RCB Captain: ಆರ್‌ಸಿಬಿ ಕ್ಯಾಪ್ಟನ್ ಹೆಸರು ರಿವೀಲ್; ಫಾಫ್ ಡು ಪ್ಲೆಸಿಸ್ ಸ್ಥಾನಕ್ಕೆ ಇವರೇ ಫಿಕ್ಸ್!
RCB Captain: ಆರ್‌ಸಿಬಿ ಪ್ರಾಂಚೈಸಿ ಈ ಬಾರಿ ಮೂವರನ್ನು ಉಳಿಸಿಕೊಂಡು ಉಳಿದೆಲ್ಲಾ ಆಟಗಾರರನ್ನು ಕೈಬಿಟ್ಟಿತ್ತು. ಈ ಪೈಕಿ ಕಳೆದ ಬಾರಿ ಅಂದರೆ 17ನೇ ಆವೃತ್ತಿಯಲ್ಲಿ ತಂಡದ ನಾಯಕನಾಗಿದ್ದ ಫಾಫ್ ಡುಪ್ಲೆಸಿಸ್ ಅವರನ್ನು ಕೈಬಿಟ್ಟಿತ್ತು. ಈಗಾಗಲೇ 18ನೇ ಆವೃತ್ತಿಗೆ ತಂಡದ ಆಯ್ಕೆ ಕೂಡ ಆಗಿದೆ. ಇದೀಗ ಡುಪ್ಲೆಸಿಸ್ ಸ್ಥಾನ ತುಂಬುವ ಅಚ್ಚರಿ ಹೆಸರೊಂದು ರಿವೀಲ್ ಆಗಿದೆ. ಮಾಹಿತಿ ಇಲ್ಲಿದೆ ತಿಳಿಯಿರಿ.
ಈಗಾಗಲೇ ಐಪಿಎಲ್ 2025 ಆವೃತ್ತಿಯ ತಂಡಗಳ ಆಯ್ಕೆ ಅಂತಿಮವಾಗಿದೆ. ಅದರಲ್ಲೂ ಫಾಫ್ ಡುಪ್ಲೆಸಿಸ್ ಅವರನ್ನು ಕೈಬಿಟ್ಟ ಬಳಿಕ ಇವರು ವಹಿಸಿಕೊಂಡಿದ್ದ ನಾಯಕನ ಸ್ಥಾನಕ್ಕೆ ಯಾರು ಸೂಕ್ತ ಎನ್ನುವ ಚರ್ಚೆಗಳು ಜೋರಾಗಿ ನಡದಿದ್ದವು. ಇದೀಗ ಇದಕ್ಕೆ ಎಬಿ ಡಿವಿಲಿಯರ್ಸ್ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.

ಕಳೆದ ಮೂರು ಆವೃತ್ತಿಯಲ್ಲೂ ಅಂದರೆ 2022, 2023, 2024ರಲ್ಲಿ ಆರ್‌ಸಿಬಿ ನಾಯಕನಾಗಿ ಫಾಫ್ ಡುಪ್ಲೆಸಿಸ್ ಅವರು ತಂಡವನ್ನು ಮುನ್ನಡೆಸಿದ್ದರು. ಆದರೆ, ಈ ಬಾರಿ ಇವರನ್ನು ಆರ್‌ಸಿಬಿ ಪ್ರಾಂಚೈಸಿ ಕೈಬಿಟ್ಟಿದ್ದು, ಇವರು ತುಂಬಿದ್ದ ನಾಯಕತ್ವ ಸ್ಥಾನಕ್ಕೆ ಹುಡುಕಾಟ ನಡೆದಿತ್ತು. ಇದೀಗ 2025ರ ಅಂದರೆ 18ನೇ ಆವೃತ್ತಿಯ ತಂಡಡ ನಾಯಕನಾಗಿ ವಿರಾಟ್ ಕೊಹ್ಲಿಯೇ ಕ್ಯಾಪ್ಟನ್ ಆಗುತ್ತಾರೆ ಎಂದು ಭಾವಿಸುತ್ತೇನೆ ಎಂದು ಎಬಿ ಡಿವಿಲಿಯರ್ಸ್ ಹೇಳಿ ಗಮನ ಸೆಳೆದಿದ್ದಾರೆ.
ಮಿಸ್ಟರ್ 360 ಹೇಳಿದ್ಧೇನು?: ಮೆಗಾ ಹರಾಜು ಮುಗಿದ ಬೆನ್ನಲ್ಲೇ ಯಾರು ಆರ್‌ಸಿಬಿ ನಾಯಕತ್ವವವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳಲ್ಲಿ ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ಇದೀಗ ಆರ್‌ಸಿಬಿ ದಂತಕತೆ, ದಕ್ಷಿಣ ಆಫ್ರಿಕಾ ಕ್ರಿಕೆಟರ್, ಮಿಸ್ಟರ್ 360 ಅಂತಲೇ ಪ್ರಸಿದ್ಧಿ ಪಡೆದಿದ್ದ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್‌ನಲ್ಲಿ ಮಾತನಾಡಿ, ವಿರಾಟ್ ಕೊಹ್ಲಿಗೆ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವ ಭರವಸೆ ಇದೆ. ಆದರೆ ಈ ಬಗ್ಗೆ ನನಗೆ ಇನ್ನೂ ದೃಢ ಮಾಹಿತಿ ಇಲ್ಲ ಎಂದು ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆರ್‌ಸಿಬಿ ಒಟ್ಟು 143 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 66 ಪಂದ್ಯಗಳನ್ನು ಗೆದ್ದು, 70 ಪಂದ್ಯಗಳಲ್ಲಿ ಸೋಲನುಭವುಸಿದೆ. 2016ರಲ್ಲಿ ವಿರಾಟ್ ಕೊಹ್ಲಿನಾಯಕತ್ವದಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿತ್ತು. ಒಟ್ಟು 2013ರಿಂದ 2021ರವರೆಗೆ ವಿರಾಟ್ ಕೊಹ್ಲಿ ಅವರೇ ಆರ್‌ಸಿಬಿ ನಾಯಕತ್ವವನ್ನು ವಹಿಸಿಕೊಂಡು ತಂಡವನ್ನು ಮುನ್ನಡೆಸಿದವರಾಗಿದ್ದಾರೆ.
ಆರ್‌ಸಿಬಿ ಉಳಿಸಿಕೊಂಡಿದ್ದ 3 ಆಟಗಾರರು & ಮೊತ್ತವೆಷ್ಟು?
1. ವಿರಾಟ್ ಕೊಹ್ಲಿ - ₹21 ಕೋಟಿ
2. ರಜತ್ ಪಾಟಿದಾರ್ - ₹11 ಕೋಟಿ
3. ಯಶ್ ದಯಾಳ್ - ₹5 ಕೋಟಿ
ಆರ್‌ಸಿಬಿ ಖರೀದಿಸಿದ ಆಟಗಾರರ ಪಟ್ಟಿ
* ಜೋಶ್ ಹ್ಯಾಜಲ್ವುಡ್ - ₹12.50 ಕೋಟಿ
* ಫಿಲ್ ಸಾಲ್ಟ್ ಮೂಲ ಬೆಲೆ 2 ಕೋಟಿ ಇದ್ದು ₹11.50 ಕೋಟಿಗೆ ಖರೀದಿಸಿದೆ.
* ಜಿತೇಶ್ ಶರ್ಮಾ- ₹11 ಕೋಟಿ
* ಭುವನೇಶ್ವರ್ ಕುಮಾರ್-₹10.75 ಕೋಟಿ
* ಲಿಯಾಮ್ ಲಿವಿಂಗ್ಸ್ಟೋನ್- ₹8.75 ಕೋಟಿ
* ರಾಸಿಖ್ ದಾರ್- ₹6 ಕೋಟಿ
* ಕೃನಾಲ್ ಪಾಂಡ್ಯ- ₹5.75 ಕೋಟಿ
* ಟಿಮ್ ಡೇವಿಡ್- ₹3 ಕೋಟಿ
* ಜಾಕೋಬ್ ಬೆಟ್ಟೆಲ್- ₹2.60 ಕೋಟಿ
* ಸುಯಶ್ ಶರ್ಮಾ - ₹2.60 ಕೋಟಿ
* ದೇವದತ್ ಪಡಿಕ್ಕಲ್ - ₹2 ಕೋಟಿ
* ನುವಾನ್ ತುಷಾರ- ₹1.60 ಕೋಟಿ
* ರೊಮಾರಿಯೋ ಶೆಫರ್ಡ್- ₹1.50 ಕೋಟಿ
* ಲುಂಗಿಸಾನಿ ಎನ್ಗಿಡಿ- ₹1 ಕೋಟಿ
* ಸ್ವಪ್ನಿಲ್ ಸಿಂಗ್ - ₹50 ಲಕ್ಷ
* ಅಭಿನಂದನ್ ಸಿಂಗ್ - ₹30 ಲಕ್ಷ
* ಸ್ವಸ್ತಿಕ ಚಿಕಾರ - ₹30 ಲಕ್ಷ
* ಮನೋಜ್ ಭಾಂಡ- ₹30 ಲಕ್ಷ
* ಮೋಹಿತ್ ರಾಠಿ- ₹30 ಲಕ್












Click it and Unblock the Notifications