ರಾಮನಗರ ಚುನಾವಣೆ : ಎಲ್.ಚಂದ್ರಶೇಖರ್ ಹೆಸರು ಮತಯಂತ್ರದಲ್ಲಿ ಇರುತ್ತೆ!

ರಾಮನಗರ, ನವೆಂಬರ್ 02 : ರಾಮನಗರ ಕ್ಷೇತ್ರದ ಉಪ ಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಹಿಂದೆ ಸರಿದಿದ್ದಾರೆ. ಆದರೆ, ಎಲೆಕ್ಟ್ರಾನಿಕ್ ವೋಟಿಂಗ್ ಮಿಷಿನ್‌ನಲ್ಲಿ ಅವರ ಹೆಸರು ಇರುತ್ತದೆ.

ಗುರುವಾರ ನಡೆದ ಮಹತ್ವದ ಬೆಳವಣಿಗೆಯಲ್ಲಿ ಎಲ್.ಚಂದ್ರಶೇಖರ್ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದರು. ನವೆಂಬರ್ 3ರ ಶನಿವಾರ ರಾಮನಗರ ಕ್ಷೇತ್ರದ ಉಪ ಚುನಾವಣೆಗೆ ಮತದಾನ ನಡೆಯಲಿದೆ.

ಎಲ್.ಚಂದ್ರಶೇಖರ್ ಅವರು ಕಣದಿಂದ ಹಿಂದೆ ಸರಿದರೂ ಅವರ ಹೆಸರು ಮತಯಂತ್ರದಲ್ಲಿ ಇರಲಿದೆ. ಕೆಲವು ಬಿಜೆಪಿ ಕಾರ್ಯಕರ್ತರು ಅಭ್ಯರ್ಥಿ ಇಲ್ಲದಿದ್ದರೂ ಮತವನ್ನು ಬಿಜೆಪಿಗೆ ಹಾಕುತ್ತೇವೆ ಎಂದು ಹೇಳಿದ್ದಾರೆ. ದೇಶದ ಹಿತಕ್ಕಾಗಿ ಬಿಜೆಪಿಗೆ ಮತ ಹಾಕಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಇದು ಅಚ್ಚರಿಯ ನಡೆ ಏನಲ್ಲ, ಹಿಂದೆಯೂ ಈ ರೀತಿಯ ಹಲವಾರು ಪ್ರಕರಣಗಳು ನಡೆದಿವೆ ಎಂದು ಚುನಾವಣಾ ಆಯೋಗ ಹೇಳಿದೆ. ನಾಮಪತ್ರ ವಾಪಸ್ ಪಡೆಯಲು ನಿಗದಿ ಪಡಿಸಿದ ಕೊನೆಯ ದಿನಾಂಕದ ನಂತರ ಉಳಿಯುವ ಎಲ್ಲಾ ಅಭ್ಯರ್ಥಿಗಳ ಹೆಸರು ಮತಯಂತ್ರದಲ್ಲಿ ಇರಲಿದೆ...

ಚುನಾವಣಾ ಆಯೋಗ ಹೇಳುವುದೇನು?

ಚುನಾವಣಾ ಆಯೋಗ ಹೇಳುವುದೇನು?

ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಆದರೆ, ಮತಯಂತ್ರದಲ್ಲಿ ಅವರ ಹೆಸರು ಇರುತ್ತದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಈ ಬಗ್ಗೆ ಹೇಳಿಕೆ ನೀಡಿದ್ದು, 'ಕಣದಿಂದ ಹಿಂದೆ ಸರಿದ ಬಗ್ಗೆ ನಮಗೆ ಅಧಿಕೃತ ಮಾಹಿತಿ ಇಲ್ಲ.ಯಾರೂ ಸಹ ಈ ಬಗ್ಗೆ ದೂರು ಕೊಟ್ಟಿಲ್ಲ. ಅವರ ಹೆಸರು ಮತಯಂತ್ರ ಮತ್ತು ವಿವಿಪ್ಯಾಟ್‌ನಲ್ಲಿ ಇರಲಿದೆ' ಎಂದು ಹೇಳಿದ್ದಾರೆ.

ಕಾನೂನುಹೇಳುವುದೇನು?

ಕಾನೂನುಹೇಳುವುದೇನು?

ಕಾನೂನಿನ ಪ್ರಕಾರ ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನಾಂಕದ ನಂತರ ಉಳಿದ ಎಲ್ಲರೂ ಅಭ್ಯರ್ಥಿಗಳಾಗಿರುತ್ತಾರೆ. ಅವರ ಹೆಸರು ಮತಯಂತ್ರದಲ್ಲಿ ಇರುತ್ತದೆ. ಆದ್ದರಿಂದ, ಶನಿವಾರ ನಡೆಯುವ ಚುನಾವಣೆಯಲ್ಲಿ ಎಲ್.ಚಂದ್ರಶೇಖರ್ ಅವರ ಹೆಸರು ಹಾಗೆಯೇ ಇರಲಿದೆ.

ಬಿಜೆಪಿಗೆ ಮತ

ಬಿಜೆಪಿಗೆ ಮತ

ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಪರ್ಧೆಯಿಂದ ಹಿಂದೆ ಸರಿದಿರಬಹುದು. ಆದರೆ, ಕೆಲವು ಪಕ್ಷದ ಕಾರ್ಯಕರ್ತರು ಬಿಜೆಪಿಯ ಗುರುತಿಗೆ ಮತ ನೀಡುತ್ತೇವೆ. ಈ ಮೂಲಕ ನಾವು ಪಕ್ಷದ ಜೊತೆಗಿದ್ದೇವೆ ಎಂಬ ಸಂದೇಶ ರವಾನಿಸುತ್ತೇವೆ ಎಂದು ಹೇಳಿದ್ದಾರೆ. ಎಲ್.ಚಂದ್ರಶೇಖರ್ ಪರವಾಗಿ ಎಷ್ಟು ಮತಗಳು ಬರಲಿವೆ? ಎಂದು ಕಾದು ನೋಡಬೇಕು.

ಕಾಂಗ್ರೆಸ್‌ ಸೇರುವುದಾಗಿ ಘೋಷಣೆ

ಕಾಂಗ್ರೆಸ್‌ ಸೇರುವುದಾಗಿ ಘೋಷಣೆ

ಕಾಂಗ್ರೆಸ್ ನಾಯಕ ಸಿ.ಎಂ.ಲಿಂಗಪ್ಪ ಪುತ್ರ ಎಲ್.ಚಂದ್ರಶೇಖರ್ ರಾಮನಗರ ಕ್ಷೇತ್ರದ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಸೇರಿದ್ದರು. ಟಿಕೆಟ್ ಪಡೆಯುವಲ್ಲಿ ಸಹ ಯಶಸ್ವಿಯಾಗಿದ್ದರು. ಚುನಾವಣಾ ಪ್ರಚಾರವನ್ನು ಮಾಡಿದ್ದ ಅವರು ಗುರುವಾರ ದಿಢೀರ್ ಆಗಿ ಕಣದಿಂದ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+