ಕರ್ಕಶ ಶಬ್ಧ ಮಾಡುವ ಹಾರ್ನ್‌ ಹಾಕಿಸಿದ ವಾಹನ ಸವಾರರಿಗೆ ತಮ್ಮದೇ ಶೈಲಿಯಲ್ಲಿ ಕ್ಲಾಸ್‌ ತೆಗೆದುಕೊಂಡ ಟ್ರಾಫಿಕ್‌ ಪೊಲೀಸ್‌

ಶಿವಮೊಗ್ಗ, ಜನವರಿ, 20: ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಅದರಲ್ಲೂ ವಾಹನಗಳಿಗೆ ಹೆಚ್ಚು ಸೌಂಡ್ ಮಾಡುವ ಹಾರ್ನ್‌ಗಳನ್ನು ಹಾಕಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಹಾಗೆಯೇ ಪೊಲೀಸರು ಇಂತಹವರ ವಿರುದ್ಧ ಸಮರ ಸಾರುವ ಕೆಲಸವನ್ನು ಮಾಡುತ್ತಿದ್ದಾರೆ. ಇದೀಗ ಇಂತಹದ್ದೇ ಘಟನೆಯೊಂದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಹೆಚ್ಚು ಸೌಂಡ್‌ ಮಾಡುವ ಹಾರ್ನ್‌ಗಳನ್ನು ವಾಹನಗಳಿಗೆ ಹಾಕಿಸಬಾರದು ಎಂಬ ನಿಯಮವಿದೆ. ಆದರೂ ಕೆಲವರು ಇದನ್ನು ಉಲ್ಲಂಘಿಸಿ ಇಂತಹ ಹಾರ್ನ್‌ಗಳನ್ನು ಹಾಕಿಸುತ್ತಿದ್ದಾರೆ. ಇದರಿಂದ ವೃದ್ಧರು, ಚಿಕ್ಕ ಮಕ್ಕಳು, ಸಾರ್ವಜನರಿಕರಿಗೆ, ರೋಗಿಗಳಿಗೆ ತುಂಬಾ ತೊಂದರೆ ಆಗುವುದಲ್ಲದೆ, ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಕೂಡ ಇವೆ. ಅದರಲ್ಲೂ ಇಂತಹ ಹಾರ್ನ್‌ಗಳಿಂದ ಹೃದಯ ಸಂಬಂಧಿ ಖಾಯಿಲೆಗಳಿರುವ ಹಾಗೂ ಮಕ್ಕಳಿಗೆ ತುಂಬಾ ತೊಂದರೆಯಾಗಲಿದೆ.

Traffic Police Class for Motorists doing Loudly Horn video viral

ಆದ್ದರಿಂದ ಪೊಲೀಸರು ಆಗಾಗ ಇಂತಹ ಹಾರ್ನ್‌ಗಳನ್ನು ಹಾಕಿಸಬೇಡಿ ಅಂತಲೂ ಸೂಚನೆ ನೀಡುತ್ತಲೇ ಇರುತ್ತಾರೆ. ಆದರೂ ಸಹ ಕೆಲ ವಾಹನ ಸವಾರರು ತಾವು ಆಡಿದ್ದೇ ಆಟ ಎಂಬಂತೆ ಇಂತಹ ಹಾರ್ನ್‌ಗಳನ್ನೇ ಹಾಕಿಸಿ ಪುಂಡಾಟ ಮೆರೆಯುತ್ತಿದ್ದಾರೆ. ಇಂತಹವರಿಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ಬುದ್ಧಿ ಕಲಿಸಲು ಮುಂದಾಗಿದ್ದಾರೆ. ಇದೀಗ ಶಿವಮೊಗ್ಗದಲ್ಲಿ ಕೆಲವು ವಾಹನ ಸವಾರರು ಇಂತಹ ಹಾರ್ನ್‌ ಹಾಕಿಸಿ ಪಜೀತಿಗೆ ಸಿಲುಕಿದ ಘಟನೆ ನಡೆದಿದೆ.

ಪೊಲೀಸರು ಹೆಚ್ಚು ಸೌಂಡ್‌ ಮಾಡುವ ಹಾರ್ನ್‌ ಹಾಕಿಸಿದ ವಾಹನ ಸವಾರರನ್ನು ಕರೆತಂದು ಬಸ್‌ ಹಾರ್ನ್‌ಗೆ ಕಿವಿ ಕೊಡು ಎಂದು ಹೇಳುವ ಮೂಲಕ ತಮ್ಮದೇ ಶೈಲಿಯಲ್ಲಿ ಪಾಠ ಮಾಡಿದ್ದಾರೆ. ಆಗ ಆ ವಾಹನ ಸವಾರ ಇನ್ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಬಿಟ್ಬಿಡಿ ಸಾರ್ ಎಂದು ಮನವಿ ಮಾಡಿಕೊಂಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಟ್ರಾಫಿಕ್‌ ಪೊಲೀಸರೊಬ್ಬರು ಕರ್ಕಷ ಶಬ್ಧ ಮಾಡುತ್ತಿದ್ದ ವಾಹನ ಸವಾರರನ್ನು ಬೇರೊಂದು ವಾಹನದ ಕೆಳಗಡೆ ಕೂರಿಸಿ ಸೌಂಡ್‌ ಕೇಳುವಂತೆ ಹೇಳಿದ್ದಾರೆ. ಬಳಿಕ ಏನಿದರ ಹೆಸರು ಎಂದು ಕೇಳಿದಾಗ, ಡ್ರೈವನ್‌ ಕರ್ಕಶ ಶಬ್ಧ ಸಾರ್‌ ಇದು ಎಂದು ಹೇಳುತ್ತಾರೆ. ಆಗ ಪೊಲೀಸರು ಮತ್ತೆ ಮುಂದುವರೆದು ಜನರಿಗೆ ಇದರಿಂದ ತೊಂದರೆ ಆಗುತ್ತದೆ ಅಲ್ವಾ? ಮತ್ತೆ ಯಾಕೆ ಇಂತಹ ಹಾರ್ನ್‌ ಹಾಕಿಸಿದ್ದೀರಾ? ನಿಯಮ ಉಲ್ಲಂಘನೆ ಅಲ್ವಾ ಇದು? ಮೊದಲು ಫೈನ್‌ ಕಟ್ಟು ಎಂದು ಹೇಳುವ ಮೂಲಕ ಕ್ಲಾಸ್ ತೆಗೆದುಕೊಂಡಿದ್ದಾರೆ. ಬರೀ ಶಿವಮೊಗ್ಗದಲ್ಲೇ ಅಲ್ಲ. ಎಲ್ಲಾ ಜಿಲ್ಲೆಗಳಲ್ಲೂ ಕೂಡ ಕೆಲ ವಾಹನ ಸವಾರರು ಇಂತಹ ಕರ್ಕಶ ಶಬ್ಧ ಮಾಡುವ ಹಾರ್ನ್‌ಗಳನ್ನು ಹಾಕಿಸಿ ಪೊಲೀಸರ ಕೈಗೆ ಸಿಕ್ಕು ಪಜೀತಿಗೆ ಸಿಲುಕಿರುವ ಘಟನೆಗಳು ನಡೆದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+