ಫೀನಿಕ್ಸ್ ಮಿಲ್ಸ್ ಲಿಮಿಟೆಡ್‌ನಲ್ಲಿ ಸಿಂಗಾಪುರ ಸರ್ಕಾರ 450 ಕೋಟಿ ಹೂಡಿಕೆ

ನವದೆಹಲಿ, ಆಗಸ್ಟ್‌ 22: ಮಾಲ್ ಡೆವಲಪರ್ ಫೀನಿಕ್ಸ್ ಮಿಲ್ಸ್ ಲಿಮಿಟೆಡ್‌ನ ಇತ್ತೀಚಿನ ಅರ್ಹವಾದ ಸಾಂಸ್ಥಿಕ ನಿಯೋಜನೆ (ಕ್ಯೂಐಪಿ) ಕೊಡುಗೆಗಾಗಿ ಸಿಂಗಾಪುರ್ ಸರ್ಕಾರ 450 ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎಂದು ಕಂಪನಿಯು ಷೇರು ವಿನಿಮಯ ಕೇಂದ್ರಗಳಿಗೆ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ.

ಫೀನಿಕ್ಸ್ ಮಿಲ್ಸ್ ತನ್ನ ಕ್ಯೂಐಪಿ ಮೂಲಕ 1,100 ಕೋಟಿ ಸಂಗ್ರಹಿಸಿದೆ ಎಂದು ಮಿಂಟ್ ಶುಕ್ರವಾರ ವರದಿ ಮಾಡಿತ್ತು. ಇದರಲ್ಲಿ ಸಿಂಗಾಪುರ ಸರ್ಕಾರ ಷೇರು ಮಾರಾಟದಲ್ಲಿ ಅತಿದೊಡ್ಡ ಹೂಡಿಕೆದಾರರಾಗಿದ್ದು, ಒಟ್ಟು ಮೊತ್ತದ ಸುಮಾರು ಶೇಕಡಾ 41ರಷ್ಟು ಕೊಡುಗೆ ನೀಡಿದೆ.

Phoenix Mills Share Sale: Singapore Govt Invests Rs 450 Crore

ಷೇರು ವಿನಿಮಯದ ಇತರ ಪ್ರಮುಖ ಹೂಡಿಕೆದಾರರು ದೇಶೀಯ ಸಾಂಸ್ಥಿಕ ಹೂಡಿಕೆದಾರರಾದ ಐಸಿಐಸಿಐ ಪ್ರುಡೆನ್ಶಿಯಲ್ ಮ್ಯೂಚುಯಲ್ ಫಂಡ್, ಎಸ್‌ಬಿಐ ಮ್ಯೂಚುವಲ್ ಫಂಡ್ ಮತ್ತು ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುಯಲ್ ಫಂಡ್ ಅನ್ನು ಒಳಗೊಂಡಿದೆ ಎಂದು ಸ್ಟಾಕ್ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ ಕಂಪನಿ ತಿಳಿಸಿದೆ.

ಈ ಹೂಡಿಕೆದಾರರಿಗೆ 603 ರೂಪಾಯಿಗೆ ಷೇರುಗಳನ್ನು ನೀಡಲಾಯಿತು. ಶುಕ್ರವಾರ, ಫೀನಿಕ್ಸ್ ಮಿಲ್ಸ್ ಷೇರುಗಳು ಪ್ರತಿ ಷೇರಿಗೆ 697 ರೂಪಯಿಗೆ ವಹಿವಾಟು ಕೊನೆಗೊಂಡಿದೆ. ಹಿಂದಿನ ದಿನದ ವಹಿವಾಟಿಗಿಂತ ಶೇಕಡಾ 7.8 ರಷ್ಟು ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+