ಶಿವಮೊಗ್ಗ: ಪ್ರೀತಿಸಿ ಮದುವೆಯಾದ 8 ತಿಂಗಳಿಗೆ ನವವಿವಾಹಿತೆ ಸಾವು, ಡೆತ್‌ನೋಟ್‌ನಲ್ಲಿರುವುದೇನು?

ಶಿವಮೊಗ್ಗ, ಜನವರಿ 18: ನವವಿವಾಹಿತೆ ಮಲಗಿದ ಕೋಣೆಯಲ್ಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ನಾಲೂರು ಕೊಳಿಗೆ ಸಮೀಪ ದಾಸನಕೊಡಿಗೆಯಲ್ಲಿ ನಡೆದಿದೆ. ಶಮಿತಾ (24) ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಮೃತ ಶಮಿತಾ ಕಳೆದ ಎಂಟು ತಿಂಗಳ ಹಿಂದೆ ಸೋಮೇಶ್ವರ್‌ ಎನ್ನುವರನ್ನು ವಿವಾಹವಾಗಿದ್ದರು. ಶಮಿತಾ ಹಾಗೂ ಸೋಮೇಶ್ವರ್‌ ಪ್ರೀತಿಸಿ ವಿವಾಹವಾಗಿದ್ದರು ಎನ್ನಲಾಗಿದೆ.

Newly Married Woman Lost Her Life At Shivamogga

ಶಮಿತಾ ಪತಿ ಸೋಮೇಶ್ವರ ಅಭಯಾರಣ್ಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ರಾತ್ರಿ ಪಾಳಿ ಇದ್ದಿದ್ದರಿಂದ ಕೆಲಸಕ್ಕೆ ಹೋಗಿದ್ದಾರೆ. ಪತಿ ಮನೆಯಿಂದ ತೆರೆಳಿದ ಬಳಿಕ ಶಮಿತಾ ಮನೆಯ ಉಪ್ಪರಿಗೆ ಮೇಲಿದ್ದ ಕೋಣೆಗೆ ಹೋಗಿ ಮಲಗಿದ್ದಾರೆ. ಬೆಳಗ್ಗೆ ಎಷ್ಟು ಹೊತ್ತಾದರೂ ರೂಮಿನಿಂದ ಹೊರಕ್ಕೆ ಬರದ ಕಾರಣ ಗಂಡನ ಮನೆಯವರು ಬಾಗಿಲು ತಟ್ಟಿದ್ದಾರೆ. ಅನುಮಾನಗೊಂಡು ಕಿಟಕಿಯಲ್ಲಿ ನೋಡಿದ್ದಾರೆ. ಈ ವೇಳೆ ಶಮಿತಾ ಅವರ ಮೃತದೇಹ ಕಂಡುಬಂದಿದೆ ಎನ್ನಲಾಗಿದೆ.

ಕೂಡಲೇ ಶಮಿತಾ ಗಂಡನ ಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಹಾಗೂ ಶಮಿತಾ ಕುಟುಂಬಸ್ಥರಿಗು ವಿಷಯ ತಿಳಿಸಿದ್ದು, ಅವರು ಬರುವವರೆಗೂ ಕೋಣೆಯ ಬಾಗಿಲು ತೆಗೆದಿರಲಿಲ್ಲ. ಅಂತಿಮವಾಗಿ ಪೋಷಕರ ಸಮ್ಮುಖದಲ್ಲಿ ಕೋಣೆಯ ಬಾಗಿಲು ಒಡೆದು ಶಮಿತಾ ಮೃತದೇಹ ಸ್ಥಳಾಂತರ ಮಾಡಲಾಗಿದೆ. ಶಮಿತಾ ಸಾವನ್ನಪ್ಪಿರುವ ಸ್ಥಳದಲ್ಲಿ ಡೆತ್‌ನೋಟ್ ಸಹ ಸಿಕ್ಕಿದ್ದು, ಆಕೆ ಅನಾರೋಗ್ಯದ ಕಾರಣಕ್ಕೆ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇನ್ನು ಶಮಿತಾ ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಕೆಲವು ವಿಚಾರಗಳನ್ನು ಬರೆಯಲಾಗಿದೆ. 'ಅಮ್ಮನ ಜಾಗವನ್ನು ಯಾರು ತುಂಬಲು ಆಗಲ್ಲ. ನಾನು ತುಂಬಾ ಟ್ರೈ ಮಾಡಿದೇ ಅಡ್ಜಸ್ಟ್‌ ಆಗೋಕೆ ಆದರೆ ಆಗುತ್ತಿಲ್ಲ. ಇಲ್ಲಿ ಯಾರದು ತಪ್ಪು ಅಂತಾ ನಾನು ಹೇಳುತ್ತಿಲ್ಲ. ಯಾರಿಗೂ ನನಗೆ ಕೊಡಲು ಪ್ರೀತಿಯಾಗಲಿ, ಸಮಯವಾಗಲಿ ಇಲ್ಲ. ನನಗೆ ಈ ರೀತಿ ಇರಲು ಆಗಲ್ಲ. ' ಎಂದು ಬರೆದಿದ್ದಾರೆ ಎನ್ನಲಾಗಿದೆ.

(ಆತ್ಮಹತ್ಯೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಲ್ಲ. ನಿಮಗೆ ಬೆಂಬಲ ಬೇಕಾದರೆ ಅಥವಾ ಯಾರೊಂದಿಗಾದರೂ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬೇಕಿದ್ದರೇ ದಯವಿಟ್ಟು ನಿಮ್ಮ ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಸಹಾಯವಾಣಿಗಳು: ಆಸ್ರ: 022 2754 6669; ಸ್ನೇಹ ಇಂಡಿಯಾ ಫೌಂಡೇಶನ್: +914424640050 ಮತ್ತು ಸಂಜೀವಿನಿ: 011-24311918, ರೋಶ್ನಿ ಫೌಂಡೇಶನ್: ಸಂಪರ್ಕ: 040-66202001, 040-66202000, ಒಂದು ಜೀವನ: ಸಂಪರ್ಕ ಸಂಖ್ಯೆ: 78930 78930, SEVA: ಸಂಪರ್ಕ ಸಂಖ್ಯೆ: 09441778290 )

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+