ರಾಮನಗರ; ಆತಂಕ ತಂದ ಕೋವಿಡ್ ಸೋಂಕಿತರ ನಾಪತ್ತೆ

ರಾಮನಗರ, ಏಪ್ರಿಲ್ 21; ಬೆಂಗಳೂರಿನ ಸೆರಗಿನಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಅರ್ಭಟಿಸುತ್ತಿದೆ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 8,804ಕ್ಕೆ ಏರಿಕೆಯಾಗಿದೆ. ಈ ನಡುವೆ ಸೋಂಕಿತರು ತಪ್ಪು ವಿಳಾಸ ನೀಡಿ ಜಿಲ್ಲಾಡಳಿತಕ್ಕೆ ಆತಂಕ ಉಂಟುಮಾಡಿದ್ದಾರೆ.

ಬೆಂಗಳೂರು ಮಾದರಿಯಲ್ಲೇ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಪ್ರತಿ ದಿನ ಹೆಚ್ಚಾಗುತ್ತಿದೆ. ಕಳೆದ ಐದು ದಿನಗಳಿಂದ ಪ್ರತಿ ದಿನ ಸುಮಾರು 100ಕ್ಕೂ ಹೆಚ್ಚು ಹೊಸ ಕೋವಿಡ್ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗುತ್ತಿದೆ.

ಇದರ ನಡುವೆ ಸುಮಾರು 40 ಮಂದಿ ಕೋವಿಡ್ ಸೋಂಕಿತರು ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಜಿಲ್ಲಾಡಳಿತವನ್ನು ಆತಂಕಕ್ಕೆ ತಳ್ಳಿದ್ದಾರೆ. ಇವರು ಜಿಲ್ಲೆಯನ್ನು ಬಿಟ್ಟು ಹೋಗಿರುವ ಸಾಧ್ಯತೆಯೂ ಇದೆ.

Around 40 COVID Patients Missing In Ramanagara

ಜಿಲ್ಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಶ್ರಮಪಡುತ್ತಿದೆ. ಆದರೆ ಸೋಂಕಿತರು ತಪ್ಪು ವಿಳಾಸ ಕೊಟ್ಟಿದ್ದು ಮತ್ತು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಪತ್ತೆ ಹಚ್ಚುವುದು ಸವಾಲಾಗಿದೆ.

ನಾಪತ್ತೆಯಾಗಿರುವ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಪೊಲೀಸ್ ಇಲಾಖೆ ಸಹಾಯ ಕೋರಿದೆ. ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಪೋಲಿಸ್ ಇಲಾಖೆ ನಾಪತ್ತೆಯಾಗಿರುವ ಸೋಂಕಿತರ ಟ್ರಾಕಿಂಗ್‌ಗೆ ಮುಂದಾಗಿದೆ.

ಕೋವಿಡ್ ತಪಾಸಣೆ ಸಮಯದಲ್ಲಿ ಕೆಲವರು ತಪ್ಪು ವಿಳಾಸ ನೀಡಿರುವುದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+