Asian Games 2026: ಸ್ಕ್ವಾಷ್ ಫೈನಲ್‌ನಲ್ಲಿ ಅಭಯ್ ಸಿಂಗ್‌ಗೆ ಬೆಳ್ಳಿ; ಒಲಿಂಪಿಕ್ಸ್ ಅರ್ಹತೆ ಮಿಸ್

Asian Games 2026: ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ 2026 ಏಷ್ಯಾಡ್​ ಸ್ಕ್ವಾಷ್​ ಸ್ಪರ್ಧೆಯ ಪುರುಷರ ಸಿಂಗಲ್ಸ್‌ನಲ್ಲಿ ಅನುಭವಿ ಆಟಗಾರ ಅಭಯ್​ ಸಿಂಗ್ ಅವರು ಫೈನಲ್‌ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಏಷ್ಯಾಡ್​ ಸ್ಕ್ವಾಷ್​ ಸ್ಪರ್ಧೆಯಲ್ಲಿ ಅನುಭವಿ ಆಟಗಾರ 28 ವರ್ಷದ ಅಭಯ್​ ಸಿಂಗ್ ಅವರು ಫೈನಲ್‌ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಅವರು ಮಲೇಷ್ಯಾದ ಎನ್​ಜಿ ಈನ್​ ಯೌ ವಿರುದ್ಧ 3-0 ಅಂತರದ ಸೋಲನುಭವಿಸಿದರು. ಜೊತೆಗೆ 2028ರ ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ಗೆ ನೇರ ಅರ್ಹತೆ ಪಡೆಯುವ ಅವಕಾಶವನ್ನೂ ಮಿಸ್ ಮಾಡಿಕೊಂಡರು.

Asian Games 2026 Abhay Singh Loses Squash Final Wins Silver LA 2028 Spot Missed Know details

ಬಂಗಾರದ ಪದಕ ಜಸ್ಟ್‌ ಮಿಸ್

ಬಂಗಾರದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಅಭಯ್ ಸಿಂಗ್, ಮಲೇಷ್ಯಾದ ಪ್ರಬಲ ಆಟಗಾರ ಎನ್​ಜಿ ಈನ್​ ಯೌ ಅವರ ಸವಾಲನ್ನು ಎದುರಿಸಿದರು. ಆರಂಭದಿಂದಲೂ ತೀವ್ರ ಪೈಪೋಟಿಯಿಂದ ಕೂಡಿದ್ದ ಮೊದಲ ಗೇಮ್‌ನಲ್ಲಿ ಮಲೇಷ್ಯಾದ ಆಟಗಾರ 11-9 ಅಂತರದಲ್ಲಿ ಮುನ್ನಡೆ ಪಡೆದರು.

ತದನಂತರ ಎರಡನೇ ಗೇಮ್‌ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದ ಎನ್​ಜಿ ಈನ್​ ಯೌ 11-5 ಅಂತರದಿಂದ ಅಭಯ್ ಅವರನ್ನು ಕಟ್ಟಿಹಾಕಿ ಒತ್ತಡ ಹೆಚ್ಚಿಸಿದರು. ಪಂದ್ಯಕ್ಕೆ ಮರಳಲು ಕಷ್ಟಪಟ್ಟ ಅಭಯ್, ಮೂರನೇ ಗೇಮ್‌ನಲ್ಲೂ ತಿರುಗೇಟು ನೀಡಲಾಗದೆ 0-3 ನೇರ ಗೇಮ್‌ಗಳಿಂದ ಪರಾಭವಗೊಂಡರು.

ಕೈತಪ್ಪಿದ ಎಂಜಲೀಸ್ ಒಲಿಂಪಿಕ್ಸ್‌ ನೇರ ಅರ್ಹತೆ

ಈ ಪಂದ್ಯದಲ್ಲಿ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದರೆ ಅಭಯ್ ಸಿಂಗ್ ಅವರಿಗೆ ಮುಂಬರುವ 2028ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ನೇರ ಅರ್ಹತೆ ಸಿಗುತ್ತಿತ್ತು. ಆದರೆ ಫೈನಲ್‌ನಲ್ಲಿ ಎದುರಾದ ಈ ಸೋಲಿನಿಂದಾಗಿ ಒಲಿಂಪಿಕ್ಸ್ ನೇರ ಟಿಕೆಟ್ ಪಡೆಯುವ ಸುವರ್ಣ ಅವಕಾಶ ಅವರ ಕೈತಪ್ಪಿದೆ.

2023ರ ಏಷ್ಯಾಡ್ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ 28 ವರ್ಷದ ಅಭಯ್ ಸಿಂಗ್, ಸೆಮಿಫೈನಲ್‌ ಹಂತದಲ್ಲಿ ಅದ್ಭುತ ಲಯದಲ್ಲಿದ್ದರು. ಶನಿವಾರ ನಡೆದಿದ್ದ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಮುಹಮ್ಮದ್ ಇರ್ಫಾನ್ ಅವರನ್ನು 3-0 ನೇರ ಸೆಟ್‌ಗಳಿಂದ ಧೂಳಿಪಟ ಮಾಡಿ ಫೈನಲ್‌ಗೆ ಪ್ರವೇಶಿಸಿದ್ದರು. ಆದರೆ ಅದೇ ಲಯವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೆ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+