ರಾಂಚಿ, ಡಿಸೆಂಬರ್ 20: ಜಾರ್ಖಂಡ್ ವಿಧಾನಸಭೆ ಚುನಾವಣೆಯ ಐದನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಶುಕ್ರವಾರ(ಡಿ. 20) ರಂದು ಮುಕ್ತಾಯವಾಗಿದೆ. ಚುನಾವಣೆ ಆಯೋಗವು ಡಿಸೆಂಬರ್ 30ರಂದು ಸಂಜೆ 6:30 ರ ನಂತರವಷ್ಟೇ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟಿಸುವಂತೆ ಸೂಚಿಸಿತ್ತು. ಅದರಂತೆ ಸಂಜೆ ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದೆ
ಜಾರ್ಖಂಡ್ ನಲ್ಲಿ ಒಟ್ಟು ಐದು ಹಂತದಲ್ಲಿ ಚುನಾವಣೆ ನಡೆದು, ನವೆಂಬರ್ 30ರಿಂದ ಡಿಸೆಂಬರ್ 20 ರ ತನಕ ಮತದಾನವಾಗಿದೆ. ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಫಲಿತಾಂಶ ಹೊರಬರಲಿದೆ.
ಬಿಜೆಪಿಗೆ ಸೆಡ್ಡು ಹೊಡೆಯಲು ಜಾರ್ಖಂಡ್ ಮುಕ್ತಿ ಮೋರ್ಚಾ( ಜೆಎಂಎಂ), ಕಾಂಗ್ರೆಸ್, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ ರಚಿಸಿವೆ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.
ಜಾರ್ಖಂಡ್‌ನಲ್ಲಿ ನವೆಂಬರ್ 1ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ. ಚುನಾವಣಾ ಖರ್ಚಿನ ಮೇಲೆ ಹಿಡಿತ ಸಾಧಿಸಲು ಪ್ರತಿ ಜಿಲ್ಲೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗಿತ್ತು.
Dec 21, 2019, 6:10 pm IST
ಜಾರ್ಖಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಆಡಳಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದು, ಕಾಂಗ್ರೆಸ್ ಜೆಎಂಎಂ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಇದೆ.
Dec 21, 2019, 6:07 pm IST
ರಿಪಬ್ಲಿಕ್ ಟಿವಿ-ಜನತಾ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 22-30 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಜೆಎಂಎಂ ಪಕ್ಷವು 28-33 ಸ್ಥಾನಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ 10-15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಜೆಎಸ್‌ಯು 3-5, ಆರ್‌ಜೆಡಿ 3-4, ಸಿಪಿಎಂ 1-0, ಜೆವಿಎಂ 3-4, ಇತರೆ 5-7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
Dec 21, 2019, 6:04 pm IST
ರಿಪಬ್ಲಿಕ್ ಟಿವಿ-ಜನತಾ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣಲಿದೆ.
Dec 20, 2019, 9:12 pm IST
ಟೈಮ್ಸ್ ನೌ ನಡೆಸಿರುವ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 30, ಕಾಂಗ್ರೆಸ್ ಮತ್ತು ಜೆಎಂಎಂ 44, ಜೆವಿಎಂಪಿ 3, ಎಜೆಎಸ್‌ಯು 0 ಮತ್ತು ಇತರೆ 6 ಸ್ಥಾನಗಳಲ್ಲಿ ಗೆಲ್ಲಬಹುದು.
Dec 20, 2019, 8:34 pm IST
ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ
Dec 20, 2019, 8:15 pm IST
ಚುನಾವಣೋತ್ತರ ಸಮೀಕ್ಷೆ ಸರಾಸರಿ
ಡಿಸೆಂಬರ್ 20ರಂದು ಪ್ರಕಟವಾದ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳ ಸರಾಸರಿಯಂತೆ ಜೆಎಂಎಂ -ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ
Dec 20, 2019, 7:50 pm IST
ಕಶೀಶ್ ನ್ಯೂಸ್ ಸಮೀಕ್ಷೆ
ಕಶೀಶ್ ನ್ಯೂಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಬಿಜೆಪಿ ಬದಲಿಗೆ ಜೆಎಂಎಂ-ಕಾಂಗ್ರೆಸ್- ಆರ್ ಜೆ ಡಿ ಮಹಾಘಟಬಂಧನ್ ಅಧಿಕಾರಕ್ಕೇರುವ ಅವಕಾಶ ಹೆಚ್ಚಿದೆ.
ಬಿಜೆಪಿ: 25-30
ಕಾಂಗ್ರೆಸ್ ಪ್ಲಸ್: 37-49
ಎಜೆಎಸ್ ಯು: 2-4
ಇತರೆ: 2-4
Dec 20, 2019, 7:39 pm IST
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಜಾರ್ಖಂಡ್ ರಾಜ್ಯವನ್ನು ಬಿಜೆಪಿ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ಜೆಎಂಎಂ ಪಕ್ಷ ಅಧಿಕಾರಕ್ಕೆ ಬರಲಿದೆ
ಬಿಜೆಪಿ: 22-32 (38% ಶೇಕಡವಾರು ಮತ ಗಳಿಕೆ)
ಜೆಎಂಎಂ+ಕಾಂಗ್ರೆಸ್ : 38-50 (37%)
ಜೆವಿಎಂ: 2-4 (6%)
ಎಜೆಎಸ್ ಯು: 3-5 (9%)
ಇತರೆ: 4-7 (14%)
Dec 20, 2019, 7:30 pm IST
ಐಎಎನ್ ಎಸ್ -ಸಿವೋಟರ್ ಪ್ರಕಾರ
ಐಎಎನ್ಎಸ್ -ಸಿವೋಟರ್-ಎಬಿಪಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಜಾರ್ಖಂಡ್ ನಲ್ಲಿ ಅತಂತ್ರ ವಿಧಾನಸಭೆ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದರೆ, ಕಾಂಗ್ರೆಸ್- ಜೆಎಂಎಂ- ಆರ್ ಜೆ ಡಿ ಬಹುಮತ ಸಾಧಿಸುವ ದಾರಿ ಸಿಗಲಿದೆ.
ಕಾಂಗ್ರೆಸ್ + ಜೆಎಂಎಂ + ಆರ್ ಜೆಡಿ= 31-39 ಸ್ಥಾನ
ಬಿಜೆಪಿ + ಎಜೆಎಸ್ ಯು + ಜೆವಿಎಂ= 28-36 ಸ್ಥಾನ
ಇತರೆ: 11 ಸ್ಥಾನ
Dec 20, 2019, 7:14 pm IST
ಐಎಎನ್‌ಎಸ್-ಸಿ ವೋಟರ್ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಬಿಜೆಪಿಯು 25-36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಪಕ್ಷದ ಮೈತ್ರಿಯು 39 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜಾರ್ಖಂಡ್‌ನಲ್ಲಿ ಸರ್ಕಾರ ರಚಿಸಲು 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.
Dec 20, 2019, 7:08 pm IST
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 2019 ಸಮೀಕ್ಷೆಯನ್ನು 12, 489 ಸ್ಯಾಂಪಲ್ ಮೂಲಕ ನಿರ್ಧರಿಸಲಾಗುತ್ತದೆ. ಶೇ76 ರಷ್ಟು ಪುರುಷರು ಹಾಗೂ ಶೇ 24 ರಷ್ಟು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು.
Dec 20, 2019, 7:05 pm IST
ಸಿಫಿ ಇಂಡಿಯಾ ಸಮೀಕ್ಷೆ ಪ್ರಕಾರ ಬಿಜೆಪಿಯು ಮತ್ತೊಂದು ರಾಜ್ಯವನ್ನು ಕಳೆದುಕೊಳ್ಳಲಿದೆ. ಆಡಳಿತಾರೂಢ ಬಿಜೆಪಿ ಕೇವಲ 25 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಂಡು 12 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜೆಎಂಎಂ ಪಕ್ಷವು 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆರ್‌ಜೆಡಿ 3, ಎಜೆಎಸ್‌ಯು 04, ಜೆವಿಎಂ 02, ಇತರೆ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.
#EXITPOLL Jharkhand Legislative Assembly Election 2019 BJP: 27, JMM: 25, INC: 12, RJD: 03, AJSU: 04, JVM: 02 and Others: 08 Legislative Assembly wise details will be shared soon... #JharkhandElection2019#exitpoll
2014ರ ಫಲಿತಾಂಶ: 37 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ಕಾಂಗ್ರೆಸ್ 6 ಸ್ಥಾನ ಹಾಗೂ ಮಿಕ್ಕ 38 ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಗೆಲ್ಲುವಲ್ಲಿ ಸಫಲವಾಗಿದ್ದವು. ವಿಧಾನಸಭೆ 81 ಸ್ಥಾನಗಳನ್ನು ಹೊಂದಿದ್ದು, ಮ್ಯಾಜಿಕ್ ನಂಬರ್ 41.
Dec 20, 2019, 6:46 pm IST
ಜನಕೀ ಬಾತ್-ರಿಪಬ್ಲಿಕ್ ಟಿವಿ ಎಕ್ಸಿಟ್ ಪೋಲ್ ವರದಿ ನಾಳೆ (ಡಿಸೆಂಬರ್ 21) ಕ್ಕೆ ಹೊರಬೀಳಲಿದೆ.
ಜಾರ್ಖಂಡ್ ಕೃಷಿ ಸಚಿವ ರಣಧೀರ್ ಸಿಂಗ್ ಅವರು ಸರತ್ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿದ್ದಾರೆ. ಮಹಿಳಾ ಮತ್ತು ಕಲ್ಯಾಣ ಸಚಿವ ಲೂಯಿಸ್ ಮರಾಂಡಿ ಅವರು ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ವಿರುದ್ಧ ಡುಮ್ಕಾದಲ್ಲಿ ಸ್ಪರ್ಧಿಸಿದ್ದಾರೆ.
Dec 20, 2019, 6:25 pm IST
2014 ರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 6, ಎಜೆಎಸ್‌ಯು ಪಕ್ಷ 5, ಜೆಎಂಎಂ 19, ಜೆವಿಎಂ (ಪಿ) 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಬಿಎಸ್‌ಪಿ 1, ಸಿಪಿಐ(ಎಂ) 1 ಕ್ಷೇತ್ರದಲ್ಲಿ ಗೆದ್ದಿತ್ತು. ಜೆವಿಎಂ (ಪಿ) ನ ಆರು ಶಾಸಕರು ಬಿಜೆಪಿ ಪಕ್ಷ ಸೇರಿದ ಕಾರಣ ಬಿಜೆಪಿಯು ಸರ್ಕಾರ ರಚನೆ ಮಾಡಿತ್ತು.
Dec 20, 2019, 6:16 pm IST
ಜಾರ್ಖಂಡ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಅಗ್ನಿಪರೀಕ್ಷೆ ಎದುರಾಗಿದ್ದು, ಸಿಎಎ, ಅಯೋಧ್ಯೆ, ಎನ್‌ಆರ್‌ಸಿ ಇನ್ನೂ ಹಲವು ಕಾರಣಗಳಿಂದಾಗಿ ಬಿಜೆಪಿಗೆ ಜಾರ್ಖಂಡ್ ಚುನಾವಣೆ ಮುಖ್ಯವಾಗಿದೆ.
Dec 20, 2019, 6:06 pm IST
ಜಾರ್ಖಂಡ್ ವಿಧಾನಸಭೆ ಚುನಾವಣೆ ಐದನೇ ಹಂತದ ಮತದಾನ 5 ಗಂಟೆ ವೇಳೆಗೆ 68.99% ಮತದಾನ ದಾಖಲಾಗಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳಲಿದೆ.
Dec 20, 2019, 5:57 pm IST
ಐದನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಸುಮಾರು 62.65% ಮತದಾನ ದಾಖಲಾಗಿದೆ.
Dec 20, 2019, 5:49 pm IST
ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಆಡಳಿತಾರೂಢ ಬಿಜೆಪಿಗೆ ಜಾರ್ಖಂಡ್ ನಲ್ಲಿ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುವುದೇ? ಬಿಜೆಪಿಯೇತರ ಸರ್ಕಾರದತ್ತ ಮತದಾರರ ಒಲವು ಮೂಡಿದೆಯೇ? ಫಲಿತಾಂಶ ಶೀಘ್ರದಲ್ಲೇ
Dec 20, 2019, 5:38 pm IST
ಕೆಲವೇ ಕ್ಷಣಗಳಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಹೊರಬೀಳಲಿದೆ. ಒನ್‌ಇಂಡಿಯಾ ಕನ್ನಡದಲ್ಲಿ ಚುನಾವಣೋತ್ತರ ಸಮೀಕ್ಷೆಯ ಕ್ಷಣ-ಕ್ಷಣದ ವರದಿ ಸಿಗಲಿದೆ.
Dec 20, 2019, 1:43 pm IST
ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 41 ಸ್ಥಾನ ಸಿಗಲಿದೆ. ಪ್ರಮುಖ ವಿಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 18 ರಿಂದ 28 ಸ್ಥಾನಗಳನ್ನು ಗಳಿಸಬಹುದು, ಕಾಂಗ್ರೆಸ್ ಪಕ್ಷ 4 ರಿಂದ 10 ಸೀಟು ಗೆಲ್ಲಬಹುದು ಎಂದು ಹೇಳಲಾಗಿದೆ. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ(ಎಜೆಎಸ್ ಯು) 3 ರಿಂದ 9 ಸ್ಥಾನ ಗಳಿಸಬಹುದು. ಜಾರ್ಖಂಡ್ ವಿಕಾಸ್ ಮೋರ್ಚಾ ಹಾಗೂ ಇನ್ನಿತರ ಪಕ್ಷಗಳು 3-9 ಸ್ಥಾನ ಪಡೆಯಬಹುದು ಎಂದು ಹೇಳಿದೆ.
Dec 20, 2019, 1:43 pm IST
81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜಾರ್ಖಂಡ್ ನಲ್ಲಿ ಕಳೆದ ವಿಧಾನಸಭೆ ಚುನಾವಣೆ 2014 ರಲ್ಲಿ ನಡೆದಿತ್ತು. ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 37 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ರಘುವರ್ ದಾಸ್ ಮುಖ್ಯಮಂತ್ರಿಯಾಗಿದ್ದಾರೆ.
1:43 PM, 20 Dec

5:38 PM, 20 Dec
ಕೆಲವೇ ಕ್ಷಣಗಳಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಹೊರಬೀಳಲಿದೆ. ಒನ್‌ಇಂಡಿಯಾ ಕನ್ನಡದಲ್ಲಿ ಚುನಾವಣೋತ್ತರ ಸಮೀಕ್ಷೆಯ ಕ್ಷಣ-ಕ್ಷಣದ ವರದಿ ಸಿಗಲಿದೆ.
5:49 PM, 20 Dec
ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಂತರ ಆಡಳಿತಾರೂಢ ಬಿಜೆಪಿಗೆ ಜಾರ್ಖಂಡ್ ನಲ್ಲಿ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುವುದೇ? ಬಿಜೆಪಿಯೇತರ ಸರ್ಕಾರದತ್ತ ಮತದಾರರ ಒಲವು ಮೂಡಿದೆಯೇ? ಫಲಿತಾಂಶ ಶೀಘ್ರದಲ್ಲೇ
5:57 PM, 20 Dec
ಐದನೇ ಹಾಗೂ ಕೊನೆ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಸುಮಾರು 62.65% ಮತದಾನ ದಾಖಲಾಗಿದೆ.
6:06 PM, 20 Dec
ಜಾರ್ಖಂಡ್ ವಿಧಾನಸಭೆ ಚುನಾವಣೆ ಐದನೇ ಹಂತದ ಮತದಾನ 5 ಗಂಟೆ ವೇಳೆಗೆ 68.99% ಮತದಾನ ದಾಖಲಾಗಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಎಕ್ಸಿಟ್ ಪೋಲ್ ಫಲಿತಾಂಶ ಹೊರಬೀಳಲಿದೆ.
6:16 PM, 20 Dec
ಜಾರ್ಖಂಡ್ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಗೆ ಅಗ್ನಿಪರೀಕ್ಷೆ ಎದುರಾಗಿದ್ದು, ಸಿಎಎ, ಅಯೋಧ್ಯೆ, ಎನ್‌ಆರ್‌ಸಿ ಇನ್ನೂ ಹಲವು ಕಾರಣಗಳಿಂದಾಗಿ ಬಿಜೆಪಿಗೆ ಜಾರ್ಖಂಡ್ ಚುನಾವಣೆ ಮುಖ್ಯವಾಗಿದೆ.
6:25 PM, 20 Dec
2014 ರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ 6, ಎಜೆಎಸ್‌ಯು ಪಕ್ಷ 5, ಜೆಎಂಎಂ 19, ಜೆವಿಎಂ (ಪಿ) 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಬಿಎಸ್‌ಪಿ 1, ಸಿಪಿಐ(ಎಂ) 1 ಕ್ಷೇತ್ರದಲ್ಲಿ ಗೆದ್ದಿತ್ತು. ಜೆವಿಎಂ (ಪಿ) ನ ಆರು ಶಾಸಕರು ಬಿಜೆಪಿ ಪಕ್ಷ ಸೇರಿದ ಕಾರಣ ಬಿಜೆಪಿಯು ಸರ್ಕಾರ ರಚನೆ ಮಾಡಿತ್ತು.
6:40 PM, 20 Dec
ಜಾರ್ಖಂಡ್ ಕೃಷಿ ಸಚಿವ ರಣಧೀರ್ ಸಿಂಗ್ ಅವರು ಸರತ್ ಕ್ಷೇತ್ರದಲ್ಲಿ ಮರು ಆಯ್ಕೆ ಬಯಸಿದ್ದಾರೆ. ಮಹಿಳಾ ಮತ್ತು ಕಲ್ಯಾಣ ಸಚಿವ ಲೂಯಿಸ್ ಮರಾಂಡಿ ಅವರು ಜೆಎಂಎಂ ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ವಿರುದ್ಧ ಡುಮ್ಕಾದಲ್ಲಿ ಸ್ಪರ್ಧಿಸಿದ್ದಾರೆ.
6:46 PM, 20 Dec
ಜನಕೀ ಬಾತ್-ರಿಪಬ್ಲಿಕ್ ಟಿವಿ ಎಕ್ಸಿಟ್ ಪೋಲ್ ವರದಿ ನಾಳೆ (ಡಿಸೆಂಬರ್ 21) ಕ್ಕೆ ಹೊರಬೀಳಲಿದೆ.
2014ರ ಫಲಿತಾಂಶ: 37 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ಕಾಂಗ್ರೆಸ್ 6 ಸ್ಥಾನ ಹಾಗೂ ಮಿಕ್ಕ 38 ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳು ಗೆಲ್ಲುವಲ್ಲಿ ಸಫಲವಾಗಿದ್ದವು. ವಿಧಾನಸಭೆ 81 ಸ್ಥಾನಗಳನ್ನು ಹೊಂದಿದ್ದು, ಮ್ಯಾಜಿಕ್ ನಂಬರ್ 41.
7:05 PM, 20 Dec
ಸಿಫಿ ಇಂಡಿಯಾ ಸಮೀಕ್ಷೆ ಪ್ರಕಾರ ಬಿಜೆಪಿಯು ಮತ್ತೊಂದು ರಾಜ್ಯವನ್ನು ಕಳೆದುಕೊಳ್ಳಲಿದೆ. ಆಡಳಿತಾರೂಢ ಬಿಜೆಪಿ ಕೇವಲ 25 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ ಪ್ರದರ್ಶನದಲ್ಲಿ ಸುಧಾರಣೆ ಕಂಡುಕೊಂಡು 12 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜೆಎಂಎಂ ಪಕ್ಷವು 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಆರ್‌ಜೆಡಿ 3, ಎಜೆಎಸ್‌ಯು 04, ಜೆವಿಎಂ 02, ಇತರೆ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.
#EXITPOLL Jharkhand Legislative Assembly Election 2019 BJP: 27, JMM: 25, INC: 12, RJD: 03, AJSU: 04, JVM: 02 and Others: 08 Legislative Assembly wise details will be shared soon... #JharkhandElection2019#exitpoll
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ 2019 ಸಮೀಕ್ಷೆಯನ್ನು 12, 489 ಸ್ಯಾಂಪಲ್ ಮೂಲಕ ನಿರ್ಧರಿಸಲಾಗುತ್ತದೆ. ಶೇ76 ರಷ್ಟು ಪುರುಷರು ಹಾಗೂ ಶೇ 24 ರಷ್ಟು ಮಹಿಳೆಯರು ಇದರಲ್ಲಿ ಭಾಗವಹಿಸಿದ್ದರು.
7:14 PM, 20 Dec
ಐಎಎನ್ಎಸ್-ಸಿ ವೋಟರ್ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಬಿಜೆಪಿಯು 25-36 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಪಕ್ಷದ ಮೈತ್ರಿಯು 39 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜಾರ್ಖಂಡ್‌ನಲ್ಲಿ ಸರ್ಕಾರ ರಚಿಸಲು 41 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕಿದೆ.
7:30 PM, 20 Dec
ಐಎಎನ್ ಎಸ್ -ಸಿವೋಟರ್ ಪ್ರಕಾರ
ಐಎಎನ್ಎಸ್ -ಸಿವೋಟರ್-ಎಬಿಪಿ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಜಾರ್ಖಂಡ್ ನಲ್ಲಿ ಅತಂತ್ರ ವಿಧಾನಸಭೆ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದರೆ, ಕಾಂಗ್ರೆಸ್- ಜೆಎಂಎಂ- ಆರ್ ಜೆ ಡಿ ಬಹುಮತ ಸಾಧಿಸುವ ದಾರಿ ಸಿಗಲಿದೆ.
ಕಾಂಗ್ರೆಸ್ + ಜೆಎಂಎಂ + ಆರ್ ಜೆಡಿ= 31-39 ಸ್ಥಾನ
ಬಿಜೆಪಿ + ಎಜೆಎಸ್ ಯು + ಜೆವಿಎಂ= 28-36 ಸ್ಥಾನ
ಇತರೆ: 11 ಸ್ಥಾನ
7:39 PM, 20 Dec
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್
ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಜಾರ್ಖಂಡ್ ರಾಜ್ಯವನ್ನು ಬಿಜೆಪಿ ಕಳೆದುಕೊಳ್ಳಲಿದ್ದು, ಕಾಂಗ್ರೆಸ್ ಜೆಎಂಎಂ ಪಕ್ಷ ಅಧಿಕಾರಕ್ಕೆ ಬರಲಿದೆ
ಬಿಜೆಪಿ: 22-32 (38% ಶೇಕಡವಾರು ಮತ ಗಳಿಕೆ)
ಜೆಎಂಎಂ+ಕಾಂಗ್ರೆಸ್ : 38-50 (37%)
ಜೆವಿಎಂ: 2-4 (6%)
ಎಜೆಎಸ್ ಯು: 3-5 (9%)
ಇತರೆ: 4-7 (14%)
7:50 PM, 20 Dec
ಕಶೀಶ್ ನ್ಯೂಸ್ ಸಮೀಕ್ಷೆ
ಕಶೀಶ್ ನ್ಯೂಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಬಿಜೆಪಿ ಬದಲಿಗೆ ಜೆಎಂಎಂ-ಕಾಂಗ್ರೆಸ್- ಆರ್ ಜೆ ಡಿ ಮಹಾಘಟಬಂಧನ್ ಅಧಿಕಾರಕ್ಕೇರುವ ಅವಕಾಶ ಹೆಚ್ಚಿದೆ.
ಬಿಜೆಪಿ: 25-30
ಕಾಂಗ್ರೆಸ್ ಪ್ಲಸ್: 37-49
ಎಜೆಎಸ್ ಯು: 2-4
ಇತರೆ: 2-4
8:15 PM, 20 Dec
ಚುನಾವಣೋತ್ತರ ಸಮೀಕ್ಷೆ ಸರಾಸರಿ
ಡಿಸೆಂಬರ್ 20ರಂದು ಪ್ರಕಟವಾದ ಪ್ರಮುಖ ಚುನಾವಣೋತ್ತರ ಸಮೀಕ್ಷೆಗಳ ಸರಾಸರಿಯಂತೆ ಜೆಎಂಎಂ -ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ
8:34 PM, 20 Dec
ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ
9:12 PM, 20 Dec
ಟೈಮ್ಸ್ ನೌ ನಡೆಸಿರುವ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 30, ಕಾಂಗ್ರೆಸ್ ಮತ್ತು ಜೆಎಂಎಂ 44, ಜೆವಿಎಂಪಿ 3, ಎಜೆಎಸ್‌ಯು 0 ಮತ್ತು ಇತರೆ 6 ಸ್ಥಾನಗಳಲ್ಲಿ ಗೆಲ್ಲಬಹುದು.
6:04 PM, 21 Dec
ರಿಪಬ್ಲಿಕ್ ಟಿವಿ-ಜನತಾ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣಲಿದೆ.
6:07 PM, 21 Dec
ರಿಪಬ್ಲಿಕ್ ಟಿವಿ-ಜನತಾ ಕೀ ಬಾತ್ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 22-30 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಜೆಎಂಎಂ ಪಕ್ಷವು 28-33 ಸ್ಥಾನಗಳಲ್ಲಿ ಗೆಲ್ಲಲಿದೆ. ಕಾಂಗ್ರೆಸ್ 10-15 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಜೆಎಸ್‌ಯು 3-5, ಆರ್‌ಜೆಡಿ 3-4, ಸಿಪಿಎಂ 1-0, ಜೆವಿಎಂ 3-4, ಇತರೆ 5-7 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.
6:10 PM, 21 Dec
ಜಾರ್ಖಂಡ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಆಡಳಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದು, ಕಾಂಗ್ರೆಸ್ ಜೆಎಂಎಂ ಮೈತ್ರಿ ಸರ್ಕಾರ ರಚಿಸುವ ಸಾಧ್ಯತೆ ಇದೆ.
Jharkhand Exit Poll Results 2019: With the intensely-fought Jharkhand Assembly elections 2019 drawing to a close, the exit poll results will be released by news channels after polls closed for the last phase at 5.30 pm.