ಕನಕಪುರ : ಡಿಕೆ ಶಿವಕುಮಾರ್ ವಿರುದ್ಧ ನಂದಿನಿ ಗೌಡ ಸ್ಪರ್ಧೆ

ಕನಕಪುರ, ಏಪ್ರಿಲ್ 23: ರಾಮನಗರ ಜಿಲ್ಲೆ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಕೊನೆಗೂ ಅಂತಿಮಗೊಳಿಸಿರುವ ಭಾರತೀಯ ಜನತಾ ಪಕ್ಷವು, ಸೋಮವಾರದಂದು ಅಭ್ಯರ್ಥಿಯನ್ನು ಘೋಷಿಸಿದೆ.

ಇಂಧನ ಸಚಿವ ಡಿ. ಕೆ ಶಿವಕುಮಾರ್ ಅವರ ವಿರುದ್ಧ ಸ್ಪರ್ಧಿಸಲು ನಂದಿನಿ ಗೌಡ ಅವರು ಸಿದ್ಧವಾಗಿದ್ದಾರೆ. ಕನಕಪುರ ತಾಲೂಕಿನ ಕಡಹಳ್ಳಿ ನಿವಾಸಿಯಾಗಿರುವ ನಂದಿನಿ ಗೌಡ ಅವರು ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡವರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಆದರೆ, ಇತ್ತೀಚಿಗೆ ಜೆಡಿಎಸ್ ತೊರೆದು, ಬಿಜೆಪಿ ಸೇರಿಕೊಂಡಿದ್ದರು. ಇದಕ್ಕೆ ಸಿ.ಪಿ ಯೋಗೇಶ್ವರ್ ಕಾರಣ ಎಂದರೆ ತಪ್ಪಾಗಲಾರದು. ಡಿಕೆ ಶಿವಕುಮಾರ್ ಅವರ ವಿರುದ್ಧ ಪ್ರಬಲ ಸ್ಪರ್ಧಿಯನ್ನು ನಿಲ್ಲಿಸಲು ಬಿಜೆಪಿ ಹುಡುಕಾಟದಲ್ಲಿದ್ದಾಗ, ಸ್ಥಳೀಯರಾದ ನಂದಿನಿ ಗೌಡ ಅವರ ಹೆಸರನ್ನು ಸಿಪಿವೈ ಸೂಚಿಸಿದ್ದಾರೆ.

Elections 2018 : Nandini Gowda to contest against DK Shivakumar

ಜೆಡಿಎಸ್ ಪಕ್ಷದಲ್ಲಿ ರಾಜ್ಯ ಮಹಿಳಾ ಪ್ರಧಾನಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಎಚ್ ಡಿ ಕುಮಾರಸ್ವಾಮಿ ಹಾಗು ಎಚ್ ಡಿ ದೇವೇಗೌಡರು ತನ್ನನ್ನು ನಿರ್ಲಕ್ಷಿಸಿದ್ದಾರೆ. ಟಿಕೆಟ್ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿ ಪಕ್ಷ ತೊರೆದಿದ್ದರು. ಇದಾದ ಬಳಿಕ, ಸಿಪಿ ಯೋಗೇಶ್ವರ್ ನೇತೃತ್ವದಲ್ಲಿ ನವೆಂಬರ್ 2 ರಂದು ಬಿಜೆಪಿ ಸೇರಿಕೊಂಡಿದ್ದರು.

ಆದರೆ, ನಂದಿನಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಹಿರಿಯ ಮುಖಂಡರು ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಸಿಪಿವೈ, ನಿನ್ನೆ ಇಡೀ ದಿನ ರಂಪಾಟ ಮಾಡಿದ್ದು, ಗೊತ್ತಿರುವ ವಿಚಾರ, ಕೊನೆಗೆ ಮಹಿಳೆಯರಿಗೆ ಪ್ರಾಧನ್ಯ ನೀಡಿಲ್ಲ ಎಂಬ ಅಪವಾದದಿಂದ ತಪ್ಪಿಸಿಕೊಳ್ಳಲು ನಂದಿನಿ ಗೌಡ ಅವರ್ಗೆ ಟಿಕೆಟ್ ನೀಡಲಾಗಿದೆ ಎಂದು ಮಾಹಿತಿಯಿದೆ. ಒಟ್ಟಿನಲ್ಲಿ, ಈ ಹಿಂದೆ ಡಿಕೆ ಶಿವಕುಮಾರ್ ಅವರು ಮಾಡಿದ್ದ ಪ್ರಯೋಗವನ್ನು ಈಗ ಅವರ ಮೇಲೆ ಸಿಪಿವೈ ಪ್ರಯೋಗಿಸುತ್ತಿದ್ದಾರೆ.

ಈ ಹಿಂದೆ ಪ್ರಬಲ ರಾಜಕೀಯ ಶಕ್ತಿ ಎಚ್. ಡಿ ದೇವೇಗೌಡರ ವಿರುದ್ಧ ತೇಜಸ್ವಿನಿ ಗೌಡ ಅವರನ್ನು ಕಣಕ್ಕಿಳಿಸಿ ಯಶಸ್ಸು ಸಾಧಿಸಿದಂತೆ, ಈ ಬಾರಿ ಸಿಪಿವೈ ಅವರು ಡಿಕೆಶಿ ವಿರುದ್ಧ ನಂದಿನಿ ಗೌಡ ಅವರನ್ನು ಕಣಕ್ಕಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+