಿನ್ನ ಗೆದ್ದ ಪುರುಷರ ಕಬಡ್ಡಿ ತಂಡ

ಏಷ್ಯನ್ ಗೇಮ್ಸ್‌ನ ಕಬಡ್ಡಿ ಫೈನಲ್‌ನಲ್ಲಿ ಇರಾನ್ ವಿರುದ್ಧ 40-34 ಅಂತರದ ಕಠಿಣ ಹೋರಾಟದ ಗೆಲುವು ಸಾಧಿಸುವ ಮೂಲಕ ಭಾರತೀಯ ಪುರುಷರ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿತು. 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಇದು ನಾಲ್ಕನೇ ಚಿನ್ನದ ಪದಕವಾಗಿದೆ.

ಪುರುಷರ ವಿಭಾಗದ ಫೈನಲ್ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು; ಒಂದು ಹಂತದಲ್ಲಿ ಸ್ಕೋರ್ 20-20 ಸಮಬಲಗೊಂಡಿತ್ತು, ಆದರೆ ನಂತರ ಭಾರತ ಮೇಲುಗೈ ಸಾಧಿಸಿ ಮತ್ತೊಂದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತು.

2018ರ ಜಕಾರ್ತ ಗೇಮ್ಸ್‌ನಲ್ಲಿ ಇರಾನ್ ಚಾಂಪಿಯನ್ ಆಗಿ ಹೊರಹೊಮ್ಮಿದಾಗ ಮತ್ತು ಭಾರತ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಾಗ ಭಾರತೀಯ ಪುರುಷರ ತಂಡದ ಸತತ 7 ಚಿನ್ನದ ಪದಕಗಳ ನಾಗಾಲೋಟಕ್ಕೆ ತಡೆ ಬಿದ್ದಿತ್ತು. ಆದರೆ 2023ರ ಹ್ಯಾಂಗ್‌ಝೌ ಗೇಮ್ಸ್‌ನಲ್ಲಿ ಭಾರತ ಪ್ರಬಲವಾಗಿ ಪುಟಿದೆದ್ದು ಮತ್ತೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಏಷ್ಯನ್ ಗೇಮ್ಸ್‌ನ ಕಬಡ್ಡಿ ವಿಭಾಗದಲ್ಲಿ ಭಾರತಕ್ಕೆ ಇದು ಒಟ್ಟಾರೆಯಾಗಿ 9ನೇ ಚಿನ್ನದ ಪದಕವಾಗಿದೆ.

ಇದಕ್ಕೂ ಮುನ್ನ ಮಹಿಳಾ ತಂಡ ಮೊದಲಾರ್ಧದ ವೇಳೆಗೆ 22-16 ಅಂತರದ ಮುನ್ನಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದಲ್ಲಿ ಇರಾನ್ ತಂಡ ಪ್ರಬಲ ಹೋರಾಟ ನಡೆಸಿ 18-15 ಅಂತರದಿಂದ ಆ ಅವಧಿಯನ್ನು ಗೆದ್ದುಕೊಂಡಿತು. ಆದರೂ ಭಾರತ ಮೊದಲಾರ್ಧದಲ್ಲಿ ಗಳಿಸಿದ್ದ ಮುನ್ನಡೆಯು ಅಂತಿಮವಾಗಿ ನಿರ್ಣಾಯಕವಾಗಿ ಪರಿಣಮಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+