ಕೆಪಿಎಸ್‌ಸಿಯಲ್ಲಿ ಮತ್ತೊಂದು ಭ್ರಷ್ಟಾಚಾರ?; ಆಡಿಯೋ ವೈರಲ್

ರಾಮನಗರ, ಮಾರ್ಚ್ 24: ಡಿಕೆಶಿ ಸಹೋದರರ ಬೆಂಬಲಿಗ, ಕೆಪಿಎಸ್‌ಸಿ ಸದಸ್ಯ ರಘುನಂದನ್ ರಾಮಣ್ಣ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಎಸಿ ಶ್ರೇಣಿ ಹುದ್ದೆ ಕೊಡಿಸುವುದಾಗಿ ರಘುನಂದನ್ ಆಪ್ತರು 1.50 ಕೋಟಿ ಹಣವನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ರಘುನಂದನ್ ರಾಮಣ್ಣ ಆಪ್ತರಾದ ಚನ್ನಪಟ್ಟಣದ ಕಾಂಗ್ರೆಸ್ ಮುಖಂಡ, ಡಿಕೆಶಿ ಸಹೋದರರ ಆತ್ಮೀಯ ಪಿ. ಡಿ. ರಾಜು ಹಾಗೂ ನೂತನ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಹಣ ಪಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ.

KPSC Member Close Aides Received Bribe By Promising Jobs

ರಾಂಪುರ ಗ್ರಾಮದ ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ವೆಂಕಟೇಗೌಡ ಎಂಬುವವರ ಮಗಳಿಗೆ ಎಸಿ ಹುದ್ದೆ ಕೊಡಿಸುವ ವಿಚಾರದಲ್ಲಿ ಇಬ್ಬರು ಮುಖಂಡರು ಹಣ ಪಡೆದಿದ್ದಾರೆ. ಈ ಮಾತುಕತೆ ನಡೆಸಿರುವ ಆಡಿಯೋ ವೈರಲ್ ಆಗಿದೆ.

ಪ್ರಮೋದ್

ಚನ್ನಪಟ್ಟಣದ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ. ಸಿ. ವೀರೇಗೌಡ ಹಾಗೂ ಹಣ ಕೊಟ್ಟಿರುವ ವೆಂಕಟೇಗೌಡ ನಡುವಿನ ಪೋನ್ ಸಂಭಾಷಣೆ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ. 1.5 ಕೋಟಿ ಪೈಕಿ 1 ಕೋಟಿ ಅಡ್ವಾನ್ಸ್ ಹಣವನ್ನು ರಾಜು ಹಾಗೂ ಪ್ರಮೋದ್ ಪಡೆದಿದ್ದಾರೆ.

ಪಿ. ಡಿ. ರಾಜು

ಆಡಿಯೋದಲ್ಲಿ ಕೆಲಸ ಆಗದ ಹಿನ್ನಲೆಯಲ್ಲಿ ವೆಂಕಟೇಗೌಡ ಹಣ ವಾಪಸ್ ಕೇಳಿರುವ ಮಾತುಗಳಿವೆ. ಈ ಕುರಿತು ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ. ಯಾರೂ ಸಹ ಸ್ಪಷ್ಟನೆಯನ್ನು ನೀಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+