ರಾಯಚೂರು: ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಆಧಾರ್‌ ತಿದ್ದುಪಡಿಗೆ ಗ್ಯಾರಂಟಿ ಅಡ್ಡಿ

ರಾಯಚೂರು, ಆಗಸ್ಟ್‌ 08: ರಾಯಚೂರು ಜಿಲ್ಲೆಯ ನಾನಾ ಶಾಲೆಗಳ ಮುಖ್ಯಶಿಕ್ಷಕರು ಪಾಠ ಮಾಡುವ ಜೊತೆಗೆ ವಿದ್ಯಾರ್ಥಿಗಳ ಆಧಾರ್‌ ಜೋಡಣೆ ಹಾಗೂ ತಿದ್ದುಪಡಿ ಕೂಡ ಮಾಡಬೇಕಾಗಿದೆ. ಇದು ಒಂದೆಡೆಯಾದರೆ, ಇನ್ನೊಂದೆಡೆ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಜನ ಮುಗಿಬೀಳುತ್ತಿದ್ದು, ಇದು ಮಕ್ಕಳ ಆಧಾರ್‌ ತಿದ್ದುಪಡಿಗೆ ಅಡಚಣೆಯಾಗಿದೆ.

ವಿದ್ಯಾರ್ಥಿಗಳ ಆಧಾರ್‌ ಜೋಡಣೆ, ತಿದ್ದುಪಡಿ ಭಾರ ಮುಖ್ಯಶಿಕ್ಷಕರ ಹೆಗಲೇರಿದೆ. ಬಿಸಿಯೂಟಕ್ಕೆ ತರಕಾರಿ, ಸಭೆ, ಸಮಾರಂಭ, ಜಯಂತಿಗಳಿಗೆ ಹೂ ಹಣ್ಣು, ಭಾವಚಿತ್ರ, ಪೂಜಾ ಸಾಮಗ್ರಿ ತರುವುದು ಹೀಗೆ ನಾನಾ ಕೆಲಸಗಳಿಂದ ಒತ್ತಡ ಹೆಚ್ಚುತ್ತಿದೆ.

students-aadhaar-cards

ಜಿಲ್ಲೆಯಲ್ಲಿ1,517 ಸರಕಾರಿ ಪ್ರಾಥಮಿಕ ಶಾಲೆ, 213 ಪ್ರೌಢ ಶಾಲೆ ಸೇರಿ ಒಟ್ಟು 1,765 ಶಾಲೆಗಳಿದ್ದು, 1ರಿಂದ 10ನೇ ತರಗತಿಯವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಎಸ್‌ಟಿಎಸ್‌ ತಂತ್ರಾಂಶದಲ್ಲಿಈ ಎಲ್ಲವಿದ್ಯಾರ್ಥಿಗಳ ವಿವರ ದಾಖಲಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚಿಸಿದ್ದರಿಂದ ಶಿಕ್ಷಕರು ಬವಣೆ ಪಡುವಂತಾಗಿದೆ.

ಎಸ್‌ಟಿಎಸ್‌ ತಂತ್ರಾಂಶದಲ್ಲಿವಿದ್ಯಾರ್ಥಿ ಹೆಸರು, ತಂದೆ ಹೆಸರು, ಜನ್ಮ ದಿನಾಂಕ, ವಯಸ್ಸು, ಆಧಾರ್‌ ಸಂಖ್ಯೆ ಸೇರಿ ನಾನಾ ವಿವರ ದಾಖಲಿಸಬೇಕಿದೆ. ಆದರೆ, ಜಿಲ್ಲೆಯಲ್ಲಿಸುಮಾರು 17 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಆಧಾರ್‌ನಲ್ಲಿಅನೇಕ ತಪ್ಪುಗಳಿದ್ದು ತಿದ್ದುಪಡಿಗೆ ಅಂಚೆ ಇಲಾಖೆ, ಬ್ಯಾಂಕ್‌ ಮತ್ತು ಸೇವಾ ಕೇಂದ್ರಗಳ ಬಾಗಿಲು ತಟ್ಟುವಂತಾಗಿದೆ.

ಜಿಲ್ಲೆಯ ನಾನಾ ಅಂಚೆ, ಬ್ಯಾಂಕ್‌, ಸೇವಾ ಕೇಂದ್ರಗಳಲ್ಲಿವಿದ್ಯಾರ್ಥಿಗಳ ಆಧಾರ್‌ ತಿದ್ದುಪಡಿ ಮಾಡಿಸಲು ಮುಂದಾದ ಮುಖ್ಯ ಶಿಕ್ಷಕರಿಗೆ ರಾಜ್ಯ ಸರಕಾರದ ಐದು ಗ್ಯಾರಂಟಿ ಫಲಾನುಭವಿಗಳ ಸರತಿ ಸಾಲು ಅಡ್ಡಿಯಾಗಿದೆ. ಯಾವುದೇ ಅಂಚೆ ಕಚೇರಿ, ಸೇವಾ ಕೇಂದ್ರಕ್ಕೆ ಮಕ್ಕಳ ಕರೆದೊಯ್ದರೆ ಸಂಜೆಯಾದರೂ ಪಾಳಿ ಬರುತ್ತಿಲ್ಲ. ಅಲ್ಲದೆ, ಈಗ ಬರಬೇಡಿ, ವಿದ್ಯಾರ್ಥಿಗಳ ಆಧಾರ್‌ ತಿದ್ದುಪಡಿ ಮಾಡಲು ಆಗದು. ಮೂರು ಗ್ಯಾರಂಟಿಗಳ ಅರ್ಜಿ, ಆಧಾರ್‌ ಜೋಡಣೆಗೆ ಸಮಯವಿಲ್ಲ ಎಂದು ಹೇಳುತ್ತಿದ್ದು, ಇದರಿಂದ ಮೇಲಧಿಕಾರಿಗಳ ಆಕ್ರೋಶಕ್ಕೆ ಮುಖ್ಯಶಿಕ್ಷಕರು ಗುರಿಯಾಗುವಂತಾಗಿದೆ.

ಈ ಬಗ್ಗೆ ರಾಯಚೂರು ಡಿಡಿಪಿಐ ವೃಷಭೇಂದ್ರಯ್ಯ ಸ್ವಾಮಿ ಮಾತನಾಡಿದ್ದು, 'ಮಕ್ಕಳ ಆಧಾರ್‌ ತಿದ್ದುಪಡಿಗೆ ಸಂಬಂಧಿಸಿದಂತೆ ಜಿಲ್ಲೆಯ ನಾನಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮಾಹಿತಿ ಪಡೆಯಲಾಗುವುದು. ಅಲ್ಲದೆ, ಪರ್ಯಾಯ ವ್ಯವಸ್ಥೆಗೆ ಪಾಲಕರಿಗೆ ತಿಳಿಸಲಾಗುವುದು' ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+