ಕಾಂಗ್ರೆಸ್‌ನಿಂದ ಮತದಾರರಿಗೆ ಲುಲು ಮಾಲ್ ಗಿಫ್ಟ್ ಕೂಪನ್: ಹೆಚ್‌ಡಿಕೆ ಆರೋಪ
ಚನ್ನಪಟ್ಟಣದಲ್ಲಿ ಉಪಚುನಾವಣಾ ಕಣ ರಂಗೇರಿದ್ದು, ಮೈತ್ರಿಯೊಂದಿಗೆ ಕಣಕ್ಕಿಳಿದಿರುವ ಜೆಡಿಎಸ್ ಭರ್ಜರಿ ಪ್ರಚಾರದಲ್ಲಿ ತೊಡಗಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ತಮ್ಮ ಪುತ್ರ ನಿಖಿಲ್ ಅವರನ್ನು ಚನ್ನಪಟ್ಟಣದಲ್ಲಿ ಗೆಲ್ಲಿಸಲು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ನಿನ್ನೆ ಪ್ರಚಾರದ ವೇಳೆ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ಮತದಾರರಿಗೆ ಲುಲು ಮಾಲ್ ಗಿಫ್ಟ್ ಕೂಪನ್‌ಗಳನ್ನು ಹಂಚಿಕೊಂಡು ಚುನಾವಣಾ ಅಕ್ರಮ ಎಸಗಲು ಕಾಂಗ್ರೆಸ್ ಮುಂದಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಬಹಿರಂಗವಾಗಿ ಆರೋಪಿಸಿದ್ದಾರೆ.

ನಿನ್ನೆ ಪ್ರಚಾರ ಮಾಡುತ್ತಾ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವು ಈ ಚುನಾವಣೆಯಲ್ಲಿ ಭಾರಿ ಅಕ್ರಮಗಳನ್ನು ನಡೆಸಲು ಪ್ಲ್ಯಾನ್ ಮಾಡಿಕೊಂಡಿದೆ. ಇದರ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು. ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು. ಆದರೆ, ಕಾಂಗ್ರೆಸ್ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ ಎಂದು ದೂರಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಮಿತಿಮೀರಿ ಅಕ್ರಮಗಳನ್ನು ಎಸಗಿದೆ. ಆ ಮೂಲಕ ಜನರಿಗೆ ಮೋಸ ಮಾಡಿದೆ. ಆಗಲೂ ಸಹ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರಿಗೆ ಲುಲು ಮಾಲ್ ಗಿಫ್ಟ್ ಕೂಪನ್‌ಗಳನ್ನು ಹಂಚಿತ್ತು. ಕಾಂಗ್ರೆಸ್ ಕಾರ್ಯಕರ್ತರು ರಾತ್ರೋರಾತ್ರಿ ಹಳ್ಳಿ ಹಳ್ಳಿಗೆ ಹಂಚಿದ್ದರು. ಆದರೆ, ಎಲೆಕ್ಷನ್ ಮುಗಿದ ಮೇಲೆ ಹಣವೂ ಇಲ್ಲ, ಕೂಪನ್ ಕೂಡ ಇರಲಿಲ್ಲ. ಆಗಲೇ ಕಾಂಗ್ರೆಸ್‌ಗೆ ಜನ ಶಾಪ ಹಾಕಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಚಾರದ ವೇಳೆ ಬಿದ್ದ ನಿಖಿಲ್: ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿರೋ ನಿಖಿಲ್ ಕುಮಾರಸ್ವಾಮಿ ನಿನ್ನೆ ಪ್ರಚಾರ ವೇಳೆ ಕಾರ್ಯಕರ್ತನ ಬೈಕ್ನಿಂದ ಬಿದ್ದು ಸಣ್ಣ ಪುಟ್ಟ ಪೆಟ್ಟು ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣ ತಾಲ್ಲೂಕಿನ ಮಂಗಾಡಹಳ್ಳಿಯಲ್ಲಿ ನಿಖಿಲ್ ಕಾರ್ಯಕರ್ತನ ಸ್ಕೂಟರ್ ಏರಿ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಮಳೆಯಿಂದ ಕೆಸರಾಗಿದ್ದ ರಸ್ತೇಲಿ ಸ್ಲಿಪ್ ಆಗಿ ಬಿದ್ದಿದ್ದಾರೆ. ಆದರೂ ಕೆಲ ಕಾಲ ವಿರಾಮ ಪಡೆದು ಕುಂಟುತ್ತಲೇ ಪ್ರಚಾರ ಮುಂದುವರಿಸಿದ್ದಾರೆ.

ಈ ಹಿಂದೆಯೂ ಕಾಂಗ್ರೆಸ್‌ನವರು ಕೂಪನ್ ಹಂಚಿ ನನ್ನನ್ನು ಸೋಲಿಸಿದ್ರು. ರಾತ್ರೋರಾತ್ರಿ ಎಲ್ಲರ ಮನೆಮನೆಗೆ ಹಂಚಿದ್ರು. ಆದರೆ ಕೂಪನ್‌ಗೆ ಬೆಲೆ ಇಲ್ಲ, ಯಾರಿಗೂ ಅನುಕೂಲ ಆಗಲಿಲ್ಲ. ಹಾಗಾಗಿ ಇದರ ಬಗ್ಗೆ ಜನ ಎಚ್ಚರಿಕೆ ವಹಿಸಬೇಕು. ಎರಡು ಬಾರಿ ಪೆಟ್ಟು ತಿಂದಿದ್ದೇನೆ. ನನ್ನ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ನಿಖಿಲ್ ಆರೋಪ ಮಾಡಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೊದಲ ಸಲ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಆಗ ಸಾರಾಯಿ, ಲಾಟರಿ ನಿಷೇಧ ಮಾಡಿದ್ದರು. ಈ ಮೂಲಕ ಮಹಿಳೆಯರ ಗೌರವ ಉಳಿಸುವ ಕೆಲಸ ಮಾಡಿದ್ದರು. ಈಗ ಯುವಜನರು ಆನ್‌ಲೈನ್ ಗೇಮ್‌ಗಳಿಂದ ಬಲಿಪಶುಗಳಾಗುತ್ತಿದ್ದಾರೆ. ಹಣ ವಾಪಸ್ ಬರದಿದ್ದಾಗ ನೊಂದು ಸೂಸೈಡ್ ಮಾಡಿಕೊಳ್ಳುತ್ತಿದ್ದಾರೆ. ನನಗೆ ನೀವೆಲ್ಲ ಅವಕಾಶ ಕೊಟ್ಟರೆ, ಇದಕ್ಕೆ ಮೊದಲು ಕಡಿವಾಣ ಹಾಕುತ್ತೇನೆ ಎಂದು ನಿಖಿಲ್ ಮನವಿ ಮಾಡಿದ್ದಾರೆ.












Click it and Unblock the Notifications