ಫೇಸ್‌ಬುಕ್‌ನಲ್ಲಿ ಲೈವ್ ಬಂದ 'ಕಾಲಾ': ಸಿಂಗಪುರದಲ್ಲಿ ಯುವಕನ ಬಂಧನ
ಸಿಂಗಪುರ, ಜೂನ್ 7: ಗುರುವಾರ ಬಿಡುಗಡೆಯಾದ ರಜನಿಕಾಂತ್ ಅಭಿನಯದ ತಮಿಳು ಸಿನಿಮಾ 'ಕಾಲಾ'ವನ್ನು ಫೇಸ್‌ಬುಕ್‌ನಲ್ಲಿ ಲೈವ್ ನೀಡಿದ ವ್ಯಕ್ತಿಯೊಬ್ಬನನ್ನು ಸಿಂಗಪುರದಲ್ಲಿ ಬಂಧಿಸಲಾಗಿದೆ.
'ಕಾಲಾ' ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟ ಮೊದಲ ಪ್ರದರ್ಶನದಲ್ಲಿಯೇ ಪ್ರವೀಣ್ ಥೇವರ್ ಎಂಬಾತ ಅದನ್ನು ಮೊಬೈಲ್ ಮೂಲಕ ಫೇಸ್‌ಬುಕ್‌ನಲ್ಲಿ ಲೈವ್ ನೀಡಿದ್ದ. ಈ ಸಂಗತಿಯನ್ನು ತಿಳಿದ ಚಿತ್ರಮಂದಿರದ ಸಿಬ್ಬಂದಿ ಪೊಲೀಸರ ಗಮನಕ್ಕೆ ತಂದರು.
ಕೂಡಲೇ ಚಿತ್ರಮಂದಿರಕ್ಕೆ ತೆರಳಿದ ಸಿಂಗಪುರ ಪೊಲೀಸರು ಕಾನೂನು ಬಾಹಿರವಾಗಿ ಸಿನಿಮಾ ಲೈವ್ ಮಾಡುತ್ತಿದ್ದ ಪ್ರವೀಣ್‌ನನ್ನು ಬಂಧಿಸಿದ್ದಾರೆ.

ಪ್ರದರ್ಶನ ಶುರುವಾದಾಗಿನಿಂದ ಸುಮಾರು 40 ನಿಮಿಷಗಳ ವರೆಗೆ ಪ್ರವೀಣ್ ಸಿನಿಮಾವನ್ನು ನೇರವಾಗಿ ಫೇಸ್‌ಬುಕ್‌ನಲ್ಲಿ ವೀಕ್ಷಿಸಲು ಸಾಧ್ಯವಾಗುವಂತೆ ಮಾಡಿದ್ದಾನೆ. ಇದನ್ನು 12 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಕಾಲಾ ಸಿನಿಮಾ ಈಗಾಗಲೇ ವಿವಿಧ ದೇಶಗಳ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳ ವಿರೋಧದ ನಡುವೆಯೂ ಬಿಡುಗಡೆಯ ಪ್ರಯತ್ನಗಳು ನಡೆಯುತ್ತಿವೆ.
ಅಹಿತಕರ ಘಟನೆಗಳು ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ 'ಕಾಲಾ' ಸಿನಿಮಾವನ್ನು ಬಿಡುಗಡೆ ಮಾಡಲು ಉದ್ದೇಶಿಸಿರುವ ಚಿತ್ರಮಂದಿರಗಳಿಗೆ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.












Click it and Unblock the Notifications