ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಆಸ್ಪತ್ರೆಯಲ್ಲಿ ಮಗುಗೆ ಜನ್ಮನೀಡಿ ಮಾದರಿಯಾದ ಐಎಎಸ್ ಅಧಿಕಾರಿ

|
Google Oneindia Kannada News

ರಾಂಚಿ, ಮಾರ್ಚ್ 03: ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು, ಕೈತುಂಬ ಸಂಬಳ ತೆಗೆದುಕೊಳ್ಳುವವರು, ಶ್ರೀಮಂತರು ಸರ್ಕಾರಿ ಆಸ್ಪತ್ರೆ ಕಡೆಗೆ ಮುಖ ಮಾಡುತ್ತಾರಾ.? ಖಂಡಿತ ಇಲ್ಲ. ಅನಾರೋಗ್ಯ ಉಂಟಾದಾಗ ಜೇಬು ತುಂಬಿರುವವರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡುತ್ತಾರೆ. ಅಂಥದ್ರಲ್ಲಿ ಓರ್ವ ಮಹಿಳಾ ಐಎಎಸ್ ಅಧಿಕಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿದ್ದಾರೆ.!

ಹೌದು, ಜಾರ್ಖಂಡ್ ನ ಐಎಎಸ್ ಅಧಿಕಾರಿಯೊಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿ ಮಾದರಿ ಆಗಿದ್ದಾರೆ.

886 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ 886 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ

ಜಾರ್ಖಂಡ್ ನ ಗೊಡ್ಡ ಪ್ರದೇಶದ ಮಹಿಳಾ ಐಎಎಸ್ ಅಧಿಕಾರಿ ಕಿರಣ್ ಕುಮಾರ್ ಪಾಸಿ ಅವರು ಇಂದು ಸಾದರ್ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

Woman IAS Officer Praised For Giving Birth In Govt Hospital

ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡಿರುವ ಕಿರಣ್ ಕುಮಾರ್ ಪಾಸಿ ಅವರ ಫೋಟೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಕಿರಣ್ ಕುಮಾರ್ ಪಾಸಿ ಅವರ ಈ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನೆಟ್ಟಿಗರು ಕಿರಣ್ ಕುಮಾರ್ ಪಾಸಿ ರನ್ನ ಪ್ರಶಂಸಿಸುತ್ತಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ವರ್ಗಾವಣೆ

''ಕಿರಣ್ ಕುಮಾರ್ ಪಾಸಿ ನಮ್ಮ ಆಸ್ಪತ್ರೆಗೆ ಭೇಟಿ ನೀಡಿದ್ದು ನಮಗೆ ಹೆಮ್ಮೆ ತಂದಿದೆ. ಇದರಿಂದ ಸರ್ಕಾರದ ವ್ಯವಸ್ಥೆ ಬಗ್ಗೆ ಜನರಲ್ಲಿ ಹೆಚ್ಚು ವಿಶ್ವಾಸ ಮೂಡಲಿದೆ'' ಎಂದು ವೈದ್ಯ ಎಸ್.ಪಿ.ಮಿಶ್ರ ಹೇಳಿದ್ದಾರೆ.

English summary
Woman IAS Officer Praised For Giving Birth In Govt Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X