ಮಂತ್ರಾಲಯದಲ್ಲಿ ಹರಿಪ್ರಿಯಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ
ಮಂತ್ರಾಲಯ, ಆಗಸ್ಟ್.09: ಬುಧವಾರ ರಾತ್ರಿ ನಟಿ ಹರಿಪ್ರಿಯಾ ರಾಘವೇಂದ್ರ ಸ್ವಾಮಿ ದರ್ಶನಕ್ಕೆ ಮಂತ್ರಾಲಯಕ್ಕೆ ಆಗಮಿಸಿದ್ದು, ಹರಿಪ್ರಿಯಾ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಜನ ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ.
ಬೆಳಗ್ಗೆ ಶ್ರೀ ರಾಘವೇಂದ್ರ ಸ್ವಾಮಿ ದರ್ಶನ ಪಡೆದ ಹರಿಪ್ರಿಯಾ, ದೇವಸ್ಥಾನದ ಆವರಣದಲ್ಲಿ ಪ್ರದಕ್ಷಿಣೆ ಹಾಕುವಾಗ ಜನ ಸೆಲ್ಫಿ ತೆಗೆಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕುಟುಂಬ ಸಮೇತ ಹರಿಪ್ರಿಯಾ ಮಂತ್ರಾಲಯಕ್ಕೆ ಆಗಮಿಸಿದ್ದಾರೆ.
ಹಳದಿ ಬಣ್ಣದ ಸೀರೆ ತೊಟ್ಟು, ಸಾಂಪ್ರದಾಯಿಕ ಗೆಟ್ ಅಪ್ ನಲ್ಲಿ ಕಂಗೊಳಿಸುತ್ತಿರುವ ಹರಿಪ್ರಿಯಾ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಯುವಕರಷ್ಟೇ ಅಲ್ಲ, ಮಹಿಳೆಯರು ಸಹ ಸರದಿ ಸಾಲಿನಲ್ಲಿ ನಿಂತು ಹರಿಪ್ರಿಯಾ ಜೊತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ.

ಸಿನಿಮಾ ಶೂಟಿಂಗ್ ಗಳಲ್ಲಿ ಬ್ಯೂಸಿಯಾಗಿದ್ದರೂ ಇತ್ತೀಚೆಗೆ ಹರಿಪ್ರಿಯಾ ಬೆಂಗಳೂರಿನ ಆರ್ ಆರ್ ನಗರದಲ್ಲಿ ಸಂಜೆ ವೇಳೆ ಮಖಕ್ಕೆ ಬಟ್ಟೆ ಕಟ್ಟಿಕೊಂಡು ಸೈಕ್ಲಿಂಗ್ ಮಾಡಿದ್ದರು. ತಾವು ಸಿಟಿ ರೌಂಡ್ ಹೊಡೆದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಕೂಡ ಮಾಡಿದ್ದರು.
ಫಿಟ್ ನೆಸ್ ಬಗ್ಗೆ ಕಾಳಜಿ ಹೊಂದಿರುವ ಹರಿಪ್ರಿಯಾ ಜಿಮ್ ಗೆ ಹೋಗುವುದಲ್ಲದೇ ಆಗಾಗ ಸೈಕ್ಲಿಂಗ್, ಬ್ಯಾಡ್ಮಿಟನ್ ಕೂಡ ಮಾಡುತ್ತಾರಂತೆ.












Click it and Unblock the Notifications