Viat Kohli: ವಿರಾಟ್‌ ಕೊಹ್ಲಿಗೆ ಮರೆಯಲಾಗದ ನೆನಪಿನ ಕಾಣಿಕೆ: ವೈಟ್‌ ಜೆರ್ಸಿಯಲ್ಲಿ 40,000 ಅಭಿಮಾನಿಗಳು..

Tribute To Viat Kohli: ಕೆಲದ ಕೆಲವು ದಿನಗಳ ಹಿಂದೆಯಷ್ಟೇ ವಿರಾಟ್‌ ಕೊಹ್ಲಿ ಅವರು ಟೆಸ್ಟ್‌ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ್ದರು. ವಿದಾಯ ಪಂದ್ಯಕ್ಕೂ ಮುನ್ನ ನಿವೃತ್ತಿ ಘೋಷಿಸಿದ್ದರಿಂದ ಬೇಸರಗೊಂಡ ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಚೇಸ್‌ ಮಾಸ್ಟರ್‌ಗೆ ಬೆಂಗಳೂರಿನ ಚಿನ್ನಸ್ವಾಮಿಯ ಕ್ರೀಡಾಂಗಣದಲ್ಲಿ ಗೌರವ ಸಲ್ಲಿಸಲು ಭರ್ಜರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಅರ್ಧಕ್ಕೆ ರದ್ದಾಗಿದ್ದ ಐಪಿಎಲ್‌ 2025 ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯ ಆರ್‌ಸಿಬಿ ಹಾಗೂ ಕೆಕೆಆರ್‌ ನಡುವೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ 7:30ಕ್ಕೆ ನಡೆಯಲಿದೆ. ಈ ವೇಳೆ ಆರ್‌ಸಿಬಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆಯುವುದಷ್ಟೇ ಅಲ್ಲದೆ, ವಿರಾಟ್‌ ಕೊಹ್ಲಿ ಅವರು ಜೀನವದುದ್ದಕ್ಕೂ ನೆನಪಲ್ಲಿಟ್ಟುಕೊಳ್ಳುವಂತಹ ದೊಡ್ಡ ಉಡುಗೊರೆ ಕೊಡಲು ಮುಂದಾಗಿದ್ದಾರೆ.

40 000 Fans to Honour Virat Kohli by Wearing White Jersey in Bengaluru

ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ತಂಡ ಅಂತಾ ಇದ್ರೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮಾತ್ರ. ಆರ್‌ಸಿಬಿ ಕಳೆದ 17 ಸೀಸನ್‌ಗಳಲ್ಲಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಹಾಗಂತ ಅಭಿಮಾನಿಗಳ ಸಂಖ್ಯೇನು ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ಇಡೀ ಭಾರತ ಅಷ್ಟೇ ಅಲ್ಲದೆ, ವಿಶ್ವವೇ ಮಾತನಾಡುತ್ತಿದೆ. ಎಷ್ಟೇ ಬಾರಿ ಸೋತರೂ.. ನಮ್‌ ಸಪೋರಟ್‌ ಏನಿದ್ರೂ ಅದು ನಮ್ಮ ಬೆಂಗಳೂರು ಟೀಂಗೆ ಮಾತ್ರ ಅಂತಿದ್ದಾರೆ ಅಭಿಮಾನಿಗಳು.

ಅದರಲ್ಲೂ, ಒಂದೇ ಒಂದು ಪಂದ್ಯ ಗೆದ್ದರೆ ಸಾಕು, ಫೈನಲ್‌ ಗೆದ್ದಿರುವ ಮಟ್ಟಿಗೆ ಸೆಲೆಬ್ರೆಷನ್‌ ಮಾಡುತ್ತಾರೆ. ಇನ್ನೂ ಫೈನಲ್‌ ಗೆದ್ದು ಟ್ರೋಫಿ ಎತ್ತಿದ್ದರೆ ಯಾವ ಮಟ್ಟಿಗೆ ಸಂಭ್ರಾಮಾಚರಣೆ ಮಾಡುತ್ತರೆಯೋ ಎಂದು ಊಹಿಸಿಕೊಳ್ಳಲು ಆಗದು. ಈ ಬಾರಿ ಪ್ಲೇ ಆಪ್‌ ಪ್ರವೇಶಿಸುವ ಹಂತದಲ್ಲಿದ್ದು, ಇಂದು ಕೆಕೆಆರ್ ವಿರುದ್ಧ ಗೆದ್ದರೇ ಇದು ಸಾಧ್ಯವಾಗಲಿದೆ. ಇದಕ್ಕೂ ಮುಂಚೆ ಟೆಸ್ಟ್‌ ಕ್ರಿಕೆಟಗೆ ವಿದಾಯ ಹೇಳಿರುವ ಆರ್‌ಸಿಬಿ ಸ್ಫೋಟಕ ಬ್ಯಾಟರ್ ವಿರಾಟ್‌ ಕೊಹ್ಲಿ ಅವರಿಗೆ ಗೌರವ ಸಲ್ಲಿಸಲು ಅಭಿಮಾನಿಗಳೆಲ್ಲ ವೈಟ್‌ ಜೆರ್ಸಿ ತೊಟ್ಟು ಆಗಮಿಸಲಿದ್ದಾರೆ.

ಈ ಮೂಲಕ ವಿರಾಟ್‌ ಕೊಹ್ಲಿ ಅವರು ಎಂದಿಗೂ ಮರೆಯಲಾರದ ಸವಿ ನೆನೆಪು ಕೊಡಲು ತಯಾರಾಗಿದ್ದಾರೆ. ಮತ್ತೊಂದೆಡೆ ಚಿನ್ನಸ್ವಾಮಿ ಕ್ರೀಡಾಂಗಣ ಶ್ವೇತವರ್ಣದಿಂದ ರಾರಾಜಿಸುವುದಂತೂ ಪಕ್ಕಾ.. ಜೊತೆಗೆ ವಿರಾಟ್‌.. ವಿರಾಟ್‌.. ಎನ್ನವ ಘೋಷಣೆಗಳು ಕೂಡ ಮೊಳಗಲಿವೆ. ಇದು ಯಾವ ಮಟ್ಟಿಗೆ ಸುದ್ದಿಯಾಗುತ್ತದೆಯೋ ಊಹಿಸಲು ಆಗದು.. ಅಷ್ಟರ ಮಟ್ಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಇಂದಿನ ಆರ್‌ಸಿಬಿ ಹಾಗೂ ಕೆಕೆಆರ್ ನಡುವೆ ನಡೆಯುವ ಪಂದ್ಯಕ್ಕೆ ಒಂದಲ್ಲ... ಎರಡಲ್ಲ 40,000 ಪ್ರೇಕ್ಷಕರು ನಂಬರ್ 18ರ ವೈಟ್ ಜೆರ್ಸಿ ಧರಿಸಿ ಕೊಹ್ಲಿ ಅವರಿಗೆ ಟೆಸ್ಟ್ ಕ್ರಿಕೆಟ್‌ನ ಅದ್ಧೂರಿ ವಿದಾಯದ ಬೀಳ್ಕೊಡುಗೆ ಕೊಡಲು ಸಿದ್ಧರಾಗಿದ್ದಾರೆ. ಇಂದು ಇಡೀ ಕ್ರೀಡಾಂಗಣವೇ ಶ್ವೇತವರ್ಣದಿಂದ ಕಂಗೊಳಿಸುವುದಂತು ಪಕ್ಕಾ.. ಆರ್‌ಸಿಬಿ ವಿರಾಟ್‌ ಕೊಹ್ಲಿ ಅವರ ಕೊಡುಗೆ ಅಪಾರ. ಅಲ್ಲದೆ, ವಿದಾಯ ಪಂದ್ಯವಿಲ್ಲದೇ ಅವರು ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದು ಬೇಸರ ತಂದಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಅಂತಿದ್ಧಾರೆ ಅಭಿಮಾನಿಗಳು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಸಾಧನೆ

* ಟೆಸ್ಟ್‌ಗೆ ಪಾದಾರ್ಪಣೆ: 2011
* ಪಂದ್ಯಗಳು: 123
* ರನ್‌: 9,230

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+