ಬಾಲಕಿ ಅತ್ಯಾಚಾರ- ಕೊಲೆ ಆರೋಪಿಗೆ ರಾಮನಗರ ಕೋರ್ಟ್ ಗಲ್ಲು ಶಿಕ್ಷೆ

ರಾಮನಗರ, ಜನವರಿ 24: ಜಿಲ್ಲೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಗಲ್ಲು ಶಿಕ್ಷೆ ಪ್ರಕಟಿಸಲಾಗಿದೆ. 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಪಿ ಸಲೀಂಗೆ 3ನೇ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಗೋಪಾಲಕೃಷ್ಣ ರೈ ಗಲ್ಲು ಶಿಕ್ಷೆ ವಿಧಿಸಿದ್ದಾರೆ.

2012ರ ಆಗಸ್ಟ್ 15ರಂದು ತಾವರೇಕೆರೆಯಲ್ಲಿ 9 ವರ್ಷದ ಬಾಲಕಿ ಹೀನಾ ಕೌಸರ್ ನನ್ನು ಬೀಡಿ ತರಲು ಅಂಗಡಿಗೆ ಕಳಿಸಿದ್ದಾಗ ನೆರೆಮನೆಯ ಸಲೀಂ (39) ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ 23ಕ್ಕೂ ಹೆಚ್ಚು ಮಂದಿ ಆರೋಪಿ ವಿರುದ್ಧ ಸಾಕ್ಷ್ಯ ನುಡಿದಿದ್ದರು.

ವಿಧಿ ವಿಜ್ಞಾನ ವರದಿ ಕೂಡ ಕೃತ್ಯವನ್ನು ಆರೋಪವನ್ನು ಸಾಬೀತು ಪಡಿಸುವಂತಿತ್ತು. ಅತ್ಯಾಚಾರ ಅಪರಾಧಕ್ಕೆ 10 ವರ್ಷ ಕಾರಾಗೃಹ ಶಿಕ್ಷೆ- 50 ಸಾವಿರ ರುಪಾಯಿ ದಂಡ ಹಾಗೂ ಬಾಲಕಿಯನ್ನು ಕೊಲೆ ಮಾಡಿದ್ದಕ್ಕಾಗಿ ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

Death sentence to rape, murder accused by Ramanagar district sessions court

ಕೋರ್ಟ್ ನಿಂದ ಹೊರಬಂದ ಆರೋಪಿ ಸಲೀಂ ಎರಡು ಬಾರಿ ಮಾಧ್ಯಮದವರು ಹಾಗೂ ವಕೀಲರ ಮೇಲೆ ಕಲ್ಲು ತೂರಿ, ತನ್ನ ಸಿಟ್ಟು ಹೊರಹಾಕಿದ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರ ರೈಫಲ್ ಕಿತ್ತುಕೊಳ್ಳಲು ವಿಫಲ ಯತ್ನ ನಡೆಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+