ಸಿಂಗಾಪುರದಲ್ಲಿರುವ 250 ಭಾರತೀಯರಿಗೆ ಕೊರೊನಾ ಸೋಂಕು ದೃಢ

ಸಿಂಗಾಪುರ, ಏಪ್ರಿಲ್ 9: ಸಿಂಗಾಪುರದಲ್ಲಿರುವ 250ಕ್ಕೂ ಹೆಚ್ಚು ಭಾರತೀಯರಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಕೊರೊನಾ ಸೋಂಕು ಪೀಡಿತರಲ್ಲಿ ಶೇ.50ಕ್ಕೂ ಹೆಚ್ಚು ಮಂದಿ ವಿದೇಶಿ ಕಾರ್ಮಿಕರ ವಸತಿ ನಿಲಯಗಳಲ್ಲಿ ವಾಸಿವಿದ್ದರು. ವಿದೇಶಿ ಕಾರ್ಮಿಕರ ವಸತಿ ನಿಲಯಗಳನ್ನು ಸಿಂಗಾಪುರದಲ್ಲಿ ಕೊರೊನಾ ಹರಡುವ ಮೂಲ ಜಾಗಗಳೆಂದು ಗುರುತಿಸಲಾಗಿದೆ.

ಸೋಂಕು ಪೀಡಿತರಲ್ಲಿ ಹೆಚ್ಚು ಮಂದಿಯ ಆರೋಗ್ಯ ಸ್ಥಿರವಾಗಿದ್ದು, ಸುಧಾರಣೆ ಕಾಣುತ್ತಿದೆ ಎಂದು ಭಾರತೀಯ ಹೈಕಮಿಷನರ್ ಜಾವೇದ್ ಅಶ್ರಫ್ ತಿಳಿಸಿದ್ದಾರೆ.

250 Indians Infected By Coronavirus In Singapore

ಸೋಂಕಿತರಲ್ಲಿ 250ಕ್ಕೂ ಹೆಚ್ಚು ಮಂದಿ ಭಾರತೀಯ ರಾಷ್ಟ್ರೀಯತೆ ಹೊಂದಿದ್ದಾರೆ. ಕೆಲವರು ಸಿಂಗಾಪುರದ ಖಾಯಂ ನಿವಾಸಿಗಳಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಸಿಂಗಾಪುರದಲ್ಲಿ ಮಾರಣಾಂತಿಕ ಕೊರೊನಾ ವೈರಸ್‌ಗೆ ಈಗಗಲೇ 6 ಮಂದಿ ಬಲಿಯಾಗಿದ್ದಾರೆ. 1910ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.

ಏಪ್ರಿಲ್ 8ರಂದು ಭಾರತೀಯ ಮೂಲದ 32 ವರ್ಷದ ಮಹಿಳೆಯೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ. ಅವರಿಗೆ ಹೃದಯ ಸಂಬಂಧಿ ತೊಂದರೆ ಇತ್ತು.

ಭಾರತದಲ್ಲಿ ಒಂದೇ ದಿನ 37 ಮಂದಿ ಮೃತಪಟ್ಟಿದ್ದು 896 ಹೊಸ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಮೃತರ ಸಂಖ್ಯೆ 200ರ ಗಡಿ ದಾಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+