ಪಂಚಾಯಿತಿ ಫೈಟ್; ಮೀಸಲು ನಿಗದಿಗೆ ಸಭೆ ಕರೆದ ರಾಮನಗರ ಡಿಸಿ

ರಾಮನಗರ, ಜನವರಿ 19: ರಾಮನಗರ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆದಿತ್ತು. ಚುನಾಯಿತಗೊಂಡ ಸದಸ್ಯರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳದ್ದೇ ಧ್ಯಾನ. ಸದಸ್ಯರ ಕಾತರಕ್ಕೆ ತೆರೆ ಎಳೆಯಲು ಜಿಲ್ಲಾಡಳಿತ ಸಜ್ಜಾಗಿದೆ. ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿ ಮಾಡಲು ಸಭೆ ಕರೆಯಲಾಗುತ್ತದೆ.

ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಮೀಸಲು ನಿಗದಿ ಮಾಡಲು ಸಭೆ ನಡೆಸುವ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಜನವರಿ 22ರಿಂದ 27ರ ತನಕ ಸಭೆಗಳು ನಡೆಯಲಿವೆ.

ರಾಮನಗರ ಜಿಲ್ಲೆಯ 118 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲು ನಿಗದಿ ಮಾಡಲು ಆಯಾ ತಾಲೂಕಿನಲ್ಲಿ ಚುನಾಯಿತ ಸದಸ್ಯರ ಸಮ್ಮಖದಲ್ಲೇ ಸಭೆ ನಡೆಸಲಾಗುತ್ತದೆ. ಜನವರಿ 22ರಂದು ಕನಕಪುರದಲ್ಲಿ 36 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿ ಮಾಡಲು ಪಟ್ಟಣದ ಎಸ್. ಬಿ. ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ.

Meeting For Announce Reservation For Gram Panchayat President Vice President

ಜನವರಿ 25ರಂದು ಮಾಗಡಿ ತಾಲೂಕಿನ 30 ಗ್ರಾಮ ಪಂಚಾಯತಿಗಳಿಗೆ ಮೀಸಲು ನಿಗದಿ ಮಾಡಲು ಪಟ್ಟಣದ ಬಾಲಾಜಿ ಪಬ್ಲಿಕ್‌ ಸ್ಕೂಲ್‌ ಸಭಾಂಗಣದಲ್ಲಿ ಮಧ್ಯಾಹ್ನ 3 ಗಂಟೆ ಸಭೆ ನಡೆಯಲಿದೆ. ಜನವರಿ 27ರಂದು ರಾಮನಗರ ಮತ್ತು ಚನ್ನಪಟ್ಟಣ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಿಗೆ ಮೀಸಲು ನಿಗದಿ ಮಾಡಲು ಸಭೆ ನಡೆಯಲಿದೆ.

ಜನವರಿ 27ರಂದು 11 ಗಂಟೆಗೆ ಜಯಪುರ ಗೇಟ್ ಬಳಿಯ ಎಸ್. ಎಸ್. ಕನ್ವೆನ್ಷನ್‌ ಹಾಲ್‌ನಲ್ಲಿ ರಾಮನಗರ ವ್ಯಾಪ್ತಿಯ 20 ಗ್ರಾಮ ಪಂಚಾಯತಿಗಳಿಗೆ ಮೀಸಲು ನಿಗದಿಯಾಗಲಿದೆ. ಮಧ್ಯಾಹ್ನ 3 ಗಂಟೆಗೆ ಕೆಂಗಲ್ ಬಳಿಯ ಪುಷ್ಪ ಬೈರೇಗೌಡ ಕಲ್ಯಾಣ ಪಂಟಪದಲ್ಲಿ ಚನ್ನಪಟ್ಟಣ ವ್ಯಾಪ್ತಿಯ 32 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲು ಆಯ್ಕೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+