ರಾಮನಗರ; ಸೆಲ್ಫೀ ವಿಡಿಯೋ ಮಾಡಿ ಮಗಳೊಂದಿಗೆ ನೇಣಿಗೆ ಶರಣಾದ ತಂದೆ

ರಾಮನಗರ, ಮೇ 20: ಸೆಲ್ಫೀ ವಿಡಿಯೋ ಮಾಡಿಟ್ಟು, ಮಗಳನ್ನು ನೇಣು ಹಾಕಿದ ತಂದೆ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮನಗರ ತಾಲೂಕಿನ ಕಟಮಾನದೊಡ್ಡಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

Recommended Video

      ಹೊನ್ನಾಳಿಯಲ್ಲಿ ಹೊಲ ಉತ್ತು ನಂತರ ಸೋಂಕಿತರಿಗೂ ನೆರವಾದ ರೇಣುಕಾಚಾರ್ಯ | Renukacharya

      ಕಟಮಾನದೊಡ್ಡಿ ಗ್ರಾಮದ ರಾಮಚಂದ್ರ (38), ತನ್ನ ಏಳು ವರ್ಷದ ಮಗಳು ವರ್ಷಾಳನ್ನೂ ನೇಣು ಹಾಕಿ, ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂದು ಹೇಳಿ ಸೆಲ್ಫೀ ವಿಡಿಯೋ ಮಾಡಿಟ್ಟು, ಎಲ್ಲರನ್ನೂ ಬಿಟ್ಟು ಹೋಗುವೆನೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

       ಸೆಲ್ಫೀ ವಿಡಿಯೋ ಮಾಡಿದ್ದ ರಾಮಚಂದ್ರ

      ಸೆಲ್ಫೀ ವಿಡಿಯೋ ಮಾಡಿದ್ದ ರಾಮಚಂದ್ರ

      ತನ್ನ ಅಣ್ಣನಿಗೆಂದು ವಿಡಿಯೋ ಮಾಡಿದ ರಾಮಚಂದ್ರ, "ಜೀವನದಲ್ಲಿ ನಾನು ತುಂಬಾ ಮೋಸ ಹೋದೆ. ಹೆಂಡತಿ ಎಂದು ಬೆಟ್ಟದಷ್ಟು ಪ್ರೀತಿಸಿದೆ. ಆದರೆ ಅದಕ್ಕೆ ನನಗೆ ದೊಡ್ಡ ಬಹುಮಾನವನ್ನೇ ಕೊಟ್ಟಿದ್ದಾಳೆ. ಅವಳಿಂದ ಎಲ್ಲರನ್ನೂ ದೂರ ಮಾಡಿಕೊಂಡೆ. ನಿಮ್ಮನ್ನೆಲ್ಲ ದ್ವೇಷಿಸಿದೆ. ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೋ" ಎಂದು ವಿಡಿಯೋ ಮಾಡಿದ್ದಾರೆ.

      "ಬದುಕಲು ಬೆಟ್ಟದಷ್ಟು ಆಸೆಯಿದೆ"

      ನನಗೆ ಬದುಕಲು ಬೆಟ್ಟದಷ್ಟು ಆಸೆಯಿದೆ. ಮಕ್ಕಳು ಬೆಳೆಯುವುದನ್ನು ನೋಡಬೇಕು ಎಂದು ತುಂಬಾ ಆಸೆ ಇಟ್ಟುಕೊಂಡಿದ್ದೆ. ಎಲ್ಲವೂ ಚೂರಾಯಿತು. ಅವಳಿಂದ ತುಂಬಾ ನೋವು ಅನುಭವಿಸಿದೆ. ಜೀವನ ಸರಿಹೋಗಬಹುದು ಎಂದುಕೊಂಡೆ ಆಗಲಿಲ್ಲ. ನನ್ನ ಹೆಂಡತಿಗೆ ಯಾರೂ ಏನೂ ಹೇಳಬೇಡಿ, ಅವಳು ಸುಖವಾಗಿರಲಿ ಎಂದು ಹೇಳಿದ್ದಾರೆ.

       ಡ್ರೈವರ್ ಕೆಲಸ ಮಾಡಿಕೊಂಡಿದ್ದ ರಾಮಚಂದ್ರ

      ಡ್ರೈವರ್ ಕೆಲಸ ಮಾಡಿಕೊಂಡಿದ್ದ ರಾಮಚಂದ್ರ

      ಡ್ರೈವರ್ ಕೆಲಸ ಮಾಡಿಕೊಂಡಿದ್ದ ರಾಮಚಂದ್ರಗೆ ಮದುವೆಯಾಗಿ ಒಂಬತ್ತು ವರ್ಷಗಳಾಗಿವೆ. ಪತ್ನಿಗೆ ಅನೈತಿಕ ಸಂಬಂಧ ಇರುವುದಾಗಿ ಅನುಮಾನ ವ್ಯಕ್ತಗೊಂಡಿದ್ದು, ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಮಗಳನ್ನೂ ತನ್ನೊಂದಿಗೆ ಮಣ್ಣು ಮಾಡಿ, ಅದೇ ನನ್ನ ಕೊನೆ ಆಸೆ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.

       ನಾಪತ್ತೆಯಾಗಿರುವ ಹೆಂಡತಿ

      ನಾಪತ್ತೆಯಾಗಿರುವ ಹೆಂಡತಿ

      ತಡರಾತ್ರಿ ರಾಮನಗರದಿಂದ ಕಟಮಾನದೊಡ್ಡಿ ಗ್ರಾಮಕ್ಕೆ ಬಂದು ತನ್ನ ಮಗಳನ್ನು ನೇಣು ಹಾಕಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ವಿಚಾರ ತಿಳಿಯುತ್ತಿದ್ದಂತೆ ಪತ್ನಿ ಪರಾರಿಯಾಗಿದ್ದಾಳೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+