Abhishek Sharma: 6,6,6,6,6,6,6.. ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ವಿಶ್ವ ದಾಖಲೆ ಬರೆದ ಅಭಿಷೇಕ್ ಶರ್ಮಾ

Abhishek Sharma: ಭಾರತದ-ನ್ಯೂಜಿಲೆಂಡ್‌ ನಡುವಿನ 5 ಪಂದ್ಯಗಳ ಟಿ20 ಸರಣಿಯ ಮೊದಲ ಮ್ಯಾಚ್ ಇಂದು (ಅಕ್ಟೋಬರ್ 22) ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿದ ನಡೆದಿದೆ. ಈ ವೇಳೆ ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರು ವಿಶ್ವದಾಖಲೆಯನ್ನು ಮಾಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ನ್ಯೂಜಿಲೆಂಡ್ ವಿರುದ್ಧ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟಿ20ಐ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ವಿಶ್ವ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಬೃಹತ್ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾದ ಇನಿಂಗ್ಸ್‌ನಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

Abhishek Sharma Creates World Record Against New Zealand Hits First-Ball Six for 7th Time Viral

ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆ

ನ್ಯೂಜಿಲೆಂಡ್ ನೀಡಿದ್ದ 226 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತೀಯ ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಅಭಿಷೇಕ್ ತಮ್ಮ ಆರ್ಭಟ ಶುರು ಮಾಡಿದರು. ಕಿವೀಸ್ ವೇಗಿ ಮ್ಯಾಟ್ ಹೆನ್ರಿ ಎಸೆದ ಎಸೆತವನ್ನು ಸಿಕ್ಸರ್ ಬಾರಿಸಿದರು. ಈ ಮೂಲಕ ಅವರು ಎದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ದಾಟಿಸಿ 7ನೇ ಬಾರಿ ಸಿಕ್ಸರ್ ಸಿಡಿಸಿದ ಜಗತ್ತಿನ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಭರ್ಜರಿ ಆರಂಭ ಒದಗಿಸಿದ ಅಭಿಷೇಕ್ ಶರ್ಮಾ

ಆರಂಭದಿಂದಲೇ ಎದುರಾಳಿ ಬೌಲರ್‌ಗಳ ಮೇಲೆ ಸವಾರಿ ಮಾಡುವ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಜೊತೆಗೂಡಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಮ್ಯಾಟ್ ಹೆನ್ರಿ ಬೌಲಿಂಗ್‌ನಲ್ಲಿ ಸಿಡಿಸಿದ ಈ ಸಿಕ್ಸರ್ ಭಾರತದ ಚೇಸಿಂಗ್‌ಗೆ ಸೂಕ್ತ ವೇಗವನ್ನು ನೀಡಿತು.

ಟಿ20 ಕ್ರಿಕೆಟ್‌ನಲ್ಲಿ ಇಂತಹ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯಿಂದಲೇ 'ಸಿಕ್ಸರ್ ಮೆಷಿನ್' ಎಂದೇ ಖ್ಯಾತಿ ಪಡೆದಿರುವ ಅಭಿಷೇಕ್, ಈ ಸಾಧನೆಯ ಮೂಲಕ ಅಫ್ಘಾನಿಸ್ತಾನದ ಶಫೀಕುಲ್ಲಾ ಶಿನ್ವಾರಿ (6 ಬಾರಿ) ಮತ್ತು ಸಹ ಆಟಗಾರ ಸೂರ್ಯಕುಮಾರ್ ಯಾದವ್ (5 ಬಾರಿ) ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಇಂದಿನ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಒಟ್ಟು 12 ಎಸೆತಗಳನ್ನ ಎದುರಿಸಿ 2 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 29 ರನ್‌ಗಳ ಕೊಡುಗೆ ನೀಡಿದರು.

ಮೊದಲ ಎಸೆತದಲ್ಲೇ ಯಾರು ಎಷ್ಟು ಬಾರಿ ಸಿಕ್ಸರ್ ಸಿಡಿಸಿದ್ದಾರೆ?

* ಅಭಿಷೇಕ್ ಶರ್ಮಾ (ಭಾರತ) - 7 ಬಾರಿ
* ಶಫೀಕುಲ್ಲಾ ಶಿನ್ವಾರಿ (ಅಫ್ಘಾನಿಸ್ತಾನ್) - 6 ಬಾರಿ
* ಸೂರ್ಯಕುಮಾರ್ ಯಾದವ್ (ಭಾರತ) - 5 ಬಾರಿ
* ಪೌಲ್ ಸ್ಟರ್ಲಿಂಗ್ (ಐರ್ಲ್ಯಾಂಡ್) - 4 ಬಾರಿ
* ಕಾಲಿನ್ ಮುನ್ರೊ (ನ್ಯೂಜಿಲೆಂಡ್) - 5 ಬಾರಿ

ವಿಶ್ವ ದಾಖಲೆ ಬರೆದ ಅಭಿಷೇಕ್‌ಗೆ ಮೆಚ್ಚುಗೆಗಳ ಸುರಿಮಳೆ

ಅಭಿಷೇಕ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 7ನೇ ಬಾರಿ ಈ ಸಾಧನೆ ಮಾಡಿ ವಿಶ್ವ ದಾಖಲೆ ಬರೆದ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.

'ಮೊದಲ ಎಸೆತದಿಂದಲೇ ಎದುರಾಳಿ ಬೌಲರ್‌ಗಳ ಮೇಲೆ ಒತ್ತಡ ಹೇರುವ ಸಾಮರ್ಥ್ಯ ಅಭಿಷೇಕ್ ಶರ್ಮಾಗೆ ಸಿದ್ಧಿಸಿದೆ. ಆಧುನಿಕ ಟಿ20 ಕ್ರಿಕೆಟ್‌ಗೆ ಇಂತಹ ಭಯವಿಲ್ಲದ ಬ್ಯಾಟಿಂಗ್ ಶೈಲಿಯೇ ಅಗತ್ಯ,' ಎಂದು ಅಭಿಮಾನಿಗಳು ಶ್ಲಾಘಿಸಿದ್ದಾರೆ. ಅಲ್ಲದೆ ಅಫ್ಘಾನಿಸ್ತಾನದ ಶಫೀಕುಲ್ಲಾ ಶಿನ್ವಾರಿ ಹಾಗೂ ಸಹ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿರುವುದು ಭಾರತೀಯ ಕ್ರಿಕೆಟ್‌ನ ಅಗಾಧ ಪ್ರತಿಭೆಗೆ ಸಾಕ್ಷಿ ಅಂತಲೂ ಕೊಂಡಾಡಿದ್ದಾರೆ.

ಕಿವೀಸ್ ನೆಲದಲ್ಲಿ ಮ್ಯಾಟ್ ಹೆನ್ರಿಯಂತಹ ಅನುಭವಿ ವೇಗಿಯ ವಿರುದ್ಧ 226 ರನ್‌ಗಳ ಬೃಹತ್ ಚೇಸಿಂಗ್ ವೇಳೆಯೂ ಆಕ್ರಮಣಕಾರಿ ಆಟವಾಡಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಅಭಿಷೇಕ್ ಅವರ ಬ್ಯಾಟಿಂಗ್ ಮನೋಭಾವವನ್ನು ಭಾರತೀಯ ಮಾಜಿ ಕ್ರಿಕೆಟಿಗರು ಪ್ರಶಂಸಿಸಿದ್ದಾರೆ. ಸಂಜು ಸ್ಯಾಮ್ಸನ್ ಅವರೊಂದಿಗೆ ಇನಿಂಗ್ಸ್ ಆರಂಭಿಸಿ ಭಾರತಕ್ಕೆ ಬಿರುಗಾಳಿಯಂತಹ ಶುಭಾರಂಭ ನೀಡಿದ ಈ ಜೋಡಿಯ ಪ್ರದರ್ಶನವನ್ನು ಕಂಡು ಅಭಿಮಾನಿಗಳು, 'ಟಿ20 ಕ್ರಿಕೆಟ್‌ನಲ್ಲಿ ಭಾರತಕ್ಕೆ ಅತ್ಯುತ್ತಮ ಆರಂಭಿಕ ಜೋಡಿ ಸಿಕ್ಕಿದೆ,' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಅಭಿಷೇಕ್ ಶರ್ಮಾ ಅವರ ಈ ವಿಶ್ವ ದಾಖಲೆಯು ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ದಾಖಲೆಯ ಅಂಕಿ-ಅಂಶಗಳು ಸಖತ್ ಟ್ರೆಂಡ್ ಆಗುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+