ದೇವೇಗೌಡರ ಸಂಬಂಧಿ ಲಾಕರ್ ನಲ್ಲಿ 6.5.ಕೋಟಿ ಪತ್ತೆ; ಬಂಧನ ಸಾಧ್ಯತೆ
ಶಿವಮೊಗ್ಗ, ಏಪ್ರಿಲ್ 05:ಶಿವಮೊಗ್ಗದ ಶ್ರುತಿ ಮೋಟಾರ್ಸ್ ಮಾಲೀಕ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಸಂಬಂಧಿ ಡಿ.ಟಿ.ಪರಮೇಶ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ವೇಳೆ ಒಟ್ಟು 6 ಕೋಟಿ 23 ಲಕ್ಷ ಹಣ ಪತ್ತೆಯಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಏಪ್ರಿಲ್ 4 ರಂದು ತಡರಾತ್ರಿ ಸಿಕ್ಕ ಲೆಕ್ಕದ ಪ್ರಕಾರ 6 ಕೋಟಿ 23 ಲಕ್ಷ ಹಣ ಪತ್ತೆಯಾಗಿದ್ದು, ಡಿ.ಪಿ.ಪರಮೇಶ್ರನ್ನು ಸತತ ವಿಚಾರಣೆಗೆ ಒಳಪಡಿಸಲಾಗಿದೆ. ಅವರನ್ನು ಇದೀಗ ಬಂಧಿಸುವ ಸಾಧ್ಯತೆ ಇದೆ.
ಒಂದು ಲಾಕರ್ನಲ್ಲಿ 4 ಕೋಟಿ, ಮತ್ತೊಂದು ಲಾಕರ್ನಲ್ಲಿ 2 ಕೋಟಿ ಹಣ ಪತ್ತೆಯಾಗಿದೆ. ಈ ಹಿಂದೆ ಮಾರ್ಚ್ 28ರಂದು ಶಿವಮೊಗ್ಗದಲ್ಲಿ ಡಿ.ಟಿ.ಪರಮೇಶ್ ರವರ ನಿವಾಸದ ಮೇಲೆ ಹಾಗೂ ಶೃತಿ ಮೋಟಾರ್ಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆದರೆ ಅಂದು ಅಧಿಕಾರಿಗಳಿಗೆ ಏನೂ ಸಿಕ್ಕಿರಲಿಲ್ಲ.

ಈಗ ಎರಡು ಲಾಕರ್ಗಳ ವಿಳಾಸ ಪತ್ತೆಯಾದ ನಂತರ ಐಟಿ ಅಧಿಕಾರಿಗಳು ತಮ್ಮ ಕಾರ್ಯಾಚರಣೆ ಆರಂಭಿಸಿದ್ದರು. ಲಾಕರ್ಗಳನ್ನು ಓಪನ್ ಮಾಡಿದಾಗ 2000 ರೂ.ಹಾಗೂ 500 ಮುಖ ಬೆಲೆಯ ಅಪಾರ ಪ್ರಮಾಣದ ಕಂತೆ ಕಂತೆ ನೋಟುಗಳನ್ನು ಕಂಡು ಐಟಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.












Click it and Unblock the Notifications