ಅಲ್ ಕೈದಾ ಉಗ್ರ ಸಂಘಟನೆ ಪ್ರಮುಖ ಸದಸ್ಯ ಜೆಮ್ಷೆಡ್ ಪುರ್ ನಲ್ಲಿ ವಶಕ್ಕೆ
ರಾಂಚಿ (ಜಾರ್ಖಂಡ್), ಸೆಪ್ಟೆಂಬರ್ 22: ನಿಷೇಧಿತ ಅಲ್ ಕೈದಾ ಉಗ್ರ ಸಂಘಟನೆಯ ವಾಂಟೆಡ್ ಸದಸ್ಯ ಮೊಹ್ಮದ್ ಕಲೀಮುದ್ದೀನ್ ಮುಜಾಹಿರಿ ಎಂಬುವನನ್ನು ಜಾರ್ಖಂಡ್ ನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಅಧಿಕಾರಿಗಳು ಜಮ್ಷೆಡ್ ಪುರ್ ನಲ್ಲಿ ಬಂಧಿಸಿದ್ದಾರೆ. ಎಟಿಎಸ್ ನ್ ಎಸ್ಪಿ ವಿಜಯಲಕ್ಷ್ಮಿ ಮಾಧ್ಯಮಗಳಿಗೆ ಮಾಹಿತಿ ನೀಡಿ, ಕಲೀಮುದ್ದೀನ್ ಭಾರತದ ಪೂರ್ವ ಭಾಗದಲ್ಲಿ ಅಲ್ ಕೈದಾದ ಜವಾಬ್ದಾರಿ ವಹಿಸಿದ್ದ ಎಂದಿದ್ದಾರೆ.
'ಜಿಹಾದ್'ಗಾಗಿ ಜನರನ್ನು ಪ್ರೋತ್ಸಾಹಿಸಿ, ಅದೇ ಮನಸ್ತತ್ವದ ಯುವಕರನ್ನು ಉಗ್ರ ಸಂಘಟನೆಗೆ ಸೇರ್ಪಡೆ ಮಾಡಿಕೊಳ್ಳುವುದು ಆತನ ಪ್ರಾಥಮಿಕ ಜವಾಬ್ದಾರಿ ಆಗಿತ್ತು ಎಂದಿದ್ದಾರೆ. ಯಾರು ತಮ್ಮ ಸಂಘಟನೆಯ ಕೃತ್ಯಗಳಿಗೆ ಸೂಕ್ತ ವ್ಯಕ್ತಿಗಳು ಎನಿಸುತ್ತದೋ ಅಂಥವನ್ನು ಪಾಕಿಸ್ತಾನದಲ್ಲಿ ಇರುವ ಅಲ್ ಕೈದಾ ಹಾಗೂ ಇಂಡಿಯನ್ ಮುಜಾಹಿದೀನ್ ನ ತರಬೇತಿ ಶಿಬಿರಗಳಿಗೆ ಕಳುಹಿಸುತ್ತಿದ್ದ ಎಂದು ಎಸ್ಪಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.

ಕಲೀಮುದ್ದೀನ್ ಹಲವರನ್ನು ಜಿಹಾದಿಗಳಾಗಿ ನೇಮಿಸಿಕೊಂಡಿದ್ದಾನೆ. ಆ ಪೈಕಿ ಹಲವರು ಜೈಲುಗಳಲ್ಲಿ ಇದ್ದಾರೆ. ಮತ್ತೆ ಕೆಲವರು ವಿದೇಶಗಳಲ್ಲಿ ತರಬೇತಿಯಲ್ಲಿ ಇದ್ದಾರೆ ಎಂದು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಇನ್ನು ಕಲೀಮುದ್ದೀನ್ ಸೌದಿ ಅರೇಬಿಯಾ, ಆಫ್ರಿಕಾ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವೆಡೆ ಸುತ್ತಾಡಿದ್ದಾನೆ. ವಿಚಾರಣೆ ವೇಳೆ ಹಲವು ಮಹತ್ವದ ವಿಷಯಗಳ ಬಗ್ಗೆ ಆತ ಬಾಯ್ಬಿಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications