ಪೌರಕಾರ್ಮಿಕರಿಗೆ ಊಟ ಹಂಚಿ ನೆಚ್ಚಿನ ನಟನ ಜನ್ಮದಿನ ಆಚರಿಸಿದ ಅಭಿಮಾನಿ
ಚನ್ನಪಟ್ಟಣ, ಏಪ್ರಿಲ್ 25: ಲಾಕ್ ಡೌನ್ ನಡುವೆಯೂ ನಿನ್ನೆ ವರನಟ ಡಾ. ರಾಜಕುಮಾರ್ ಜನ್ಮದಿನವನ್ನು ನಗರದ ಪೌರಕಾರ್ಮಿಕ ಕುಟುಂಬಗಳಿಗೆ ಊಟ ವಿತರಿಸುವ ಮೂಲಕ ವಿಶೇಷವಾಗಿ ಆಚರಿಸಿದ್ದಾರೆ ಇಲ್ಲಿನ ಅಭಿಮಾನಿ.
ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಪ್ರತಿ ವರ್ಷ ಸಮಾಜಕ್ಕೆ ಮಾದರಿಯಾಗಿ ಆಚರಿಸುತ್ತಿದ್ದ ಅಭಿಮಾನಿ ನಾಗೇಶ್ ಈ ಬಾರಿ, ಕೊರೊನಾ ವೈರಸ್ ಭೀತಿ ನಡುವೆಯೂ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಊಟ ಹಂಚುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ರಸಪ್ರಶ್ನೆ 2: ರಸಿಕರ ರಾಜ ಡಾ.ರಾಜ್ ಬಗ್ಗೆ ಸರಳ ಪ್ರಶ್ನೆಗಳಿಗೆ ಉತ್ತರಿಸಿ

ಡಾ.ರಾಜ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಅಭಿಮಾನಿಗಳು, ನಗರದ ಜೆ.ಸಿ.ರಸ್ತೆ ಹಿಂಭಾಗವಿರುವ ಪೌರಕಾರ್ಮಿಕ ಕುಟುಂಬಗಳಿಗೆ ಊಟ ಹಂಚುವ ಮೂಲಕ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದರು.












Click it and Unblock the Notifications