• search
  • Live TV
ರಾಂಚಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
LIVE

ಜಾರ್ಖಂಡ್ ಚುನಾವಣೆ: ಬಿಜೆಪಿಗೆ ಸೋಲು, ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹುಮತ

|

ರಾಂಚಿ, ಡಿಸೆಂಬರ್ 23: ಜಾರ್ಖಂಡ್‌ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಆಡಳಿತಾರೂಢ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಜೆಎಂಎಂ ಮೈತ್ರಿಕೂಟ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದ್ದು, ಕಾಂಗ್ರೆಸ್ ಸಹ ಬೆಂಬಲ ನೀಡಲಿದೆ.

ರಾಜ್ಯದ 81 ಕ್ಷೇತ್ರಗಳಿಗೆ ಒಟ್ಟು5 ಹಂತಗಳಲ್ಲಿ ಮತದಾನ ನಡೆದಿತ್ತು. ಸೋಮವಾರ ಮತ ಎಣಿಕೆ ನಡೆದಿದ್ದು, ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 41.

ಜಾರ್ಖಂಡ್ ಚುನಾವಣೋತ್ತರ ಸಮೀಕ್ಷೆ: BJPಗೆ ಸೋಲು, ಕಾಂಗ್ರೆಸ್ ಮೈತ್ರಿಗೆ ಜಯ

2014ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು 37 ಸ್ಥಾನಗಳಲ್ಲಿ ಗೆದ್ದಿತ್ತು. ನಂತರ ಜೆವಿಎಂಪಿ ಪಕ್ಷದ ಆರು ಶಾಸಕರನ್ನು ಸೆಳೆದುಕೊಂಡು ಸರ್ಕಾರ ರಚಸಿ ಐದು ವರ್ಷದ ಅವಧಿಯನ್ನು ಪೂರ್ಣಗೊಳಿಸಿತ್ತು. ಆದರೆ, ಈ ಚುನಾವಣೆಯಲ್ಲಿ ಬಿಜೆಪಿಗೆ 25 ಸ್ಥಾನಗಳಿಗೆ ಕುಸಿದಿದೆ.

Jharkhand Assembly Election Results 2019 Live Updates in Kannada

ರಾಮ ಮಂದಿರ, ಎನ್‌ಆರ್‌ಸಿ, ಸಿಎಎ ಇನ್ನೂ ಹಲವು ಬೆಳವಣಿಗೆ ಬಳಿಕ ನಡೆದ ಜಾರ್ಖಂಡ್ ಚುನಾವಣೆ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ನಿರುದ್ಯೋಗ, ಬಿಜೆಪಿಯ ಕೋಮುವಾದ ಸೇರಿದಂತೆ ಇನ್ನೂ ಹಲವು ವಿಷಯಗಳನ್ನು ಚುನಾವಣಾ ಪ್ರಚಾರದಲ್ಲಿ ಬಳಸಿತ್ತು.

ಮಾವೋವಾದಿ, ನಕ್ಸಲರ ಹಾವಳಿ ಇರುವ ರಾಜ್ಯವಾದ ಜಾರ್ಖಂಡ್‌ನಲ್ಲಿ ಒಟ್ಟು ಐದು ಹಂತದಲ್ಲಿ ಮತದಾನ ನಡೆದಿತ್ತು. ಮತ ಎಣಿಕೆಗೂ ಮಾವೋಗಳ ಬೆದರಿಕೆ ಇದ್ದ ಕಾರಣ ಭಾರಿ ಭದ್ರತೆಯನ್ನು ಎಣಿಕೆ ಕೇಂದ್ರಗಳಿಗೆ ನೀಡಲಾಗಿದೆ.

ಚುನಾವಣೋತ್ತರ ಸಮೀಕ್ಷೆಗಳು ಹೇಳಿದಂತೆ ಬಿಜೆಪಿಯು ಹಿನ್ನಡೆ ಅನುಭವಿಸುತ್ತಿದೆ. ಕಾಂಗ್ರೆಸ್ ಮತ್ತು ಜೆಎಂಎಂ ಮೈತ್ರಿಕೂಟಕ್ಕೆ ಸರಳ ಬಹುಮತ ಸಿಕ್ಕಿದೆ.

ಫಲಿತಾಂಶದ ಕ್ಷಣ-ಕ್ಷಣದ ಮಾಹಿತಿ, ಚಿತ್ರಗಳನ್ನು ಒನ್‌ಇಂಡಿಯಾದಲ್ಲಿ ಪಡೆಯಬಹುದಾಗಿದೆ.

Newest First Oldest First
7:21 PM, 17 Jan

ಜಾರ್ಖಂಡ್ ಚುನಾವಣಾ ಫಲಿತಾಂಶಗಳು 2019: ಜಾರ್ಖಂಡ್‌ನಲ್ಲಿ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿ

10:56 PM, 23 Dec
ಕಾಂಗ್ರೆಸ್ 16, ಜೆಎಂಎಂ 29, ಬಿಜೆಪಿ 24, ಎಜೆಎಸ್‌ಯು 2, ಸಿಪಿಐಎಂ 1, ಪಕ್ಷೇತರ 1, ಜೆವಿಎಂ 3, ಎನ್‌ಸಿಪಿ 1, ಆರ್‌ಜೆಡಿ 1
10:20 PM, 23 Dec
ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ : ಕಾಂಗ್ರೆಸ್ 15, ಜೆಎಂಎಂ 29, ಎಜೆಎಸ್‌ಯು 2, ಬಿಜೆಪಿ 22, ಸಿಪಿಓಐ 1, ಪಕ್ಷೇತರ 1, ಜೆವಿಎಂ 3, ಎನ್‌ಸಿಪಿ 1, ಆರ್‌ಜೆಡಿ 1.
9:04 PM, 23 Dec
"ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ನಮ್ಮ ನಿರೀಕ್ಷೆಯಂತೆ ಫಲಿತಾಂತ ಬಂದಿಲ್ಲ. ಹೇಮಂತ್ ಸೊರೇನ್ ಮತ್ತು ಮೈತ್ರಿಕೂಟಕ್ಕೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ರಾಜ್ಯಪಾಲರ ಭೇಟಿ ಬಳಿಕ ರಘುಬರ್ ದಾಸ್ ಹೇಳಿದರು.
8:47 PM, 23 Dec
ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ 37 ಜೆಎಂಎಂ, 13 ಬಿಜೆಪಿ, 13 ಕಾಂಗ್ರೆಸ್, 8 ಎಜೆಎಸ್‌ಯು, 2 ಸಿಪಿಐ
8:12 PM, 23 Dec
ಜಾರ್ಖಂಡ್ ಮುಕ್ತಿ ಮೋರ್ಚಾ ಹೇಮಂತ್ ಸೊರೇನ್ ಡುಮ್ಕಾ ಕ್ಷೇತ್ರದಲ್ಲಿ 13188 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
7:55 PM, 23 Dec
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ರಘುಬರ್ ದಾಸ್
7:45 PM, 23 Dec
ಜಾರ್ಖಂಡ್ ವಿಕಾಸ್ ಮೋರ್ಚಾ (ಜೆವಿಎಂ) ಮುಖ್ಯಸ್ಥ ಬಾಬುಲಾಲ್ ಮರಾಂಡಿ ಧನ್ವಾರ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಅವರು ಸೋಲು ಅನುಭವಿಸಿದ್ದರು.
7:29 PM, 23 Dec
ಜಾರ್ಖಂಡ್ ಫಲಿತಾಂಶದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್. ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ ಮೈತ್ರಿಕೂಟಕ್ಕೆ ಶುಭಾಶಯಗಳನ್ನು ಸಲ್ಲಿಸಿದ ಮೋದಿ.
7:21 PM, 23 Dec
ಜಾರ್ಖಂಡ್ ಫಲಿತಾಂಶ ಘೋಷಣೆ : 22 ಜೆಎಂಎಂ, 8 ಬಿಜೆಪಿ, 9 ಕಾಂಗ್ರೆಸ್, 4 ಎಜೆಎಸ್‌ಯು ಪಕ್ಷ. ಬಿಜೆಪಿ 16, ಜೆಎಂಎಂ 22, ಕಾಂಗ್ರೆಸ್ 11, ಆರ್‌ಜೆಡಿ 1, ಜೆವಿಎಂಪಿ 3, ಎಜೆಎಸ್‌ಯು 2 ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ.
7:11 PM, 23 Dec
2013ರಲ್ಲಿ ಹೇಮಂತ್ ಸೊರೇನ್ ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಆದರೆ, 2014ರಲ್ಲಿ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯಬೇಕಾಯಿತು. ಈಗ 2ನೇ ಬಾರಿಗೆ ಅವರು ಜಾರ್ಖಂಡ್ ಮುಖ್ಯಮಂತ್ರಿಯಾಗಲಿದ್ದಾರೆ.
7:05 PM, 23 Dec
2005ರಲ್ಲಿ ಮೊದಲ ಬಾರಿಗೆ ದುಮ್ಕಾ ಕೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದ ಹೇಮಂತ್ ಸೊರೇನ್ ಸೋಲು ಕಂಡಿದ್ದರು. 2009ರ ಜೂನ್ 24 ರಿಂದ 2010ರ ಜನವರಿ ತನಕ ರಾಜ್ಯಸಭಾ ಸದಸ್ಯರಾಗಿಯೂ ಕೆಲಸ ಮಾಡಿದರು. ಉಪ ಮುಖ್ಯಮಂತ್ರಿಯೂ ಆದರು. ರಾಜ್ಯ ರಾಜಕೀಯದಲ್ಲಿ ಹಲವು ಬೆಳವಣಿಗೆ ನಡೆದು ಬಿಜೆಪಿ-ಜೆಎಂಎಂ-ಜೆಡಿಯು-ಎಜೆಎಸ್‌ಯು ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿತು.
7:04 PM, 23 Dec
ಜಾರ್ಖಂಡ್‌ನ ನಿಯೋಜಿತ ಸಿಎಂ ಹೇಮಂತ್ ಸೊರೇನ್ ಕೇಂದ್ರದ ಮಾಜಿ ಸಚಿವ ಶಿಬು ಸೊರೇನ್ ಕಿರಿಯ ಪುತ್ರ. ಜಾರ್ಖಂಡ್ ಮುಕ್ತಿ ಮೋರ್ಚಾದ ಕಾರ್ಯಾಧ್ಯಕ್ಷರು. ವಿಧಾನಸಭೆ ಚುನಾವಣೆಗೂ ಮುನ್ನವೇ ಜೆಎಂಎಂ-ಕಾಂಗ್ರೆಸ್-ಆರ್‌ಜೆಡಿ ಮೈತ್ರಿಕೂಟ ಹೇಮಂತ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.
6:46 PM, 23 Dec
ಕಾಂಗ್ರೆಸ್‌ನ ರಾಜೇಂದ್ರ ಪ್ರಸಾದ್ ಸಿಂಗ್ ಹಾಲಿ ಬಿಜೆಪಿ ಶಾಸಕ ಯೋಗೇಶ್ವರ ಮಹತೋರನ್ನು 25,172 ಮತಗಳ ಅಂತರದಿಂದ ಸೋಲಿಸಿದ್ದಾರೆ.
6:37 PM, 23 Dec
ಜಾರ್ಖಂಡ್ ಜನತೆ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
6:27 PM, 23 Dec
ಜಾರ್ಖಂಡ್ ರಾಜ್ಯದ 81 ಸ್ಥಾನಗಳ ಪೈಕಿ ಬಿಜೆಪಿ 79 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿತ್ತು. ಎಜೆಎಸ್‌ಯು ಪಕ್ಷದ ಮುಖ್ಯಸ್ಥ ಸುದೇಶ್ ವಿರುದ್ಧ ಅಭ್ಯರ್ಥಿ ಕಣಕ್ಕಿಳಿಸಿರಲಿಲ್ಲ.
5:59 PM, 23 Dec
ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶ ಬಿಜೆಪಿ 25, ಕಾಂಗ್ರೆಸ್+ ಜೆಎಂಎಂ 46, ಜೆವಿಎಂಪಿ 3, ಎಜೆಎಸ್‌ಯು 3, ಇತರರು 4 ಸ್ಥಾನಗಳು.
5:55 PM, 23 Dec
"ಇದು ಬಿಜೆಪಿಯ ಸೋಲಲ್ಲ. ನನ್ನ ಸೋಲು" ಜಾರ್ಖಂಡ್ ಮುಖ್ಯಮಂತ್ರಿ ರಘುಬರ್‌ ದಾಸ್ ಹೇಳಿಕೆ
5:46 PM, 23 Dec
"ಜಾರ್ಖಂಡ್ ರಾಜ್ಯದ ಇತಿಹಾಸದಲ್ಲಿ ಹೊಸ ಯುಗ ಆರಂಭವಾಗಿದೆ. ಜನರಿಗೆ ಕೊಟ್ಟ ಭರವಸೆಗಳನ್ನು ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಈಡೇರಿಸುತ್ತನೇ" ಎಂದು ಜಾರ್ಖಂಡ್ ನೂತನ ನಿಯೋಜಿತ ಸಿಎಂ ಹೇಮಂತ್ ಸೊರೆನ್ ಹೇಳಿದ್ದಾರೆ.
5:37 PM, 23 Dec
ಜಾರ್ಖಂಡ್ ಚುನಾವಣೆ ಬಗ್ಗೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಟ್ವೀಟ್
5:18 PM, 23 Dec
ರಾಜಭವನದತ್ತ ಹೊರಟ ಬಿಜೆಪಿ ನಾಯಕ, ಜಾರ್ಖಂಡ್ ಮುಖ್ಯಮಂತ್ರಿ ರಘುಬರ್ ದಾಸ್. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ
5:11 PM, 23 Dec
ಜಾರ್ಖಂಡ್ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್‌ಸಿಪಿ ನಾಯಕ ಶರದ್ ಪವಾರ್, "ಚುನಾವಣೆ ಫಲಿತಾಂಶ ಜನರು ಬಿಜೆಪಿ ಜೊತೆ ಇಲ್ಲ ಎಂಬುದು ಸಾಬೀತಾಗಿದೆ. ರಾಜಸ್ಥಾನ, ಛತ್ತೀಸ್‌ಗಢ್, ಮಹಾರಾಷ್ಟ್ರದ ಜನರು ಬಿಜೆಪಿಯನ್ನು ದೂರವಿಡಲು ಬಯಸಿದ್ದರು. ಈಗ ಜಾರ್ಖಂಡ್ ರಾಜ್ಯದ ಜನರು ಇದನ್ನೇ ಮಾಡಿದ್ದಾರೆ" ಎಂದರು.
4:46 PM, 23 Dec
ಸೈಕಲ್ ಹೊಡೆದ ಜಾರ್ಖಂಡ್‌ನ ಮುಂದಿನ ಮುಖ್ಯಮಂತ್ರಿ ಹೇಮಂತ್ ಸೊರೆನ್
4:40 PM, 23 Dec
'ಇದು ಜನರ ಗೆಲುವು' ಎಂದು ಜೆಎಂಎಂ ಪಕ್ಷದ ನಾಯಕ ಹೇಮಂತ್ ಸೊರೆನ್ ಹೇಳಿದ್ದಾರೆ. ಹೇಮಂತ್ ಸೊರೆನ್ ಜಾರ್ಖಂಡ್‌ನ ಮುಂದಿನ ಸಿಎಂ ಆಗಲಿದ್ದಾರೆ.
4:38 PM, 23 Dec
ಜಾರ್ಖಂಡ್ ಚುನಾವಣೆಯಲ್ಲಿ ಸಂಘಟಿತ ಹೊರಾಟದಿಂದ ಜಯಗಳಿಸಿರುವ ಜೆಎಂಎಂ, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
4:35 PM, 23 Dec
ಜಾರ್ಖಂಡ್ ಚುನಾವಣೆಯಲ್ಲಿ ಸಂಘಟಿತ ಹೊರಾಟದಿಂದ ಜಯಗಳಿಸಿರುವ ಜೆಎಂಎಂ, ಆರ್‌ಜೆಡಿ ಮತ್ತು ಕಾಂಗ್ರೆಸ್‌ ಗೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
4:25 PM, 23 Dec
ಮಾಂಡೋ ಕ್ಷೇತ್ರದಲ್ಲಿ ಎಜೆಎಸ್‌ಯು ಪಕ್ಷದ ನಿರ್ಮಲ್ ಮಾಹ್ತೋ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಜಯಪ್ರಕಾಶ್ ಭಾಯ್ ಪಟೇಲ್ ಹಿನ್ನಡೆ ಅನುಭವಿಸಿದ್ದಾರೆ.
3:23 PM, 23 Dec
ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಜೆಎಂಎಂ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವತ್ತ ದಾಪುಗಾಲು ಹಾಕಿದೆ. ಚುನಾವಣಾ ಆಯೋಗದ ಮಾಹಿತಿಯಂತೆ ಜೆಎಂಎಂ 29 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 24 ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
3:14 PM, 23 Dec
ಬಿಜೆಪಿ ಏಕಪಕ್ಷವಾಗಿ 26 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಜೆಎಂಎಂ ಪಕ್ಷವೂ ಸಹ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಬಿಜೆಪಿ ಆಸೆಗೆ ತಣ್ಣೀರು ಸುರಿದಂತಾಗಿದೆ.
3:03 PM, 23 Dec
ಜೆವಿಎಂ ಮುಖ್ಯಸ್ಥ ಬಾಬುಲಾಲ್ ಮರಾಂಡಿ ಧನ್ವಾರ್ ಕ್ಷೇತ್ರದಲ್ಲಿ 18,645 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಆದರೆ ಅವರ ಜೆವಿಎಂ ಪಕ್ಷ ಚುನಾವಣೆಯಲ್ಲಿ ಕಳಪೆ ಪ್ರದರ್ಶನವನ್ನು ತೋರಿದೆ.
READ MORE

English summary
Jharkhand Assembly Elections Results 2019 : Get all the live updates on constituency wise and party wise results. Latest Breaking News, Pictures and Videos only on kannada oneindia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X