ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ದಿನ ನಿಗದಿ ಮಾಡಿದ ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್‌ 17: 2023ರ ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಪ್ರಕಟಿಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಪಂಚರತ್ನ ರಥಯಾತ್ರೆಗೆ ಗುಡ್ಡದಹಳ್ಳಿಯಲ್ಲಿ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಿತ್ತು‌, ಆದರೆ ಧಾರ್ಮಿಕ ವೇದಿಕೆಯಲ್ಲಿ ರಾಜಕೀಯ ಬೇಡ ಸುಮ್ಮನಾದೆ. ಅಲ್ಲದೇ ಟಿಟಿಡಿಯ ಗೈಡ್ ಲೈನ್ ಉಲ್ಲಂಘನೆ ಆಗಬಾರದು ಎಂದು ಮುಂದೂಡಿದ್ದೇವೆ ಎಂದರು.

ರಾಮನಗರ: 2ಲಕ್ಷ ಮನೆಗೆ ನೀರಿನ ಸಂಪರ್ಕಕ್ಕೆ 2,000 ಕೋಟಿ ರೂ. ಖರ್ಚುರಾಮನಗರ: 2ಲಕ್ಷ ಮನೆಗೆ ನೀರಿನ ಸಂಪರ್ಕಕ್ಕೆ 2,000 ಕೋಟಿ ರೂ. ಖರ್ಚು

ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮದಲ್ಲಿ ಶ್ರೀನಿವಾಸನ ದರ್ಶನ ಪಡೆದು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಸೋಮವಾರ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರಕರಣವನ್ನು ನಾವು ಲಘುವಾಗಿ ಪರಿಗಣಿಸಲು ಆಗಲ್ಲ

ಪ್ರಕರಣವನ್ನು ನಾವು ಲಘುವಾಗಿ ಪರಿಗಣಿಸಲು ಆಗಲ್ಲ

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ ಮಾತನಾಡಿದ ಕುಮಾರಸ್ವಾಮಿ, ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಕೆಸರೆಚಾಟದಲ್ಲಿಮುಳುಗಿವೆ. ಇದರಲ್ಲಿ ಸರ್ಕಾರದ ಜವಾಬ್ದಾರಿ ಹೆಚ್ಚಿದೆ. ಸರ್ಕಾರ ಈಗಾಗಲೇ ತನಿಖೆ ಮಾಡುತ್ತಿದೆ. ಹಾಗಾಗಿ ಪ್ರಕರಣವನ್ನು ನಾವು ಲಘುವಾಗಿ ಪರಿಗಣಿಸಲು ಆಗುವುದಿಲ್ಲ. ತನಿಖಾ ಸಂಸ್ಥೆಗಳು ಕಠಿಣ ರೀತಿಯಲ್ಲಿ ನಿಷ್ಪಕ್ಷಪಾತವಾದ ತನಿಖೆ ಮಾಡಬೇಕು. ಅದು ಸರ್ಕಾರದ ಜವಾಬ್ದಾರಿ ಕೂಡ ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ನಿಖಿಲ್ ಸ್ಫರ್ಧೆ ಕಾರ್ಯಕರ್ತರ ನಿರ್ಧಾರ

ನಿಖಿಲ್ ಸ್ಫರ್ಧೆ ಕಾರ್ಯಕರ್ತರ ನಿರ್ಧಾರ

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡುದರ ಬಗ್ಗೆ ರಾಮನಗರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅಂತಿಮವಾಗಿ ಕೂತು ಕಾರ್ಯಕರ್ತರು ನಿರ್ಧಾರ ಮಾಡುತ್ತಾರೆ. ರಾಮನಗರದ ಅಭ್ಯರ್ಥಿ ಬಗ್ಗೆ ನೀವೇ ತೀರ್ಮಾನ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ಕಾರ್ಯಕರ್ತರ ಭಾವನೆ ಹಾಗೂ ತೀರ್ಮಾನಕ್ಕೆ ತಲೆಬಾಗುತ್ತೇನೆ ಎಂದಿದ್ದಾರೆ.

ಅಭ್ಯರ್ಥಿ ಯಾರು ಅದು ಕಾರ್ಯಕರ್ತರ ತೀರ್ಮಾನ

ಅಭ್ಯರ್ಥಿ ಯಾರು ಅದು ಕಾರ್ಯಕರ್ತರ ತೀರ್ಮಾನ

ಮಾತು ಮುಂದುವರಿಸಿದ ಕುಮಾರಸ್ವಾಮಿ, ನನ್ನನ್ನು ಬೆಳಸಿದ ಕ್ಷೇತ್ರ ರಾಮನಗರ ಕ್ಷೇತ್ರ, ಇಲ್ಲಿ ಅನಿತಾ ಕುಮಾರಸ್ವಾಮಿ ಕೂಡಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅವರ ಮೇಲೂ ಒಳ್ಳೆಯ ಅಭಿಪ್ರಾಯ ಇದೆ. ನಿಖಿಲ್ ನಿಲ್ಲಬೇಕೋ ಅಥವಾ ಅನಿತಾ ಕುಮಾರಸ್ವಾಮಿಯವರು ನಿಲ್ಲಬೇಕೋ ಅದು ಕಾರ್ಯಕರ್ತರ ತೀರ್ಮಾನ ಮಾಡುತ್ತಾರೆ. ನಾನು ಕಾರ್ಯಕರ್ತರ ತಿರ್ಮಾನಕ್ಕೆ ಬದ್ಧನಾಗುತ್ತೇನೆ ಎಂದು ಹೇಳಿದರು.

ಜೆಡಿಎಸ್‌ ಭದ್ರಕೋಟೆ ಒಡೆಯಲು ಅಸ್ತ್ರಗಳಿಲ್ಲ

ಜೆಡಿಎಸ್‌ ಭದ್ರಕೋಟೆ ಒಡೆಯಲು ಅಸ್ತ್ರಗಳಿಲ್ಲ

ಕಾಂಗ್ರೆಸ್ ಪಕ್ಷದಿಂದ ಒಕ್ಕಲಿಗ ನಾಯಕರ ಸಭೆ ವಿಚಾರ‌ವಾಗಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರಕೋಟೆ ಒಡೆಯಲು ಎಲ್ಲರೂ ಹೊರಟಿದ್ದಾರೆ. ಈಗಾಗಲೇ ಹಲವಾರು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದಾರೆ. ಜೆಡಿಎಸ್ ಭದ್ರಕೋಟೆಯನ್ನು ಜನ ಬಿಗಿಯಾಗಿ ಕಟ್ಟಿರುವ ಭದ್ರಕೋಟೆ. ಒಡೆಯಲು ಅವರ ಬಳಿ ಯಾವುದೇ ಅಸ್ತ್ರಗಳಿಲ್ಲ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

English summary
Kumaraswamy fixed the date for the release of the list of JDS candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X