• search
 • Live TV
ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿ ಮನೆ ಮಾತಾದ ಶಿವಮೊಗ್ಗದ ಲೇಡಿ ರೋಬೊ!

|
   ಶಿವಮೊಗ್ಗದ ಉಪಹಾರ ದರ್ಶಿನಿಯಲ್ಲಿದೆ ರೋಬೋಟ್ ಸಪ್ಲೈಯರ್ | Oneindia Kannada

   ಶಿವಮೊಗ್ಗ, ಮೇ 13 : ಸಾಮಾನ್ಯವಾಗಿ ಜಪಾನ್, ಅಮೆರಿಕ, ಸ್ವಿಟ್ಜರ್ ಲ್ಯಾಂಡ್ ಹೋಟೆಲ್ ಗಳಲ್ಲಿ ರೋಬೋಟ್ ಸಪ್ಲೈಯರ್ ಇರುವುದನ್ನು ಕೇಳಿದ್ದೇವೆ, ಕಂಡಿದ್ದೇವೆ. ಅದೇ ರೊಬೋಟ್ ಸಪ್ಲೈಯರ್ ಭಾರತಕ್ಕೆ ಬಂದರೆ.. ಅಲ್ಲ, ಅದು ನಮ್ಮ ರಾಜ್ಯಕ್ಕೆ ಬಂದ್ರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ? ಆ ಕನಸು ಈಗ ನನಸಾಗಿದೆ. ಇಂಥ ರೊಬೋಟ್ ಸಪ್ಲೈಯರ್ ನಮ್ಮ ರಾಜ್ಯ, ಅದರಲ್ಲೂ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿದೆ.

   ಹೌದು, ಶಿವಮೊಗ್ಗದ ವಿನೋಬನಗರದ ಪೊಲೀಸ್ ಚೌಕಿ ಸಮೀಪದಲ್ಲಿ ಉಪಹಾರ ದರ್ಶಿನಿ ಎಂಬ ಹೋಟೆಲ್ ನಲ್ಲಿ ಇದೇ ಮೊದಲ ಬಾರಿಗೆ ಗ್ರಾಹಕರಿಗೆ ಸೇವೆಯನ್ನು ನೀಡಲು ರೋಬೋಟಿಕ್ ಸಹಾಯ ಪಡೆದಿದ್ದು, ಇದು ಸದ್ಯ ನಗರದೆಲ್ಲೆಡೆ ಮನೆ ಮಾತಾಗಿದೆ.

   ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

   ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಗ್ರಾಹಕರಿಗೆ ಸೇವೆ ನೀಡಲು ಸಿಬ್ಬಂದಿ ಕೊರತೆ ಎದ್ದು ಕಾಣುತ್ತದೆ. ಲಾಭದಾಯಕ ಉದ್ಯಮವಾಗಿದ್ದರೂ ಸಹ ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಏರತೊಡಗಿದೆ. ಹೋಟೆಲ್ ಸಪ್ಲೈಯರ್ ಹುದ್ದೆ ಖಾಲಿ ಇದ್ದರೂ ಸಹ ಯುವಪೀಳಿಗೆ ಮುಂದೆ ಬರುತ್ತಿಲ್ಲ.

   ವಿಜ್ಞಾನ ಲೋಕದಲ್ಲಿ ಮಹತ್ತರ ಸಾಧನೆ: ಮಂಗಳ ಗ್ರಹಕ್ಕೆ ಕಾಲಿಟ್ಟ ನಾಸಾದ ರೋಬೋಟ್

   ಆದ್ದರಿಂದ ಇತ್ತೀಚಿನ ಅನೇಕ ಹೋಟೆಲ್ ಗಳಲ್ಲಿ ಸ್ವಸಹಾಯ ಪದ್ಧತಿಯೇ ರೂಢಿಯಲ್ಲಿದೆ. ಈ ಕೊರತೆಯನ್ನು ನೀಗಿಸಲು ಉಪಾಹಾರ ದರ್ಶಿನಿ ಮಾಲೀಕ ರಾಘವೇಂದ್ರ ರೋಬೋ ಮೊರೆ ಹೋಗಿದ್ದಾರೆ.

   2 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸಾಕು!

   2 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸಾಕು!

   ಸುಮಾರು 5.50 ಲಕ್ಷ ರೂ. ವೆಚ್ಚದಲ್ಲಿ ರೋಬೋ ಖರೀದಿಸಿ ಸೇವೆ ನೀಡಲು ಮುಂದಾಗಿದ್ದಾರೆ. ಈ ರೋಬೊ ಗ್ರಾಹಕರಿಕೆ ಸ್ಥಳಕ್ಕೆ ಬಂದು ಸೇವೆ ನೀಡಲಿದೆ. ರೋಬೊದಲ್ಲಿರುವ ಬ್ಯಾಟರಿಯನ್ನು 2 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಸಾಕು, ಸುಮಾರು 30 ಗಂಟೆಗಳ ಕಾಲ ಸೇವೆ ಸಾಧ್ಯವಾಗುತ್ತದೆ.

   ಇನ್ನು ಮುಂದೆ ಕಡಲಿನ ಅಬ್ಬರಕ್ಕೆ ಸಿಲುಕಿದವರ ರಕ್ಷಣೆಗೆ ಬರಲಿದೆ ರೋಬೋ

   ಈಗ ರೋಬೋ ಕೊಂಡರೆ 9 ಲಕ್ಷ ರೂಪಾಯಿ

   ಈಗ ರೋಬೋ ಕೊಂಡರೆ 9 ಲಕ್ಷ ರೂಪಾಯಿ

   ಹೊಸದಾಗಿ ಈ ರೋಬೋವನ್ನು ಕೊಳ್ಳಲು ಹೋದರೆ ಅದರ ಬೆಲೆ 9 ಲಕ್ಷ ರೂಪಾಯಿ ಆಗುತ್ತದೆ ಎನ್ನುತ್ತಾರೆ ಮಾಲೀಕರು. ಆದರೆ ಇದನ್ನು ಅವರ ಸ್ನೇಹಿತನೋರ್ವ ವಿಜಯವಾಡದಿಂದ ಮಾಡಿಸಿ ಕಡಿಮೆ ಬೆಲೆ 5.50 ಲಕ್ಷಕ್ಕೆ ನೀಡಿದ್ದಾರೆ.

   ಏರ್‌ಪೋರ್ಟ್‌ನಲ್ಲಿ ಮಾಹಿತಿ ಬೇಕಿದ್ದರೆ ರೋಬೋಟ್ ಕೆಂಪನನ್ನು ಸಂಪರ್ಕಿಸಿ

   ಇದರ ನಿಯಂತ್ರಣ ನಿಯಂತ್ರಕರ ಕೈಯ್ಯಲ್ಲಿ

   ಇದರ ನಿಯಂತ್ರಣ ನಿಯಂತ್ರಕರ ಕೈಯ್ಯಲ್ಲಿ

   ಕುಡಿಯುವ ನೀರು ಸೇರಿದಂತೆ ಯಾವುದೇ ವಸ್ತುವನ್ನು ಆರ್ಡರ್ ಮಾಡಿದ್ದಲ್ಲಿ ಕುಳಿತ ಟೇಬಲ್ ಗೆ ತಂದುಕೊಡುತ್ತದೆ. ಇದನ್ನು ರಿಮೋಟ್ ಕಂಟ್ರೋಲ್ ನಿಂದ ನಿಯಂತ್ರಿಸಲಾಗುತ್ತದೆ. ಮೊದಲು ತಿಂಡಿಯನ್ನು ಆರ್ಡರ್ ಮಾಡಿದ ಬಳಿಕ ಅದನ್ನು ಸಿದ್ಧಗೊಳಿಸಿ ರೋಬೊ ಕೈಯ್ಯಲ್ಲಿ ಇರುವ ತಟ್ಟೆಯ ಮೇಲೆ ಇಡಲಾಗುತ್ತದೆ . ಅದರಲ್ಲಿ ಟೇಬಲ್ ಸಂಖ್ಯೆಯನ್ನು ಗುಂಡಿಯ ಮೂಲಕ ನಮೂದಿಸಲಾಗುತ್ತದೆ. ನಂತರ ನಿಗದಿತ ಟೇಬಲ್ ಬಳಿ ಹೋಗಿ ರೋಬೊ ಗ್ರಾಹಕರಿಗೆ ಶುಭ ಕೋರುತ್ತದೆ. ಆಹಾರ ತೆಗೆದುಕೊಳ್ಳುವಂತೆ ವಿನಂತಿಸುತ್ತದೆ. ಇದರ ನಿಯಂತ್ರಣ ನಿಯಂತ್ರಕರ ಕೈಯಲ್ಲಿ ಇರುತ್ತದೆ.

   ಯಾವಾಗ ರೋಬೊ ಸೇವೆ ಲಭ್ಯ?

   ಯಾವಾಗ ರೋಬೊ ಸೇವೆ ಲಭ್ಯ?

   ಈಗಾಗಲೇ ಗ್ರಾಹಕರು ಈ ರೋಬೊ ಸೇವೆ ಪಡೆಯಲು ತಂಡೋಪತಂಡವಾಗಿ ಮುಂದೆ ಬಂದಿದ್ದು, ಪೂರ್ಣ ಪ್ರಮಾಣದ ಸೇವೆ ಇನ್ನೂ ಲಭ್ಯವಾಗಿಲ್ಲ. ಇದು ಮೊದಲ ಬಾರಿಗೆ ಸೇವೆ ನೀಡುತ್ತಿರುವ ಉಪಹಾರ ಕೇಂದ್ರವಾಗಿರುವುದರಿಂದ ಪುಟ್ಟ ಮಕ್ಕಳು ಸೇರಿದಂತೆ ಗ್ರಾಹಕರ ಆಕರ್ಷಣೀಯ ಕೇಂದ್ರವಾಗಿದೆ. ಉಪಹಾರ ದರ್ಶಿನಿಯ ಮಹಡಿಯಲ್ಲಿ ಉತ್ತರ ಭಾರತೀಯ ತಿಂಡಿ ತಿನಿಸುಗಳ ವಿಭಾಗದಲ್ಲಿ ಈ ಸೇವೆ ಪ್ರಾರಂಭಿಸಲು ಯೋಚಿಸಿದ್ದು, ಮಧ್ಯಾಹ್ನ 12.30 ರಿಂದ ಸಂಜೆ 4ರವರೆಗೆ ಹಾಗೂ ರಾತ್ರಿ 7ರಿಂದ 10ರವರೆಗೆ ಈ ರೋಬೊ ಸೇವೆ ಲಭ್ಯವಾಗಲಿದೆ ಎನ್ನುತ್ತಾರೆ ಉಪಹಾರ ದರ್ಶನಿ ಮಾಲೀಕ ರಾಘವೇಂದ್ರ.

   English summary
   Robotic hotel started in Karnataka, Shivamogga district. This robo cost is 5.50 lakh rs. The hotel name is Upahara darshini, situated at Vinobha nagar.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more