Gruha Lakshmi Scheme: ರಾಮನಗರದಲ್ಲಿ ಮಹಿಳೆಯರಿಗೆ ಬಾಗಿನ ನೀಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

ರಾಮನಗರ, ಆಗಸ್ಟ್‌, 30: ಚುನಾವಣೆಯ ಪೂರ್ವದಲ್ಲಿ ನೀಡಿದ ಕಾಂಗ್ರಸ್‌ನ 5 ಗ್ಯಾರಂಟಿಗಳಲ್ಲಿ ಇಂದು 4ನೇ ಗ್ಯಾರಂಟಿ ಪ್ರತಿ ಮನೆಯ ಯಜಮಾನಿಗೆ ನೀಡುವ 2000 ರೂಪಾಯಿಗಳನ್ನು ನೀಡುವ "ಗೃಹಲಕ್ಷ್ಮಿ ಯೋಜನೆ"ಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಧಿಕೃತವಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಚಾಲನೆ ನೀಡಿದ ಬೆನ್ನಲ್ಲೇ ರೇಷ್ಮನಾಡು ರಾಮನಗರದಲ್ಲೂ ವಿಭಿನ್ನವಾಗಿ ಚಾಲನೆ ದೊರೆತಿದೆ.

ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯನ್ನು ರೇಷ್ಮೆನಾಡು ರಾಮನಗರದಲ್ಲಿ‌ ವಿಭಿನ್ನವಾಗಿ ಚಾಲನೆ ನೀಡಲಾಯಿತು. ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಕಾರ್ಯಕ್ರಮ ಆಗಮಿಸಿದ್ದ ಸಾವಿರಾರು ಮಹಿಳೆಯರಿಗೆ ಬಾಗಿನ ಸಮರ್ಪಿಸುವ ಮೂಲಕ ಗೃಹಲಕ್ಷಿ ಯೋಜನೆಯನ್ನು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಚಾಲನೆ ನೀಡಿದರು.

gruha-lakshmi-scheme

ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ‌ ಆಯೋಜನೆ ಮಾಡಿದ್ದ ಗೃಹಲಕ್ಷ್ಮಿ ಯೋಜನೆಯ ಪ್ರದರ್ಶನ ನೋಡಲು ಆಗಮಿಸಿದ್ದ ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗೃಹಲಕ್ಷ್ಮಿಯರಿಗೆ ಬಾಗಿನ ವಿತರಣೆ ಮಾಡಿದ ಶಾಸಕ ಇಕ್ಬಾಲ್ ಹುಸೇನ್ ಗೃಹಲಕ್ಷ್ಮಿ ಯೋಜನೆಯನ್ನು ವಿಶೇಷವಾಗಿ ಚಾಲನೆ ನೀಡಿದರು.

ಮಹಿಳೆಯರಿಗೆ ಸಮರ್ಪಿಸಿದ ಬಾಗಿನದಲ್ಲಿ ಅರಿಶಿಣ, ಕುಂಕುಮ, ಬಳೆ, ರವಿಕೆ, ತೆಂಗಿನಕಾಯಿ ಒಳಗೊಂಡ ಬ್ಯಾಗ್ ವಿತರಿಸುವ ಮೂಲಕ ಶಾಸಕ ಇಕ್ಬಾಲ್ ಹುಸೇನ್ ಅರ್ಥಪೂರ್ಣವಾಗಿ ಗೃಹಲಕ್ಷ್ಮಿ ಯೋಜನೆಗೆ ಜಾರಿ‌ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, ರಾಜ್ಯದ ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ‌‌ ಅವರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡುತ್ತಿರುವುದು ನನಗೆ ಬಹಳ ಸಂತೋಷವಾಗಿದೆ. ಹಾಗಾಗಿ ಯೋಜನೆಯನ್ನು ನಮ್ಮ ಕ್ಷೇತ್ರದಲ್ಲಿ ವಿಭಿನ್ನವಾಗಿ ಆಚರಣೆ ಮಾಡಬೇಕು ಎಂದು ಎಲ್ಲಾ ನಮ್ಮ ತಾಯಂದಿರಿಗೆ ಬಾಗಿನ ನೀಡುವ ಮೂಲಕ ಅವರನ್ನು ಗೌರವಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ನೋಂದಣಿ ಮಾಡಿಕೊಂಡ ಮಹಿಳೆಯರ ವಿವರ

ಜಿಲ್ಲೆಯಲ್ಲಿ ಸುಮಾರು 2,98,870 ಗೃಹಲಕ್ಷ್ಮೀ ಯೋಜನೆ ಅರ್ಹ ಮಹಿಳೆಯರಿದ್ದು, ಅವರಲ್ಲಿ ಈಗಾಗಲೇ ಶೇಕಡಾ 85ರಷ್ಟು ಅಂದರೆ ಸುಮಾರು 2,56,370 ಮಹಿಳೆಯರು ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನೂ ಜಿಲ್ಲೆಯ 5 ತಾಲೂಕುಗಳಾದ ಚನ್ನಪಟ್ಟಣ-60,570, ಹಾರೋಹಳ್ಳಿ -19,224, ಕನಕಪುರ- 68,313, ಮಾಗಡಿ-48,580 ಹಾಗೂ ರಾಮನಗರ- 59,683 ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+