ಬೆಳ್ಳಂಬೆಳಿಗ್ಗೆ ರಾಮನಗರದಲ್ಲಿ ಬಾಂಬ್ ಭೀತಿ; ಪಟಾಕಿ ಕಂಡು ಬಾಂಬ್ ಎಂದುಕೊಂಡ ಜನ
ರಾಮನಗರ, ಸೆಪ್ಟೆಂಬರ್ 16: ರಾಮನಗರದಲ್ಲಿ ಬೆಳ್ಳಂಬೆಳಿಗ್ಗೆ ಮತ್ತೆ ಬಾಂಬ್ ವದಂತಿ ಕೆಲ ಕಾಲ ಆತಂಕ ಸೃಷ್ಟಿಸಿತ್ತು. ರಾಮನಗರದ ರಾಮ್ ಗಡ್ ಹೋಟೆಲ್ ಬಳಿ ಬಾಂಬ್ ಇಡಲಾಗಿದೆ ಎಂಬ ವದಂತಿ ಹರಿದಾಡಿದ್ದು, ಸಾರ್ವಜನಿಕರು ಆತಂಕಗೊಂಡಿದ್ದರು.
ಸ್ಥಳಕ್ಕೆ ಐಜೂರು ಪೊಲೀಸರ ಭೇಟಿ ನೀಡಿದ್ದರು. ಶ್ವಾನದಳದ ಸಿಬ್ಬಂದಿ ಪರಿಶೀಲನೆ ನಡೆಸಿದರು. ಆಗ ಅವು ಆಟಂ ಬಾಂಬ್ ಪಟಾಕಿಗಳು ಎಂದು ತಿಳಿದುಬಂದಿದೆ.

ರಾತ್ರಿ ಗಣೇಶ ವಿಸರ್ಜನೆ ಸಮಯದಲ್ಲಿ ಈ ಪಟಾಕಿಗಳು ಬಿದ್ದಿದ್ದು, ಬೆಳಿಗ್ಗೆ ಪಟಾಕಿ ನೋಡಿ ಬಾಂಬ್ ಎಂದು ಜನರು ಆತಂಕಕ್ಕೆ ಒಳಗಾಗಿದ್ದರು. ಪೊಲೀಸ್ ಪರಿಶೀಲನೆ ಬಳಿಕ ಅದು ಪಟಾಕಿ ಎಂದು ತಿಳಿದುಬಂದು ಜನರು ನಿರಾಳರಾದರು.
ಯಾವುದೇ ಬಾಂಬ್ ಪತ್ತೆಯಾಗಿಲ್ಲ, ಅದು ಪಟಾಕಿ ಎಂದು ಎಸ್ಪಿ ಅನೂಪ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications