Abhishek Sharma: ವಿಶ್ವದಾಖಲೆಯ ಬೆನ್ನಲ್ಲೇ ಅಭಿಷೇಕ್ ಶರ್ಮಾ ವಿಶಿಷ್ಟ ಸಂಭ್ರಮಾಚರಣೆ.. ಈ ರೀತಿ ಇದೇ ಮೊದಲು, ಭಾರಿ ವೈರಲ್

Abhishek Sharma: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುರುವಾರ (ಸೆಪ್ಟೆಂಬರ್ 17) ನಡೆದ ಅಫ್ಘಾನಿಸ್ತಾನ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿ ಪ್ರಶಸ್ತಿ ಗೆದ್ದುಕೊಂಡಿತು. ಇದಕ್ಕೂ ಮುಂಚೆ ಟೀಮ್ ಇಂಡಿಯಾ ಪರ ಅಭಿಷೇಕ್ ಶರ್ಮಾ ಅವರು ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಮಾಡಿದ್ದು, ಇದೇ ವೇಳೆ ಅವರು ವಿಶಿಷ್ಟ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದರು. ಈ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್‌ ಆಗಿವೆ. ನೆಟ್ಟಿಗರು ಹೇಳೋದೇನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕೇವಲ 30 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 2017ರಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಬಾರಿಸಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಜೊತೆಗೆ ಪೂರ್ಣಪ್ರಮಾಣದ ಟೆಸ್ಟ್‌ ಆಡುವ ದೇಶಗಳ ಆಟಗಾರರ ಪೈಕಿ T20Iಯಲ್ಲಿ ಅತಿ ವೇಗವಾಗಿ ಶತಕ ಬಾರಿಸಿದ್ದು, ಇದು ವಿಶ್ವದಾಖಲೆಯ ಸಾಧನೆಯಾಗಿದೆ.

Abhishek Sharma Unique Meditation Celebration After Record T20I Century Against Afghanistan Viral

ಅಭಿಷೇಕ್ ಶರ್ಮಾ ವಿಶಿಷ್ಟ ಸಂಭ್ರಮಾಚರಣೆ

ಅಭಿಷೇಕ್ ಶರ್ಮಾ ಶತಕ ಪೂರ್ಣಗೊಳಿಸಿದ ಕೂಡಲೇ ಮೈದಾನದಲ್ಲಿ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದರು. ತಮ್ಮ ಹೆಲ್ಮೆಟ್ ತೆಗೆದು, ನೇರವಾಗಿ ಮೈದಾನದಲ್ಲೇ ಕುಳಿತು 'ಧ್ಯಾನ/ಯೋಗ ಭಂಗಿ'ಯಲ್ಲಿ ಕಣ್ಣು ಮುಚ್ಚಿ ಪ್ರಶಾಂತವಾಗಿ ಕುಳಿತರು. ಈ ರೋಚಕ ದೃಶ್ಯ ಮೈದಾನದಲ್ಲಿದ್ದ ವೀಕ್ಷಕರ ಗಮನ ಸೆಳೆಯಿತು.

ನೆಟ್ಟಿಗರಿಂದ ಮೆಚ್ಚುಗೆಗಳ ಸುರಿಮಳೆ

ಅಲ್ಲದೆ, ಗ್ಯಾಲರಿಯಲ್ಲಿದ್ದ ಅವರ ತಂದೆ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದರೆ, ಭಾರತ ತಂಡದ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ಮುಖದಲ್ಲೂ ಮುಗುಳ್ನಗು ಕಂಡುಬಂದಿತು. ಅಭಿಷೇಕ್ ಅವರ ಈ ಹೊಸ ಮಾದರಿಯ ಸಂಭ್ರಮಾಚರಣೆ ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಶಾಂತ ಮನಸ್ಸು, ಅತ್ಯುತ್ತಮ ಪ್ರದರ್ಶನ,' ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ಒಟ್ಟಾರೆಯಾಗಿ ಅಭಿಷೇಕ್ ಶರ್ಮಾ ಅವರು 34 ಎಸೆತಗಳಲ್ಲಿ 11 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನಿಂದ 108 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಒಂಬತ್ತನೇ ಓವರ್‌ನಲ್ಲಿ ಸಿಂಗಲ್ ತೆಗೆದುಕೊಂಡು ಈ ಐತಿಹಾಸಿಕ ಮೈಲಿಗಲ್ಲು ತಲುಪಿದ ಅಭಿಷೇಕ್, ತಕ್ಷಣವೇ ತಮ್ಮ ಹೆಲ್ಮೆಟ್ ಮತ್ತು ಬ್ಯಾಟ್ ಪಕ್ಕಕ್ಕಿಟ್ಟು ಮೈದಾನದಲ್ಲೇ ಪ್ರಶಾಂತವಾಗಿ ಕುಳಿತು ವಿಶಿಷ್ಟವಾಗಿ ಸಂಭ್ರಮಿಸಿದರು.

ಅಭಿಷೇಕ್ ಶರ್ಮಾ ನಿರ್ಮಿಸಿದ ಪ್ರಮುಖ ದಾಖಲೆಗಳು

* ಭಾರತದ ಪರ ವೇಗದ T20I ಶತಕ: 30 ಎಸೆತಗಳಲ್ಲಿ (ಹಿಂದಿನ ದಾಖಲೆ ರೋಹಿತ್ ಶರ್ಮಾ - 35 ಎಸೆತ).

* ಪವರ್‌ಪ್ಲೇನಲ್ಲಿ ಗರಿಷ್ಠ ರನ್: ಪಂದ್ಯದ ಮೊದಲ 6 ಓವರ್‌ಗಳಲ್ಲಿ ಕೇವಲ 22 ಎಸೆತಗಳಲ್ಲಿ 76 ರನ್ ಕಲೆಹಾಕಿ ವಿಶ್ವ ದಾಖಲೆ ಬರೆದಿದ್ದಾರೆ.

* ಈ ಸರಣಿಯಲ್ಲಿ ಒಟ್ಟು 22 ಸಿಕ್ಸರ್ ಬಾರಿಸುವ ಮೂಲಕ, T20I ಸರಣಿಯೊಂದರಲ್ಲಿ ತಾವು ಹೊಂದಿದ್ದ ಸಾರ್ವಕಾಲಿಕ ದಾಖಲೆಯನ್ನು ತಾವೇ ಸರಿದೂಗಿಸಿದ್ದಾರೆ.

* ಇದು ಅವರ T20 ವೃತ್ತಿಜೀವನದ 10ನೇ ಶತಕವಾಗಿದ್ದು, ಭಾರತದ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ ಅವರ 10 ಟಿ20 ಶತಕಗಳ ದಾಖಲೆಯನ್ನು ಸಮಗಟ್ಟಿದ್ದಾರೆ.

ಅಫ್ಘಾನಿಸ್ತಾನ್ ತಂಡವು ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡವು ಅಭಿಷೇಕ್ ಶರ್ಮಾ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಈ ಪಂದ್ಯವನ್ನು ಸಹ ಗೆದ್ದು, ಸರಣಿಯನ್ನು ಕ್ಲೀನ್ ಸ್ವೀಪ್ (3-0) ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+