ಆರ್‌ಸಿಬಿ-ಜಿಟಿ ಪಂದ್ಯದ ವೇಳೆ ವಿರಾಟ್‌ ಕೊಹ್ಲಿ ಪತ್ನಿ ಧರಿಸಿದ್ದ ವೈಟ್ ಟಾಪ್‌ ಬೆಲೆ 17,000 ರೂಪಾಯಿ: ವರದಿ

Anushka Sharma: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 24ರಂದು ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಾಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್‌ ವಿರುದ್ಧ ಭರ್ಜರಿ ಜಯ ಸಾಧಿಸಿತು. ಈ ಎಲ್ಲದರ ನಡುವೆ ಪಂದ್ಯದ ವೇಳೆ ಗಮನ ಸೆಳೆದಿದ್ದು ಮಾತ್ರ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರು ಧರಿಸಿದ ಉಡುಪು. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ಸಕಾರಾತ್ಮಕ ಚರ್ಚೆಗೆ ಕಾರಣವಾಗಿದೆ.

ಕ್ರಿಕೆಟ್ ಅಭಿಮಾನಿಗಳು ಕ್ರೀಡೆಯ ಮೇಲಿನ ಪ್ರೀತಿಗಾಗಿ ಐಪಿಎಲ್‌ ವೀಕ್ಷಿಸಿದರೆ, ಫ್ಯಾಷನ್ ಪ್ರಿಯರು ಮಾತ್ರ ಅನುಷ್ಕಾ ಶರ್ಮಾ ಅವರಿಂದ ಕ್ಯಾಶುಯಲ್ ಸ್ಟೈಲ್‌ನ ಟಿಪ್ಸ್‌ಗಳನ್ನು ಪಡೆಯಲು ಕಾತರದಿಂದ ಕಾಯುತ್ತಿರುತ್ತಾರೆ. ತಮ್ಮ ಪತಿ ಹಾಗೂ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಹುರಿದುಂಬಿಸಲು ಮೈದಾನಕ್ಕೆ ಬರುವ ಅನುಷ್ಕಾ, ಪ್ರತಿ ಬಾರಿಯೂ ಎಲ್ಲರ ಗಮನ ಸೆಳೆಯುವಂತಹ ವಿಭಿನ್ನ ಹಾಗೂ ಸರಳ, ಸ್ಟೈಲೀಶ್ ಉಡುಪು ಧರಿಸಿಬರುತ್ತಿದ್ದಾರೆ. ಅವರ ಈ ಆಕರ್ಷಕ ದೃಶ್ಯಗಳು ನೋಡುಗರ ಕಣ್ಮನ ಸೆಳೆಯುತ್ತಲಿರುತ್ತವೆ ಹಾಗೂ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಗೆ ಕಾರಣವಾಗಿದೆ.

Anushka Sharma Stuns in 17K Top at IPL 2026 Match Fans Love Her Look in Bengaluru M Chinnaswamy

ಅಭಿಮಾನಿಗಳ ಗಮನ ಸೆಳೆದ ಅನುಷ್ಕಾ

ಏಪ್ರಿಲ್ 24ರಂದು ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ರಜತ್ ಪಾಟಿದಾರ್ ನೇತೃತ್ವದ ಆರ್‌ಸಿಬಿ ತಂಡವು ಈ ಪಂದ್ಯವನ್ನು 5 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತು. ಆದರೆ, ಮೈದಾನದಲ್ಲಿ ಅನುಷ್ಕಾ ಶರ್ಮಾ ಅವರು ವಿರಾಟ್ ಕೊಹ್ಲಿ ಅವರನ್ನು ಹುರಿದುಂಬಿಸುವುದರಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಗಮನ ಸೆಳೆದದ್ದು ಅವರ ಉಡುಪು. ಅವರು ಸೇಜೇನ್ ಬ್ರ್ಯಾಂಡ್‌ನ ಟಾಪ್ ಧರಿಸಿದ್ದರು ಹಾಗೂ ಅದಕ್ಕೆ ಪೂರಕವಾಗಿ ಕಾರ್ಟಿಯರ್ ವಾಚ್ ಧರಿಸಿ ಮಿಂಚುವ ಮೂಲಕ ಗಮನ ಸೆಳೆದರು.

ಅನುಷ್ಕಾ ಧರಿಸಿದ ಟಾಪ್ ಬೆಲೆ ಎಷ್ಟು ಗೊತ್ತಾ?

ಅನುಷ್ಕಾ ಶರ್ಮಾ ಸ್ಟೇಡಿಯಂನಲ್ಲಿ ಪ್ರೇಕ್ಷಕರ ನಡುವೆ ಕುಳಿತಾಗಲೆಲ್ಲಾ ಅವರು ಹೆಚ್ಚಾಗಿ ಸುಂದರವಾದ ಉಡುಪುಗಳನ್ನೇ ಧರಿಸಿ ಗಮನ ಸೆಳೆಯುತ್ತಾರೆ. ಮಾಹಿತಿ ಪ್ರಕಾರ, ಮೊನ್ನೆ ಚಿನ್ನಸ್ವಾಮಿಯಲ್ಲಿ ನಡೆದ ಪಂದ್ಯದ ವೇಳೆ ಅನುಷ್ಕಾ ಅವರು ಸೇಜೇನ್ ಬ್ರ್ಯಾಂಡ್‌ನ ಬಿಳಿ ಬಣ್ಣದ ರಫಲ್-ಸ್ಲೀವ್ ಟಾಪ್ ಧರಿಸಿದ್ದರು. ಇದರ ಬೆಲೆ ಸುಮಾರು 17,000 ರೂಪಾಯಿ. ಈ ಸರಳವಾದ ಟಾಪ್‌ಗೆ ಹೋಲಿಕೆಯಾಗುವಂತಹ ಅವರು ಅಷ್ಟೇ ದುಬಾರಿ ಮೌಲ್ಯದ ಕಾರ್ಟಿಯರ್ ವಾಚ್ ಧರಿಸುವ ಮೂಲಕ ಗಮನ ಸೆಳೆದರು.

ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಅನುಷ್ಕಾ ಧರಿಸಿದ ಟಾಪ್‌ನ ಬೆಲೆ 155 ಯುರೋಗಳು (ಅಂದರೆ ಸುಮಾರು 17,087 ರೂಪಾಯಿಗಳು). ಅನುಷ್ಕಾ ಶರ್ಮಾ ಅವರು ಈ ಟಾಪ್‌ಗೆ ಹೋಲಿಕೆಯಾಗುವಂತಹ ಡೆನಿಮ್ ಜೀನ್ಸ್ ಧರಿಸಿದ್ದರು. ಇದರೊಂದಿಗೆ ಅವರು ಸರಳವಾದ ಬ್ರೇಸ್‌ಲೆಟ್‌ಗಳು ಮತ್ತು ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಾರ್ಟಿಯರ್ ವಾಚ್ ಧರಿಸಿ ಗಮನ ಸೆಳೆದರು. ಹೀಗೆ ಆರ್‌ಸಿಬಿ ಪ್ರತಿ ಪಂದ್ಯದ ವೇಳೆ ತಮ್ಮ ಪತಿ ವಿರಾಟ್‌ ಕೊಹ್ಲಿ ಅವರ ಬೆಂಬಲಕ್ಕೆ ನಿಲ್ಲಲ್ಲು ಅನುಷ್ಕಾ ಎಂಟ್ರಿ ಕೊಡುತ್ತಾರೆ. ಇನ್ನೂ ಇವರನ್ನು ಕಂಡ ಅಭಿಮಾನಿಗಳು ಸಖತ್ ಖುಷಿಪಟ್ಟು ವಿರುಷ್ಕಾ.. ವಿರುಷ್ಕಾ ಅಂತಾ ಕೂಗಿ ಸಂಭ್ರಮಿಸುತ್ತಾರೆ.

ಒಟ್ಟಿನಲ್ಲಿ ಅನುಷ್ಕಾ ಶರ್ಮಾ ಅವರ ಈ ಸಿಂಪಲ್ ಅಂಡ್ ರಿಚ್ ಲುಕ್ ಫ್ಯಾಷನ್ ಪ್ರಿಯರ ಗಮನ ಸೆಳೆದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರದ್ದೇ ಚರ್ಚೆ ಜೋರಾಗಿದೆ. ಅಭಿಮಾನಿಗಳು ಈ ಲುಕ್‌ನಲ್ಲಿ ನೀವು ತುಂಬಾ ಚೆನ್ನಾಗಿ ಕಾಣಿಸುತ್ತೀರಾ ಎಂದು ಹೇಳುತ್ತಿದ್ದಾರೆ. ಅಲ್ಲದೆ, ಹಲವರು ಈ ಸಿಂಪಲ್‌ ಹಾಗೂ ರಿಚ್ ಲುಕ್‌ನ ಸ್ಟೈಲ್‌ ಅನ್ನೇ ಅನುಸರಿಸುವವರು ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+